ZEE5 ನಲ್ಲಿ ನಿಮ್ಮ ನೆಚ್ಚಿನ 'ಜೊತೆ ಜೊತೆಯಲಿ', 'ಗಟ್ಟಿಮೇಳ' ಹಾಗೂ 'ಪಾರು' ಧಾರಾವಾಹಿಗಳು ಮತ್ತೆ ಆರಂಭ

ಕೊರೋನಾ ಲಾಕ್ ಡೌನ್ ಕಾರಣ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳೆಲ್ಲಾ ಇದೀಗ ಮತ್ತೆ ಪ್ರಸಾರ ಪ್ರಾರಂಭಿಸಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುವ "ಜೊತೆ ಜೊತೆಯಲಿ", "ಗಟ್ಟಿಮೇಳ"  ಹಾಗೂ "ಪಾರು" ಮೊದಲಾದ ಯಶಸ್ವಿ ಧಾರಾವಾಹಿಗಳು ಮತ್ತೆ ಟಿವಿಯಲ್ಲಿ ಮೂಡಿಬರುತ್ತಿರುವುದು ಪ್ರೇಕ್ಷಕರಿಗೆ ಅದರಲ್ಲಿಯೂ ಗೃಹಿಣಿಯರಿಗೆ ಸಂತಸ ತಂದಿದೆ.
ZEE5 ನಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳು ಮತ್ತೆ ಆರಂಭ
ZEE5 ನಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳು ಮತ್ತೆ ಆರಂಭ

ಕೊರೋನಾ ಲಾಕ್ ಡೌನ್ ಕಾರಣ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳೆಲ್ಲಾ ಇದೀಗ ಮತ್ತೆ ಪ್ರಸಾರ ಪ್ರಾರಂಭಿಸಿದೆ. ಝೀ ಕನ್ನಡದಲ್ಲಿ ಪ್ರಸಾರವಾಗುವ "ಜೊತೆ ಜೊತೆಯಲಿ", "ಗಟ್ಟಿಮೇಳ"  ಹಾಗೂ "ಪಾರು" ಮೊದಲಾದ ಯಶಸ್ವಿ ಧಾರಾವಾಹಿಗಳು ಮತ್ತೆ ಟಿವಿಯಲ್ಲಿ ಮೂಡಿಬರುತ್ತಿರುವುದು ಪ್ರೇಕ್ಷಕರಿಗೆ ಅದರಲ್ಲಿಯೂ ಗೃಹಿಣಿಯರಿಗೆ ಸಂತಸ ತಂದಿದೆ. ಇನ್ನೂ ಖುಷಿಯ ಸಂಗತಿ ಎಂದರೆ, ನೀವು ಈ ಧಾರಾವಾಹಿಗಳ ಹಿಂದಿನ ಮತ್ತು ಮುಂದೆ ಬರಲಿರುವ ಎಪಿಸೋಡ್ ಗಳನ್ನು ಎಲ್ಲಿಯಾದರು, ಯಾವಾಗಲಾದರು ZEE5 ನಲ್ಲಿ ನೋಡಬಹುದು.

ಆದರೆ ಕೋವಿಡ್ ಸಂಕಟದ ಈ ಅವಧಿಯಲ್ಲಿ ಈ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ನಡೆಸುವುದು ಅಷ್ಟೇನೂ ಸುಲಭದ ಮಾತಲ್ಲ. ಶೂಟಿಂಗ್ ಗೆ ಆಗಮಿಸುವವರು ಮಾಸ್ಕ್, ಗ್ಲೌಸ್ ಧರಿಸುವುದು ಕಡ್ದಾಯವಾಗಿರಲಿದ್ದು, ಶೂಟಿಂಗ್ ಪ್ರಾರಂಭ ಹಾಗೂ ಮುಕ್ತಾಯವಾದ ನಂತರ ಸ್ಯಾನಿಟೈಸರ್ ನಿಂದ ಕೈಗಳ ತೊಳೆದುಕೊಳ್ಳುವುದು ಸೇರಿ ಅನೇಕ ಮುತುವರ್ಜಿಗಳನ್ನು ವಹಿಸಬೇಕಿದೆ. ಅಲ್ಲದೆ ರಸ್ತೆ, ಮಾರುಕಟ್ಟೆ ಸನ್ನಿವೇಶಗಳು, ಮದುವೆಯಂತಹ ಶುಭ ಸಮಾರಂಭದ ಶೂಟಿಂಗ್ ನಡೆಸಲು ಸಾಧ್ಯವಿಲ್ಲ. ಆದರೆ ಎಲ್ಲಾ ಅಡೆತಡೆಗಳ ನಡುವೆ ಪ್ರೇಕ್ಷಕರಿಗೆ ಮನರಂಜನೆಯೊದಗಿಸುವುದು ಪ್ರತಿಯೊಂದು ಧಾರಾವಾಹಿಗಳ ನಿರ್ಮಾಣ ತಂಡ ಹಾಗೂ ಚಾನಲ್ ನ ಆದ್ಯತೆಯಾಗಿರಲಿದೆ. ಇದನ್ನೇ "ಜೊತೆ ಜೊತೆಯಲಿ", "ಗಟ್ಟಿಮೇಳ" ಸೇರಿದಂತೆ ಎಲ್ಲಾ ಧಾರಾವಾಹಿಗಳ ತಂಡ ಮಾಡುತ್ತಿದೆ. ಈ ತಂಡಗಳು ಕೊರೋನಾ ತಡೆಗೆ ಏನೆಲ್ಲಾ ಸುರಕ್ಷತೆಗಳನ್ನು ವಹಿಸಿ ಹೊಸ ಎಪಿಸೋಡ್ ಗಳ ಚಿತ್ರೀಕರಣ ನಡೆಸುತ್ತಿದೆ ಎಂಬುದನ್ನೂ ಬಿಂಬಿಸುವ ವಿಶೇಷ ಎಪಿಸೋಡ್ ಗಳನ್ನು ZEE5 ಪ್ಲ್ಯಾಟ್ ಪಾರ್ಮ್ ನಲ್ಲಿ ನೋಡಬಹುದು.

"ಜೊತೆ ಜೊತೆಯಲಿ" ಧಾರಾವಾಹಿಯಲ್ಲಿ ಈ ವಾರ ಆರ್ಯವರ್ಧನ್ ಅನು ಗೆ ಪ್ರೀತಿಯ ನಿವೇದನೆ ಮಾಡಿಕೊಳ್ಳುವ ದೃಶ್ಯವಿದ್ದು ಅನು ತಲೆಸುತ್ತಿ ಮಲಗಿರುವ ವೇಳೆ ಆಗಮಿಸಿದ್ದ ಆರ್ಯವರ್ಧನ್ ತನ್ನ ಮನದಾಳದ ಮಾತನ್ನು ಹೇಳುತ್ತಾನೆ. ಲಾಕ್ ಡೌನ್ ಗೂ ಮುಂಚೆ ಈ ಧಾರಾವಾಹಿಯಲ್ಲಿ ಏನೇನಾಗಿತ್ತು ಎಂಬುದನ್ನು ಸಹ ನೀವು ZEE5 ನಲ್ಲಿ ನೋಡಬಹುದು. ಇದೀಗ ಕಥೆ ಮುಂದೆ ಯಾವ ತಿರುವು ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. 

"ಧಾರಾವಾಹಿ ಚಿತ್ರೀಕರಣವೇ ಒಂದು ಸವಾಲು, ಇದಕ್ಕೀಗ ಕೊರೋನಾ ಆತಂಕ ಕೂಡ ಸೇರಿಕೊಂಡಿದೆ. ಒಳ್ಳೇ ಕಥೆ ಕೊಟ್ಟು ಜನರ ಮನಗೆಲ್ಲಬೇಕೆನ್ನುವ ಜತೆಗೆ ಶೂಟಿಂಗ್ ಸೆಟ್ಟಿನಲ್ಲಿರುವವರ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಸವಾಲಾಗಿದೆ. ಸರ್ಕಾರ, ಆರೋಗ್ಯ ಇಲಾಖೆ, ಟೆಲಿವಿಷನ್ ಅಸೋಸಿಯೇಷನ್ ಮತ್ತು ಚಾನೆಲ್‌ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಶೂಟಿಂಗ್ ನಡೆಸಲಾಗುತ್ತಿದೆ ಎಂದು "ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.

"ಧಾರಾವಾಹಿ ಶೂಟಿಂಗ್ ಗೆ ಮುನ್ನ ಎಲ್ಲರೂ ದೇಹದ ಉಷ್ಣತೆ ಪರೀಕ್ಷೆಗೆ ಒಳಗಾಗಬೇಕು. ಆ ವಿವರವನ್ನು ಚಾನಲ್ ಮುಖ್ಯಸ್ಥರಿಗೆ ರವಾನಿಸಲಾಗುತ್ತದೆ,. ಪ್ರತಿಯೊಬ್ಬರನ್ನೂ ಸ್ಯಾನಿಟೈಸ್ ಮಾಡಿಸಿದ್ದಲ್ಲದೆ ಶೂಟಿಂಗ್ ಜಾಗವನ್ನು ಸಹ ಸ್ಯಾನಿಟೈಸ್ ಮಾಡುತ್ತೇವೆ. ಎಲ್ಲರೂ ಗ್ಲೌಸ್, ಮಾಸ್ಕ್, ಸೇರಿ ಸುರಕ್ಷತಾ ಸಾಧನ ಧರಿಸುವುದು ಕಡ್ದಾಯವಾಗಿದೆ. ಇನ್ನು ಪ್ರತಿಯೊಬ್ಬರೂ ಆರು ಅಡಿ ಅಂತರ ಕಾಪಾಡಿಕೊಳ್ಳಲೇಬೇಕು. ಯಾರಾದರೂ ಮತ್ತೊಬ್ಬರನ್ನು ಆಕಸ್ಮಿಕವಾಗಿ ಸ್ಪರ್ಶಿಸಿದರೆ ಕೂಡಲೆ ಸ್ಯಾನಿಟೈಸ್ ಮಾಡಿಕೊಳ್ಳಬೇಕು" ಎಂದು ನಿರ್ದೇಶಕ ವಿವರಿಸಿದ್ದಾರೆ.

"ಗಟ್ಟಿಮೇಳ" ಧಾರಾವಾಹಿ ಸಹ ಸಾಕಷ್ಟು ಬದಲಾವಣೆಗಳೊಂದಿಗೆ ಮೂಡಿಬರುತ್ತಿದ್ದು, ವೇದಾಂತ್-ಅಮೂಲ್ಯ ಸಂಭಾಷಣೆ ಹಾಗೂ ವೇದಾಂತ್ ಪಂಚೆ ಉಡುವಾಗಿನ ಸಾಹಸ ಪ್ರೇಕ್ಷಕರ ಮನಗೆದ್ದಿದೆ. ಧಾರಾವಾಹಿಯಲ್ಲಿ ಕೊರೋನಾ ಸುರಕ್ಷತೆ ಕುರಿತು ಸಂದೇಶ ಸಾರಲಾಗುತ್ತಿದ್ದು ಕೊರೋನಾ ಲಾಕ್ ಡೌನ್ ಬಳಿಕದ ನಿರ್ಬಂಧದ ಕಾರಣ ಕಥೆಯಲ್ಲಿ ಸಹ ಕೆಲ ಮಾರ್ಪಾಡು ಆಗಿದೆ. ಅಮೂಲ್ಯ ಮತ್ತು ವೇದಾಂತ್ ಪರಸ್ಪರ ಪ್ರೀತಿಗೆ ವೇದಾಂತ್ ತಾಯಿ ಹಾಗೂ ಸಾಹಿತ್ಯ ಅಡ್ಡಿಯಾಗಿದ್ದು ಅವರು ಪ್ರತಿಬಾರಿ ಪ್ಲ್ಯಾನ್ ಮಾಡಿ ಅಮೂಲ್ಯಳನ್ನು ವೇದಾಂತ್ ನಿಂದ ದೂರವಾಗಿಸಲು ನೋಡುತ್ತಾರೆ. ಅಲ್ಲದೆ ಧ್ರುವ ವೇದಾಂತ್ ಮನೆಗೆ ಆಗಮಿಸುತ್ತಾನೆಯೆ ಎಂಬ ಪ್ರಶ್ನೆ ಉದ್ಭವಿಸಿದ್ದು ಅಮೂಲ್ಯ ವೇದಾಂತ್ ಹುಟ್ಟುಹಬ್ಬವನ್ನು ಅದೆಷ್ಟು ಸಂಭ್ರಮದಿಂದ ಆಚರಿಸಿದ್ದಳೆಂದರೆ ಇದರಿಂದ ವೇದಾಂತ್ ಗೆ ಸಖತ್ ಖುಷಿಯಾಗಿದೆ. ಆದರೆ ಅಮೂಲ್ಯ ನನ್ನನ್ನು ಪ್ರೀತಿಸುತ್ತಿದ್ದಾಳೆ ಎನ್ನುವುದು ಅವನಿಗೆ ಇನ್ನಷ್ಟೇ ಅರ್ಥವಾಗಬೇಕಿದೆ ಇದೆಲ್ಲಾ ಹೇಗೆ ಮುಂದೆ ಸಾಗುತ್ತದೆ ಎನ್ನುವುದನ್ನು ಪ್ರೇಕ್ಷಕರು ZEE5 ನಲ್ಲಿ ಮುಂದಿನ ಸಂಚಿಕೆಗಳನ್ನು ನೋಡಿಯೇ ತಿಳಿಯಬೇಕು.

