ಮಯೂರ ರಾಘವೇಂದ್ರ ಚೊಚ್ಚಲ ಚಿತ್ರಕ್ಕೆ ಬಂತು ಡಿಮ್ಯಾಂಂಡ್: ತಮಿಳು, ತೆಲುಗು ಸೇರಿ 4 ಭಾಷೆಗಳಲ್ಲಿ 'ಕನ್ನಡ್ ಗೊತ್ತಿಲ್ಲ'

ಅಮೆಜಾನ್ ಪ್ರೈಮ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದಿರುವ  ಚಿತ್ರ ನಿರ್ದೇಶಕನಾಗಿ ಬದಲಾದ ರೇಡಿಯೋ ಜಾಕಿ ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್ ಗೊತ್ತಿಲ್ಲ ಈಗ ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಕನ್ನಡ್ ಗೊತ್ತಿಲ್ಲ
ಕನ್ನಡ್ ಗೊತ್ತಿಲ್ಲ

ಅಮೆಜಾನ್ ಪ್ರೈಮ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದಿರುವ  ಚಿತ್ರ ನಿರ್ದೇಶಕನಾಗಿ ಬದಲಾದ ರೇಡಿಯೋ ಜಾಕಿ ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್ ಗೊತ್ತಿಲ್ಲ ಈಗ ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. “ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಕಾರಾತ್ಮಕ ಪ್ರತಿಕ್ರುಯೆ ಕಂಡಿದ್ದು ಈ ಯಶಸ್ಸಿನ ನಂತರ, ಸಂಜಯ್ ಲಾಲ್ವಾನಿ ಪ್ರೊಡಕ್ಷನ್ಸ್ ಈ ಚಿತ್ರದ ಡಬ್ಬಿಂಗ್ ಹಕ್ಕನ್ನು ಖರೀದಿಸಿದೆ. ಚೊತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ."

ಈ ಥ್ರಿಲ್ಲರ್ ಕಥಾನಕವನ್ನು ಕುಮಾರ ಕಠೀರವ ಒಡೆತನದ ರಾಮ ರಥನ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ, ಸಿಹಿ ಕಹಿ ಚಂದ್ರು ಸಹ ಇದ್ದಾರೆ. "ಕನ್ನಡ್ ಗೊತ್ತಿಲ್ಲ ಚಿತ್ರ ಇತರೆ ಭಾಷೆಗಳಲ್ಲಿ ಡಬ್ ಮಾಡಬಹುದಾಗಿದೆ ಎಂದು ನಿಮಾಣ ಸಂಸ್ಥೆ ಹೇಳಿದಾಗ ನನಗೆ ಅಚ್ಚರಿಯಾಗಿತ್ತು, ಇದೀಗ ಅವರು ಥಿಯೇಟರ್ ಹಾಗೂ  ಒಟಿಟಿ ಬಿಡುಗಡೆಯ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ, ಮತ್ತು ಅವರು ಚಿತ್ರವನ್ನು ಎಲ್ಲಿ ಬಿಡುಗಡೆ ಮಾಡಬೇಕೆಂದು ಮುಂದೆ ನಿರ್ಧರಿಸಲಿದ್ದಾರೆ. 

"ಅದಾಗ್ಯೂ , ನನ್ನ ಈ ಮೊದಲ ಚಿತ್ರವು ಅನೇಕ ಭಾಷೆಗಳ ಪ್ರೇಕ್ಷಕರನ್ನು ತಲುಪುತ್ತಿದೆ ಎನ್ನುವುದು ನನಗೆ ಖುಷಿಯ ಸಂಗತಿ, " ಮಯೂರ ರಾಘವೇಂದ್ರ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com