'ಲಾ' ನನಗೆ ಅತ್ಯುತ್ತಮ ಪ್ರಾರಂಭವನ್ನು ನೀಡಲಿದೆ: ರಾಗಿಣಿ ಪ್ರಜ್ವಲ್ ದೇವರಾಜ್

ರಘು ಸಮರ್ಥ್ ನಿರ್ದೇಶನದ "ಲಾ: ಚೊತ್ರದ ಮೂಲಕ ರಾಗಿಣಿ ಪ್ರಜ್ವಲ್ ಚೊಚ್ಚಲ ಬಾರಿಗೆ ನಾಯಕಿ ನಟಿಯಾಗಿ ತೆರೆಮೇಲೆ ಬರಲಿದ್ದಾರೆ. ಆದರೆ ಈ ನಟಿಗೆ ಯಾವ ಪರಿಚಯದ ಅಗತ್ಯವಿಲ್ಲ. ಅವರು ಈಗಾಗಲೇ ವೃತ್ತಿಪರ ಡ್ಯಾನ್ಸರ್,  ಫಿಟ್ನೆಸ್ ಎಂಥೂಸಿಯಾಸ್ಟಿ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ನಾನು ಒಂದು ವಿಶಿಷ್ಟವಾದ ತಂಜಾವೂರು ಕುಟುಂಬದಿಂದ ಬಂದಿದ್ದೇನೆ, ಅಲ್ಲಿ ಶಾಸ್ತ್ರೀಯ ಕಲೆ ಜತೆಗೆ
ರಾಗಿಣಿ ಪ್ರಜ್ವಲ್
ರಾಗಿಣಿ ಪ್ರಜ್ವಲ್

ರಘು ಸಮರ್ಥ್ ನಿರ್ದೇಶನದ "ಲಾ: ಚೊತ್ರದ ಮೂಲಕ ರಾಗಿಣಿ ಪ್ರಜ್ವಲ್ ಚೊಚ್ಚಲ ಬಾರಿಗೆ ನಾಯಕಿ ನಟಿಯಾಗಿ ತೆರೆಮೇಲೆ ಬರಲಿದ್ದಾರೆ. ಆದರೆ ಈ ನಟಿಗೆ ಯಾವ ಪರಿಚಯದ ಅಗತ್ಯವಿಲ್ಲ. ಅವರು ಈಗಾಗಲೇ ವೃತ್ತಿಪರ ಡ್ಯಾನ್ಸರ್,  ಫಿಟ್ನೆಸ್ ಎಂಥೂಸಿಯಾಸ್ಟಿ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ನಾನು ಒಂದು ವಿಶಿಷ್ಟವಾದ ತಂಜಾವೂರು ಕುಟುಂಬದಿಂದ ಬಂದಿದ್ದೇನೆ, ಅಲ್ಲಿ ಶಾಸ್ತ್ರೀಯ ಕಲೆ ಜತೆಗೆ ಎಲ್ಲವನ್ನೂ ಪಡೆದಿದ್ದೇನೆ. . ನನ್ನ ತಾಯಿಯ ಪ್ರಕಾರ, ನಾನು ಅವಳ ಗರ್ಭದಲ್ಲಿದ್ದಾಗ ನನ್ನ ನೃತ್ಯದ ಪ್ರಾರಂಭವಾಗಿತ್ತು. ಏಕೆಂದರೆ ಮಾಧುರಿ ದೀಕ್ಷಿತ್ ಅವರ ಹಾಡು ಏಕ್ ದೋ  ತೀನ್ ಗಾಗಿ ನನ್ನಿಂದ ಆ ಕಿಕ್  ಅನ್ನು ಆಕೆ ಆಗಾಗ ಗ್ರಹಿಸುತ್ತಿದ್ದಳು. ಹಾಗಾಗಿ ನಾನು ಡ್ಯಾನ್ಸರ್ ಆಗಲಿದ್ದೇನೆಂದು ಆಕೆ ಆಗಲೇ ಅರಿತಿದ್ದಳು.