"ಪಾರು" ಧಾರಾವಾಹಿ ಸಹ ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಜನಪ್ರಿಯ ಧಾರಾವಾಹಿಯಾಗಿದ್ದು 'ಪಾರು'ನಲ್ಲಿ ವೀರಯ್ಯ ದೇವ ಜಾನುವಿನ ಮಾತನ್ನು ನಿರಾಕರಿಸಿದ್ದಾನೆ, ಇದು ಮುಂದಿನ ದಿನಗಳಲ್ಲಿ ಅಖಿಲಾಂಡೇಶ್ವರಿ ಹಾಗೂ ಪಾರುವಿನ ಜೀವನದಲ್ಲಿ ಯಾವ ಬಗೆಯ ಪರಿಣಾಮ ಬೀರುತ್ತದೆ ನೋಡಬೇಕಿದೆ. "ಪಾರು"ವಿನ ಕಥೆ ಕೂಡ ಕೊರೋನಾ ಸಂದೇಶದೊಡನೆ ಬದಲಾದ ರೀತಿಯಲ್ಲಿ ಮೂಡಿಬರುತ್ತಿದ್ದು ಮುಂದಿನ ಸಂಚಿಕೆಗಳಲ್ಲಿ ಮತ್ತಷ್ಟು ನಿರೀಕ್ಷೆ ಹುಟ್ಟಿಸಲು ಯಶಸ್ವಿಯಾಗಿದೆ. ನಿಮ್ಮ ಕುತೂಹಲ ತಣಿಸಲೆಂದೇ ZEE5 ನಲ್ಲಿ ಎಲ್ಲಾ ಹಿಂದಿನ ಎಪಿಸೋಡ್ ಗಳ ಜೊತೆ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿದೆ.

ಇದಲ್ಲದೆ "ಕಮಲಿ", "ಬ್ರಹ್ಮಗಂಟು", "ನಾಗಿಣಿ" ಧಾರಾವಾಹಿಗಳು ಸಹ ಕೊರೋನಾ ಲಾಕ್ ಡೌನ್ ಬಳಿಕ ಪುನಃ ಶೂಟಿಂಗ್ ಪ್ರಾರಂಭಿಸಿದ್ದು ಎಲ್ಲಾ ಶೂಟಿಂಗ್ ತಂಡ ಹಾಗೂ ಚಾನಲ್ ಸಿಬ್ಬಂದಿಗಳು ಕೊರೋನಾ ಸಂರಕ್ಷಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ZEE5 ನಲ್ಲಿ ಬಯಸಿದ ಬಾಗಿಲು ತೆರೆದಿದೆ, ಮನರಂಜನೆ ಮರಳಿದೆ. ಈ ಎಲ್ಲಾ ಧಾರಾವಾಹಿಗಳ ಎಪಿಸೋಡ್ ಗಳನ್ನು ಎಲ್ಲಿಯಾದರು, ಯಾವಾಗಲಾದರು ZEE5 ನಲ್ಲಿ ನೋಡಿ ಆನಂದಿಸಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com