ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ ನೆಟ್ಪ್ಲಿಕ್ಸ್ ನಲ್ಲಿ ಬಿಡುಗಡೆ

ಜಾನ್ಹವಿ ಕಪೂರ್ ನಟನೆಯ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 
ಗುಂಜಾನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ
ಗುಂಜಾನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಸಿನಿಮಾ

ಜಾನ್ಹವಿ ಕಪೂರ್ ನಟನೆಯ ಕರಣ್ ಜೋಹಾರ್ ನಿರ್ಮಾಣದ ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಸಾಮಾನ್ಯ ಸಿನಿಮಾಗಳಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 

1999 ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಾರ್ ಝೋನ್ ಗೆ ಯುದ್ಧ ವಿಮಾನವನ್ನು ಮುನ್ನಡೆಸಿದ್ದ ಮೊದಲ ಸೇನಾಧಿಕಾರಿ ಗುಂಜಾನ್ ಸಕ್ಸೇನಾರ ಕಥೆ ತೆರೆಗೆ ಬರುತ್ತಿದೆ. 

ಈ ಸಿನಿಮಾದ ಕುರಿತು ಟ್ವೀಟ್ ಮಾಡಿರುವ ಕರಣ್ ಜೋಹಾರ್, ವಿಡಿಯೋ ಹಂಚಿಕೊಂಡಿದ್ದು, ಅವರ ಪ್ರೇರಣಾದಾಯಿ ಪಯಣ ಇತಿಹಾಸ ನಿರ್ಮಿಸಿತು, ಇದು ಆಕೆಯ ಕಥೆ. ಗುಂಜಾನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಶೀಘ್ರವೇ ನೆಟ್ ಫ್ಲಿಕ್ಸ್ ನಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ. ಬಿಡುಗಡೆಯ ದಿನಾಂಕ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಜೀ ಸ್ಟುಡಿಯೋಸ್ ಹಾಗೂ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿರುವ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಹಾಗೂ ವಿನೀತ್ ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ಈ ಹಿಂದೆ ಏ.24 ಕ್ಕೆ ಬಿಡುಗಡೆಯಾಗಬೇಕಿತ್ತು.  

ಸಕ್ಸೇನಾ-ದಿ ಕಾರ್ಗಿಲ್ ಗರ್ಲ್ ಸಿನಿಮಾ ಡಿಜಿಟಲ್ ರಿಲೀಸ್ ಆಗುವುದರ ಬಗ್ಗೆ ವದಂತಿಗಳು ಹಬ್ಬಿದ್ದವು, ಅಮಿತಾಬ್ ಬಚ್ಚನ್ ಅಭಿನಯದ ಗುಲಾಬ್ ಸಿತಾಬೋ, ವಿದ್ಯಾಬಾಲನ್ ಅವರ ಶಕುಂತಲಾ ದೇವಿ ಜೀವನ ಚರಿತ್ರೆಯ ಸಿನಿಮಾಗಳು ಅಮೇಜ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬಿಡುಗಡೆಯಾಗಿದ್ದವು. ನೆಟ್ ಪ್ಲಿಕ್ಸ್ ಕೂಡ ಸಿನಿಮಾ ಬಿಡುಗಡೆಯ ಬಗ್ಗೆ ಟ್ವೀಟ್ ಮಾಡಿ ಘೋಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com