"ನಾನು 4 ನೇ ವಯಸ್ಸಿನಲ್ಲಿ  ಭರತನಾಟ್ಯದೊಂದಿಗೆ ಶಾಸ್ತ್ರೀಯ ನೃತ್ಯಾಭ್ಯಾಸ ಪ್ರಾರಂಭಿಸಿದೆ. ನಂತರ ಎಂಟು ವರ್ಷಗಳ ಕಾಲ ಶಿಯಾಮಕ್ ದಾವರ್ ಶಾಲೆಗೆ ಹೋದೆ. 1990 ರ ದಶಕದಲ್ಲಿ ಬೂಗೀ ವೂಗೀ ಕಾರ್ಯಕ್ರಮಕ್ಕಾಗಿ ನಾನು ಇಮ್ರಾನ್ ಸರ್ಧರಿಯಾ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದೆ.  ಈಗ ನಾನು ನನ್ನ ಗುರು ನಿರುಪಮಾ ರಾಜೇಂದ್ರ ಅವರೊಂದಿಗೆ 14 ವರ್ಷಗಳಿಂದ ಅಭ್ಯಾಸ ನಡೆಸಿದ್ದೇನೆ. ಇದೀಗ ಕಥಕ್ ಅಭ್ಯಾಸ ಕೂಡ ನಡೆಸಿದ್ದೇನೆ. ನಾನು ಎಂಟು ವರ್ಷಗಳ ಕಾಲ ಮಾಡೆಲಿಂಗ್‌ನಲ್ಲಿದ್ದೆ ”ಎಂದು ರಾಗಿಣಿ ಹೇಳುತ್ತಾರೆ

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ "ಲಾ" ಚಿತ್ರ ರಿಲೀಸ್ ಆಗುತ್ತಿದ್ದು ಈ ಲಾ ಡ್ರಾಮಾ ಮೇಕಿಂಗ್ ನಲ್ಲಿ ಎಲ್ಲವೂ ಅತ್ಯುತ್ತಮವಾಗಿ ಸೇರಿಕೊಂಡಿವೆ ಎಂದು ನಟಿ ಪತ್ರಿಕೆಗೆ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿದ ದ ಈ ಚಿತ್ರವು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗೋವಿಂದು, ನಿರ್ದೇಶಕ ರಘು ಸಮರ್ತ್ ಮತ್ತು ಸಾಕಷ್ಟು ಹಿರಿಯ ನಟರನ್ನು ಒಟ್ಟುಗೂಡಿಸುತ್ತದೆ. ರಾಗಿಣಿಗೆ, ಅವರ ಪತಿ - ನಟ ಪ್ರಜ್ವಲ್ ದೇವರಾಜ್ - ಮತ್ತು ಮಾವ, ಹಿರಿಯ ನಟ ದೇವರಾಜ್ ಮತ್ತು ಇಡೀ ಕುಟುಂಬವು  ಬೆಂಬಲವಾಗಿ ನಿಂತಿದೆ.

ರಾಗಿಣಿ ಈ ಹಿಂದೆ ವೃಷಭಪ್ರಿಯ ಎಂಬ ಕಿರುಚಿತ್ರದ ಭಾಗವಾಗಿದ್ದರು. ಆದರೆ "ಲಾ" ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ರಘು ಚಿತ್ರಕಥೆಯೊಂದಿಗೆ ಬಂದಾಗ, ಅದು ಪ್ರಜ್ವಲ್ ಮತ್ತು ನನಗೆ ಬಹಳ ಇಷ್ಟವಾಗಿತ್ತು. ನಿರ್ದೇಶಕರು ಸಾಮಾನ್ಯವಾಗಿ ಮನೆಯಲ್ಲಿರುವ ನಟರಿಗಾಗಿ  ಸ್ಕ್ರಿಪ್ಟ್‌ಗಳೊಂದಿಗೆ ಮನೆಗೆ ಬರುತ್ತಾರೆ, ಮತ್ತು ಈ ಬಾರಿ ಮಾತ್ರ ನನಗಾಗಿ ಕಥೆಯನ್ನು ತಂದಿದ್ದರು. ನನಗೆ ಅಚ್ಚರಿಯಾಗಿತ್ತು. ಏಕೆಂದರೆ ಮದುವೆಯಾದ ನಂತರ, ಅವರ ನಟನಾ ವೃತ್ತಿಯನ್ನು ಪ್ರಾರಂಭಿಸಲು ಯಾರೂ ಯೋಜಿಸುವುದಿಲ್ಲ.  ಆದರೆ ನಾನು ಇದಕ್ಕೆ ಸಿದ್ದವಾಗಿದ್ದೇನೆ. ನನಗೆ ಬೆಂಬಲ ಸಿಕ್ಕಿದೆ. 

