ಕೊರೋನಾ ಆತಂಕದ ನಡುವೆ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

ಕೊರೋನಾ ಸಾಂಕ್ರಾಮಿಕ ಪರಿಣಾಮ ಸಿನಿಮಾ ತಂತ್ರಜ್ಞರು, ನಟ ನಟಿಯರೆಲ್ಲ ಶೂಟಿಂಗ್ ಗಳನ್ನು ಬಂದ್ ಮಾಡಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಂಡಿದ್ದಾರೆ.
ಸುದೀಪ್
ಸುದೀಪ್

ಹೈದ್ರಾಬಾದ್: ಕೊರೋನಾ ಸಾಂಕ್ರಾಮಿಕ ಪರಿಣಾಮ ಸಿನಿಮಾ ತಂತ್ರಜ್ಞರು, ನಟ ನಟಿಯರೆಲ್ಲ ಶೂಟಿಂಗ್ ಗಳನ್ನು ಬಂದ್ ಮಾಡಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಂಡಿದ್ದಾರೆ.
 
ಸರ್ಕಾರ ಶೂಟಿಂಗ್ ಅನುಮತಿ ನೀಡಿದರೂ ಕೊರೋನಾ ಸಾಂಕ್ರಾಮಿಕದಿಂದ ಸೆಟ್ ಗಳಿಗೆ ತೆರಳಲು ಹೆದರುತ್ತಿದ್ದಾರೆ. ಆದರೆ ಕನ್ನಡ ಚಿತ್ರರಂಗದ ನಾಯಕ ನಟ ಕಿಚ್ಚ ಸುದೀಪ್, ತಾವು ಕೊರೋನಾಗೆ ಕೇರ್ ಮಾಡೋದಿಲ್ಲ ಎಂದು ಹೈದ್ರಾಬಾದ್ ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ತಮ್ಮ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ.

ಅತ್ಯಂತ ಕಡಿಮೆ ಸಿಬ್ಬಂದಿಯೊಂದಿಗೆ ಸರ್ಕಾರದ ಮಾರ್ಗಸೂಚಿಯೊಂದಿಗೆ ಫ್ಯಾಂಟಮ್ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಕಿಚ್ಚಾ ಸುದೀಪ್ ಹೇಳಿದ್ದಾರೆ. ಸಿನಿಮಾ ಪ್ರಾರಂಭಕ್ಕೆ ಸಂಬಂಧಿಸಿದ ಫೋಟೋಗಳನ್ನು ಕೂಡಾ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸೆಟ್ ನಲ್ಲಿರುವ ಪ್ರತಿಯೊಬ್ಬರು ಸಾಕಷ್ಟು ಜಾಗೃತೆ ವಹಿಸಿದ್ದಾರೆ ಎಂದು ವಿವರಿಸಿದ್ದಾರೆ.

ಸಿನಿಮಾಕ್ಕೆ ಸಂಬಂಧಿಸಿದ ಪ್ರತಿಯೊಬ್ಬರು ಕೂಡಾ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರಾಗಿದ್ದು, ಲಾಕ್ ಡೌನ್ ನಿಂದಾಗಿ ಕೆಲ ತಿಂಗಳಿನಿಂದ ಕೆಲಸ ಇಲ್ಲದೆ ಮನೆಗಳಲ್ಲಿ ಕುಳಿತಿರುವ ಸಿನಿಮಾ ಮಂದಿಗೆ ಉದ್ಯೋಗ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ಪ್ರತಿಯೊಂದು ಸುಗಮವಾಗಿ ಸಾಗಲೆಂದು ಆಶಿಸುತ್ತೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com