ಹೇರ್ ಕಟ್ ಮಾಡಿಸಿದ್ರೆ "ಖಿನ್ನತೆ" ಇದೆ ಎಂದಲ್ಲ: ಸಿಂಧು ಲೋಕನಾಥ್

ನಾನು ಹುಡುಗರ ಸ್ಟೈಲ್ ನಲ್ಲಿ ಹೇರ್ ಕಟ್ ಮಾಡಿಸಿದ್ದೇನೆ, ಖಿನ್ನತೆಯಿಂದಲ್ಲ ಎಂದು ನಟಿ ಸಿಂಧು ಲೋಕನಾಥ್ ಹೇಳಿದ್ದಾರೆ. 
ಸಿಂಧು ಲೋಕನಾಥ್
ಸಿಂಧು ಲೋಕನಾಥ್

ನಾನು ಹುಡುಗರ ಸ್ಟೈಲ್ ನಲ್ಲಿ ಹೇರ್ ಕಟ್ ಮಾಡಿಸಿದ್ದೇನೆ, ಖಿನ್ನತೆಯಿಂದಲ್ಲ ಎಂದು ನಟಿ ಸಿಂಧು ಲೋಕನಾಥ್ ಹೇಳಿದ್ದಾರೆ. 

ಸಿಂಧು ಲೋಕನಾಥ್ ಇತ್ತೀಚೆಗೆ ಬಾಯ್ ಹೇರ್ ಕಟ್ ಮಾಡಿಸಿಕೊಂಡು ಫೇಸ್ ಬುಕ್ ನಲ್ಲಿ ಫೋಟೋ ಹಂಚಿಕೊಂಡಿದ್ದರು. ಜತೆಗೆ ಕೆಲ ಭಾವನಾತ್ಮಕ ಸಾಲುಗಳನ್ನು ಸಹ ಬರೆದುಕೊಂಡಿದ್ದರು. ಆದರೆ ಇದನ್ನ ನೋಡೊದ್ದ ಕೆಲವರು ನಟಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. 

ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ "ನಾನು ಬೇರೆ ರೀತಿಯ ಹೇರ್ ಸ್ಟೈಲ್ ಮಾಡಿಕೊಳ್ಳಲು ಬಯಸಿದ್ದೆ, ಅನಾರೋಗ್ಯ ಅಥವಾ ಖಿನ್ನತೆಯಿಂದ ಹೀಗೆ ಮಾಡಿಲ್ಲ ಎಂದು ಹೇಳಿದ್ದಾರೆ. 

"ಕೂದಲು ಕತ್ತರಿಸಿದ್ದೇನೆಂದ ಮಾತ್ರಕ್ಕೆ ಅನಾರೋಗ್ಯಕ್ಕೆ ಈಡಾಗಿದ್ದೇನೆ ಎಂದಲ್ಲ, ಖಿನ್ನತೆಗೆ ಒಳಗಾಗಿದ್ದೇನೆ ಎಂದಲ್ಲ, ಲಿಂಗ ತಾರತಮ್ಯ ಮಾಡಿದ್ದೇನೆ ಎಂದಲ್ಲ.  ನನ್ನ ಕೂದಲು ಮುಂಚೆಗಿಂತಲೂ ತುಂಬ ಚೆನ್ನಾಗಿ ಬೆಳೆಯಬಲ್ಲದು. ನನ್ನ ಹಿಂದಿನ ಪೋಸ್ಟ್ ಅನ್ನು ಹತ್ತು ಬಾರಿ ಚೆನ್ನಾಗಿ ಓದಿಕೊಳ್ಳಿ. ಇನ್ನೊಬ್ಬರ ವೈಯುಕ್ತಿಕ ಜೀವನದಲ್ಲಿ ತಲೆ ಹಾಕಬೇಡಿ. ಸುಳ್ಳು ಸುದ್ದಿ ಹಬ್ಬಿಸಬೇಡಿ.

"ಸುಳ್ಳು ಸುದ್ದಿ ನಂಬಿ ನನ್ನ ಆರೋಗ್ಯ ವಿಚಾರಿಸಿದವರಿಗೆ  ನನ್ನ ಧನ್ಯವಾದ. ನಾನು ಆರೋಗ್ಯವಾಗಿದ್ದೇನೆ. " ಎಂದೂ ನಟಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com