'ಪಾಯ್ಸನ್ ಸೀಸನ್ 2' ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ರಿಹಾನ್ಶಿ ಗೌಡ

ಕನ್ನಡ ಟೆಲಿಸೀರಿಯಲ್‌ಗಳೊಂದಿಗೆ ನಟನಾಕ್ಷೇತ್ರಕ್ಕೆ ಕಾಲಿಟ್ಟ ಹಾಗೂ ಕಟ್ಟುಕಥೆ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ರಿಹಾನ್ಶಿ ಗೌಡ ಈಗ ಡಿಜಿಟಲ್ ಜಗತ್ತಿಗೆ ಕಾಲಿಡುತ್ತಿದ್ದಾರೆ. ಪಾಯ್ಸನ್ ಸೀಸನ್ 2 ಎಂಬ ವೆಬ್ ಸರಣಿಯಲ್ಲಿ ನಟಿ ಪಾತ್ರವಹಿಸುತ್ತಿದ್ದಾರೆ.
ರಿಹಾನ್ಶಿ ಗೌಡ

ಬಾಂಬೆ ಮೀಡಿಯಾ ವರ್ಕ್ಸ್ ಮತ್ತು ಪನೋರಮಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಚಿಸಲಾದ ವಿಶಾಲ್ ಪಾಂಡ್ಯ ನಿರ್ದೇಶಿಸಿದ ರಿವೇಂಜ್ ಡ್ರಾಮಾದಲ್ಲಿ ಅಫ್ತಾಬ್ ಶಿವದಾಸೈ ರಾಹುಲ್ ದೇವ್, ತಾಹೆರ್ ಶಬ್ಬೀರ್, ರಾಯ್ ಲಕ್ಷ್ಮಿ, ಪೂಜಾ ಚೋಪ್ರಾ ಮತ್ತು ಗೌತಮ್ ಗುಲಾಟಿ  ಮೊದಲಾದವರೊಡನೆ ರಿಹಾನ್ಶಿ ತೆರೆ ಹಂಚಿಕೊಂಡಿದ್ದಾರೆ. "ಹರ ಹರ ಮಹಾದೇವ", "ಮಹಾಕಾಳಿ""ಶನಿ" ಧಾರಾವಾಹಿಗಳೂ ಸೇರಿ ತಮಿಳಿನ "ಕಡುವಾಲ್ ಮುರುಗನ್", "ವಿಷ್ಣು ದಶಾವತಾರ"ದಲ್ಲಿ ಅಭಿನಯಿಸಿರುವ ಈಕೆ ಇದೀಗ ಈ ಸೀರೀಸ್ ಮೂಲಕ ಹಿಂದಿಯಲ್ಲಿ ಹೆಸರು ಮಾಡಲು ಮುಂದಾಗಿದ್ದಾರೆ.

ಆಕೆಯ ಕನಸು ಅವಳನು ಮುಂಬೈಗೆ ಕರೆತಂದಿದೆ. ಇದೊಂದು ದೊಡ್ಡ ಅವಕಾಶ ಎನ್ನುವ ರಿಹಾನ್ಶಿ ಜನವರಿ 27 ರಿಂದ ವೆಬ್ ಸರಣಿಯ ಚಿತ್ರೀಕರಣ ಪ್ರಾರಂಭವಾಗಿದೆ. ಸರಣಿಯನ್ನು ಝೀ  5 ಎಂಟರ್‌ಟೈನ್‌ಮೆಂಟ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ರಿಹಾನ್ಶಿ ಅವರು ಇದೀಗ ರೋಜರ್ ನಾರಾಯಣ್ ಅಭಿನಯದ ಕಾರ್ಕಿ ಎಂಬ ಕನ್ನಡ ಚಿತ್ರವೊಂದರಲ್ಲಿಯೂ ನಟಿಸುವುದರಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com