ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ '777 ಚಾರ್ಲಿ' ತಂಡದಿಂದ ಸಿಕ್ತಿದೆ ವಿಶೇಷ ಗಿಫ್ಟ್!

777 ಚಾರ್ಲಿ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಜತೆಯಾಗಿರುವ  ಕಿರಣರಾಜ್ ನಟನ ಜನ್ಮದಿನ (ಜೂನ್ 6) ರಂದು ವಿಶೇಷ ವಿಡಿಯೋವೊಂದನ್ನು ರಿಲೀಸ್ ಮಾಡಲಿದ್ದಾರೆ.ಈ ವೀಡಿಯೋ ಮೂಲಕ ರಕ್ಷಿತ್ ಪಾತ್ರ ಹಾಗೂ ಮುಂದಿನ ಚಿತ್ರದ ಉದ್ದೇಶವನ್ನು ಬಿಚ್ಚಿಡಲಿದ್ದಾರೆ.

Published: 04th June 2020 11:42 AM  |   Last Updated: 04th June 2020 12:30 PM   |  A+A-


777 ಚಾರ್ಲಿ

Posted By : raghavendra
Source : The New Indian Express

777 ಚಾರ್ಲಿ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಜತೆಯಾಗಿರುವ ಕಿರಣರಾಜ್ ನಟನ ಜನ್ಮದಿನ (ಜೂನ್ 6) ರಂದು ವಿಶೇಷ ವಿಡಿಯೋವೊಂದನ್ನು ರಿಲೀಸ್ ಮಾಡಲಿದ್ದಾರೆ.ಈ ವೀಡಿಯೋ ಮೂಲಕ ರಕ್ಷಿತ್ ಪಾತ್ರ ಹಾಗೂ ಮುಂದಿನ ಚಿತ್ರದ ಉದ್ದೇಶವನ್ನು ಬಿಚ್ಚಿಡಲಿದ್ದಾರೆ.

ಪುಷ್ಕರ್ ಫಿಲ್ಮ್ಸ್, ರಕ್ಷಿತ್ ಶೆಟ್ಟಿ ಮತ್ತು ಜಿ ಎಸ್ ಗುಪ್ತಾ ಜಂಟಿಯಾಗಿ ಪರಮ್ವಾ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ 777 ಚಾರ್ಲಯನ್ನು ನಿರ್ಮಿಸುತ್ತಿದ್ದಾರೆ.  ಅವನೆ ಶ್ರೀಮನ್ನಾರಾಯಣ ನಂತರ, ಇದು ರಕ್ಷಿತ್ ಶೆಟ್ಟಿ ಅಭಿನಯದ ಮಹತ್ವದ ಚಿತ್ರವಾಗಿದೆ. 777 ಚಾರ್ಲಿ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಹ ತಯಾರಾಗಿತ್ತಿದೆ.

 ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಸಂಗೀತ ಶೃಂಗೇರಿ ಕೂಡ ಕಾಣಿಸಿಕೊಳ್ಳಲಿದ್ದು, ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಸೇರಿದಂತೆ 30 ದಿನಗಳ ಶೂಟಿಂಗ್ ಮಾತ್ರವೇ ಉಳಿದಿದೆ.ಈ ಮಧ್ಯೆ, ಶೂಟಿಂಗ್ ಮುಗಿದ ಭಾಗಗಳಿಗೆ ನಿರ್ದೇಶಕಪೋಸ್ಟ್-ಪ್ರೊಡಕ್ಷನ್ ಪೂರ್ಣಗೊಳಿಸುತ್ತಿದ್ದಾರೆ. 777 ಚಾರ್ಲಿಗೆ ನೋಬಿನ್ ಪಾಲ್ ಸಂಗೀತ, ಅರವಿಂದ ಕಶ್ಯಪ್ ಅವರ ಛಾಯಾಗ್ರಹಣವಿದೆ.  ಪ್ರತೀಕ್ ಶೆಟ್ಟಿ ಚಿತ್ರದ ಎಡಿಟಿಂಗ್ ಮಾಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಎಂಬ ಚಿತ್ರವನ್ನೂ ಸಹ ರಕ್ಷಿತ್ ಶೆಟ್ಟಿ ತಯಾರಿಸುತ್ತಿದ್ದು ಇದಾಗಲೇ ಆ ಚಿತ್ರದ ಪೋಸ್ಟರ್ ಕೂಡ ಬಂದಿದೆ. ಹೇಮಂತ್ ಎಂ ರಾವ್ ನಿರ್ದೇಶನದ ಈ ಚಿತ್ರ  ಪುಷ್ಕರ್ ಮಲ್ಲಿಕರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಜಂಟಿ ನಿರ್ಮಾಣದ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕೊಟ್ಟಿದ್ದರೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ನೆರವೇರಿಸಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp