ನಾನಂತೂ ತುಕಡೆ ಗ್ಯಾಂಗ್ ಜೊತೆ ನಿಲ್ಲಲ್ಲ: ದೀಪಿಕಾ ಜೆಎನ್ ಯು ಭೇಟಿ ಬಗ್ಗೆ ಕಂಗನಾ ಪ್ರತಿಕ್ರಿಯೆ

ಜೆಎನ್​ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ.

Published: 17th January 2020 01:29 PM  |   Last Updated: 17th January 2020 02:07 PM   |  A+A-


Deepika and kangana

ದೀಪಿಕಾ- ಕಂಗನಾ

Posted By : Shilpa D
Source : Online Desk

ನವದೆಹಲಿ: ಜೆಎನ್​ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ.

ದೀಪಿಕಾ ಹೋಗಿದ್ದು ಅವರ ವೈಯಕ್ತಿಕ ವಿಚಾರ.ಆದರೆ, ನಾನಂತೂ ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ. ಸ್ಪಾಟ್ ಬೋಯೆ ಎಂಬ ಜಾಲತಾಣದ ಜೊತೆಗಿನ ಸಂದರ್ಶನದಲ್ಲಿ ಕಂಗನಾ ಅವರು, ದೇಶ ಒಡೆಯುವವರನ್ನು ತಾನು ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ಧಾರೆ.

ಏನೇ ಆದರೂ ನಾನು ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ. ಈ ದೇಶವನ್ನು ವಿಭಜಿಸುವ ಯಾರನ್ನೇ ಆದರೂ ನಾನು ಬೆಂಬಲಿಸುವುದಿಲ್ಲ. ಯೋಧ ಸತ್ತಾಗ ಸಂಭ್ರಮಿಸುವ ಜನರಿಗೆ ಅಧಿಕಾರ ಸಿಗಬೇಕೆಂದು ನಾನು ಇಚ್ಛಿಸುವುದಿಲ್ಲ. ಅವರಲ್ಲಿ ಗುರುತಿಸಿಕೊಳ್ಳಲು ಬಯಸುವುದಿಲ್ಲ” ಎಂದು ಬಾಲಿವುಡ್ ಸ್ಟಾರ್ ನಟಿ ಕಂಗನಾ ತಿಳಿಸಿದ್ಧಾರೆ.

 ದೀಪಿಕಾ ವೈಯಕ್ತಿಕ ನಿಲುವಿನ ಬಗ್ಗೆ ತಾನು ಮಾತನಾಡುವುದು ಸರಿಯಾಗದು. ನನಗೆ ಏನು ಬೇಕು ಎಂದು ನಾನು ಹೇಳಬಲ್ಲೆ. ಆಕೆ ಏನು ಮಾಡಬೇಕೆಂದು ನಾನು ಹೇಳುವುದಿಲ್ಲ ಎಂದಿದ್ಧಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp