ವಂಚನೆ ಪ್ರಕರಣ: ನಿರ್ಮಾಪಕ ಆನಂದ್ ಅಪ್ಪುಗೋಳ ಆಸ್ತಿ  ಹರಾಜು ಕೋರಿ ಅರ್ಜಿ

ಐಷಾರಾಮಿ ಬಂಗಲೆಗಳು ಸೇರಿದಂತೆ ನಿರ್ಮಾಪಕ ಆನಂದ ಅಪ್ಪುಗೋಳ ಅವರಿ ಸೇರಿದ 110 ಆಸ್ತಿಗಳನ್ನು ಹರಾಜು ಹಾಕುವಂತೆ ಕೋರಿ ಸ್ಥಳೀಯ ಆಡಳಿತ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಆನಂದ ಅಪ್ಪುಗೋಳ
ಆನಂದ ಅಪ್ಪುಗೋಳ

ಬೆಂಗಳೂರು: ಐಷಾರಾಮಿ ಬಂಗಲೆಗಳು ಸೇರಿದಂತೆ ನಿರ್ಮಾಪಕ ಆನಂದ ಅಪ್ಪುಗೋಳ ಅವರಿ ಸೇರಿದ 110 ಆಸ್ತಿಗಳನ್ನು ಹರಾಜು ಹಾಕುವಂತೆ ಕೋರಿ ಸ್ಥಳೀಯ ಆಡಳಿತ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಬೆಳಗಾವಿಯ ಸಂಗೊಳ್ಳಿರಾಯಣ್ಣ ಸಹಕಾರ ಸೊಸೈಟಿ ಅಧ್ಯಕ್ಷರಾಗಿರುವ ಆನಂದ ಅಪ್ಪುಗೋಳ ಸಾವಿರಾರು ಠೇವಣಿದಾರರಿಗೆ ಸುಮಾರು 250 ಕೋಟಿ ರು. ವಂಚಿಸಿದ್ದಾರೆ ಎಂದು   ಆರೋಪಿಸಲಾಗಿದೆ.

ಆನಂದ್ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಹಲವು ಕೇಸ್ ಗಳು ದಾಖಲಾಗಿದ್ದು,  ಗ್ರಾಹಕರಿಗೆ ಠೇವಣಿ ಹಣ ಹಿಂತಿರುಗಿಸದೇ ದಿಢೀರ್ ಆಗಿ ಬ್ಯಾಂಕ್ ನ ಎಲ್ಲಾ ಶಾಖೆಗಳನ್ನು ಮುಚ್ಚಿದ್ದಾರೆ.

ಹೀಗಾಗಿ ಆನಂದ್ ಅಪ್ಪುಗೋಳ ಅವರ ಎಲ್ಲಾ ಆಸ್ತಿಗಳನ್ನು ಹರಾಜು ಮಾಡಲು ಅನುಮತಿ ನೀಡುವಂತೆ ಬೆಳಗಾವಿ ಸಹಾಯಕ ಜಿಲ್ಲಾಧಿಕಾರಿ   ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ,  ಆನಂದ್ ಅವರಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಿ ಬಂದ ಹಣವನ್ನು ಠೇವಣಿದಾರರಿಗೆ ನೀಡಲು ಸರ್ಕಾರ ಚಿಂತಿಸುತ್ತಿದೆ
ಎಂದು ಹೇಳಲಾಗುತ್ತಿದೆ.

ಆನಂದ್ ದೆಹಲಿ ಮತ್ತು ಹೈದಾರಾಬಾದ್ ನಲ್ಲಿ ಹಲವು ಐಷಾರಾಮಿ ಬಂಗಲೆಗಳನ್ನು ಖರೀದಿಸಿದ್ದಾರೆ. ಬೆಳಗಾವಿ ಜಿಲ್ಲೆಯ  ಮುನೋಳಿ ಪಕ್ಕ ದೊಡ್ಡ ಫಾರ್ಮ್ ಖರೀದಿಸಿದ್ದಾರೆ, ಅದನ್ನು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ,

ಆನಂದ್ ಅಪ್ಪುಗೋಳ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಕನ್ನಡ ಸಿನಿಮಾ ನಿರ್ಮಿಸಿದ್ದಾರೆ,ಪೊಲೀಸರು ಅವರ ವಿರುದ್ದ ಪ್ರಕರಣ ದಾಖಲಿಸುವ ಮುಂಚೆ ಐಷಾರಾಮಿ ಜೀವನ  ನಡೆಸುತ್ತಿದ್ದರು.

ಆತನ ವಿರುದ್ಧ ಬ್ಯಾಂಕ್ ಗ್ರಾಹಕರು ದಾಖಲಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪ್ಪುಗೋಳ ಕುಟುಂಬದ ಹಲವಾರು ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರ ವಿರುದ್ಧ ಪ್ರಕರಣ  ದಾಖಲಿಸಲಾಗಿ ಜೈಲಿನಲ್ಲಿರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ತಮ್ಮ ಠೇವಣಿಗಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿ ಬೆಳಗಾವಿಯಲ್ಲಿರುವ ಅವರ ನಿವಾಸದ ಮುಂದೆ  ಪ್ರತಿಭಟನೆ ನಡೆಸಿದರು ಪ್ರಯೋಜನವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com