ಕೆಜಿಎಫ್ ಚಾಪ್ಟರ್-2: ಜುಲೈ 29ರಂದು 'ಅಧೀರ'ನಿಗೆ ಚಿತ್ರತಂಡ ವಿಶೇಷ ಗಿಫ್ಟ್!

ತೆಲುಗಿನ ಬಾಹುಬಲಿ ಚಿತ್ರದ ರೀತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುಮಾರು ಎರಡು ವರ್ಷ ಹಿಂದೆ ತೆರೆಕಂಡ ಕೆಜಿಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಹಿಟ್ ಆಯಿತು.
ಯಶ್, ಸಂಜಯ್ ದತ್(ಸಂಗ್ರಹ ಚಿತ್ರ)
ಯಶ್, ಸಂಜಯ್ ದತ್(ಸಂಗ್ರಹ ಚಿತ್ರ)

ಬೆಂಗಳೂರು:ತೆಲುಗಿನ ಬಾಹುಬಲಿ ಚಿತ್ರದ ರೀತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುಮಾರು ಎರಡು ವರ್ಷ ಹಿಂದೆ ತೆರೆಕಂಡ ಕೆಜಿಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಹಿಟ್ ಆಯಿತು.

ನಟ ಯಶ್ ಗೆ ರಾಷ್ಟ್ರಮಟ್ಟದಲ್ಲಿ ಗುರುತು, ಸ್ಥಾನಮಾನ ಸಿಕ್ಕಿದ್ದು ಸುಳ್ಳಲ್ಲ. ಇದೀಗ ಕೆಜಿಎಫ್ ಚಾಪ್ಟರ್ 2 ರೆಡಿಯಾಗುತ್ತಿದ್ದು ರಾಕಿಬಾಯ್ ಪಾತ್ರದ ಎದುರಿಗೆ ವಿಲನ್ ಪಾತ್ರದಲ್ಲಿ ಬಾಲಿವುಡ್ ನ 'ಖಳನಾಯಕ'ಸಂಜಯ್ ದತ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಮುಗಿದಿದೆ.

ಇದೇ ಜುಲೈ 29ರಂದು ಸಂಜಯ್ ದತ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷ ಉಡುಗೊರೆಯಾಗಿ ಅವರ ಅಧೀರ ಪಾತ್ರದ ಫಸ್ಟ್ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದ್ದು, ಅದನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಅಂದು ಬೆಳಗ್ಗೆ 10 ಗಂಟೆಗೆ ಅಧೀರ ಲುಕ್ ಬಿಡುಗಡೆಯಾಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಸಂಜಯ್ ದತ್ ಫ್ಯಾನ್ಸ್, ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಗೆ ಬರಲು ಕಾಯುತ್ತಿರುವ ಯಶ್ ಅಭಿಮಾನಿಗಳಿಗೆ ಒಂದೊಂದೇ ಸಿಹಿಸುದ್ದಿ ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com