"ನಾನು ಮೊದಲ ಚಿತ್ರದಲ್ಲೇ ವಕೀಲಳ ಪಾತ್ರ ನಿರ್ವಹಿಸುತ್ತಿರುವುದು ನನಗೆ ಸಾಕಷ್ಟು ಸವಾಲನ್ನು ಒಡ್ಡಿದೆ. ನಾನು ಶಾಸ್ತ್ರೀಯ ನರ್ತಕಿಯಾಗಿದ್ದು ಸಾಮಾನ್ಯವಾಗಿ ಹೆಚ್ಚು ಭಾವನಾತ್ಮಕ ಪಾತ್ರಗಳಿಗೆ ಒಪ್ಪುತ್ತೇನೆ.  ಆದರೆ ಈ ಪಾತ್ರವು ನನಗೆ ವಿರುದ್ಧವಾದ - ಭಾವನಾತ್ಮಕವಲ್ಲದೆ ಸೂಕ್ಷ್ಮ ನಟನೆ  ಬಯಸುವ ಪಾತ್ರವಾಗಿದೆ. ಚಿತ್ರೀಕರಣಕ್ಕೆ ಮುನ್ನ ನಡೆದ ಕೆಲ ಕಾರ್ಯಾಗಾರಗಳು ನನಗೆ ಸಹಕಾರಿಯಾಗಿದ್ದವು, ಪತಿ ಪ್ರಜ್ವಲ್ ಸಹ ನನಗೆ ಸಹಕಾರ ನೀಡಿದ್ದಾರೆ, ವರು ನನ್ನೊಂದಿಗೆ ಮೈಸೂರಿಗೆ ಬರಲು ಸಮಯ ತೆಗೆದುಕೊಂಡರು ಮತ್ತು ಸಂಭಾಷಣೆ ವಿತರಣೆಯಲ್ಲಿ ನನಗೆ ಸಹಾಯ ಮಾಡಲು ಸೆಟ್‌ಗಳಲ್ಲಿ ಹಾಜರಿದ್ದರು, ”ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ನಾಯಕಿಯಾಗಿ ತನ್ನ ಮೊದಲ ಚಿತ್ರವೇ ಒಟಿಟಿ ನಲ್ಲಿ ತೆರೆಕಾಣುತ್ತಿದೆ ಎಂದು ರಾಗಿಣಿಗೆ ಯಾವ ನೋವೂ ಇಲ್ಲ. “ಖಂಡಿತ, ನನ್ನ ಇಚ್ಚೆಯಂತೆ ನಾನು ದೊಡ್ಡ ಪರದೆ ಮೇಲೆ ನನ್ನನ್ನು ಕಾಣಲು ಬಯಸಿದ್ದೆ. ಆದರೆ ಅದೇ ಸಮಯದಲ್ಲಿ, "ಲಾ" ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮವಾಗಿ ಪ್ರತಿಕ್ರಿಯೆ ಬರಬಲ್ಲ ಚಿತ್ರವೆಂದೂ ನಾನು ಅರಿತುಕೊಂಡೆ. ನಾನು 200 ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರದ ಬಿಡುಗಡೆಯನ್ನು ಕಾಣಬಹುದು, ಈ ರೀತಿಯ ಪ್ರಾರಂಭವು ನಿಜವಾಗಿಯೂ ಒಳ್ಳೆಯದು, ”ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com