ಕೊನೆಗೂ ರಿವೀಲ್ ಆಯ್ತು ಕೆಜಿಎಫ್ 2 ರಿಲೀಸ್ ಡೇಟ್!

ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Published: 10th March 2020 12:46 PM  |   Last Updated: 10th March 2020 12:46 PM   |  A+A-


A still from kgf2

ಕೆಜಿಎಫ್ 2 ಸ್ಟಿಲ್

Posted By : Shilpa D
Source : The New Indian Express

ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಯಶ್​ ನಟನೆಯ ಕೆಜಿಎಫ್​ ಚಾಪ್ಟರ್​ 2 ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಮೂಲಗಳ ಪ್ರಕಾರ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಮಾಯಿ ಮಾಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿನಿಮಾ ರಿಲೀಸ್​ ಡೇಟ್​ ಬಗ್ಗೆ ಹೊಸ ಅಪ್ಡೇಟ್​ ಒಂದು ಸಿಕ್ಕಿದೆ.

ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. 

 ರಿಲೀಸ್ ವಿಚಾರದಲ್ಲಿ ಈವರೆಗೆ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.  ಅಕ್ಟೋಬರ್ 23 ರಂದು ದಸರಾ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕೆಜಿಎಫ್ ಚಿತ್ರತಂಡ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದೆ. 

ಇದೇ ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 23ಕ್ಕೆ ಕೆಜಿಎಫ್-2 ಸಿನಿಮಾ ಪ್ಯಾನ್ ಇಂಡಿಯಾ ಹಾಗೂ ವಿದೇಶಗಳಲ್ಲೂ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ.

ಈಗಾಗಲೇ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಹೈದರಾಬಾದ್​​ನಲ್ಲಿ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದುವರೆಗೂ ಚಿತ್ರ ನಿರ್ದೇಶಕ ಪ್ರಶಾಂತ್ ಚಿತ್ರದ ಬಗ್ಗೆ ಎಲ್ಲಾ ರೀತಿಯ ಅಪ್ಡೇಟ್ ಗಳನ್ನ ನೀಡ್ತಿದ್ದಾರೆ. 

ಚಿತ್ರ ರಿಲೀಸ್ ಡೇಟ್ ಬಗ್ಗೆ ಎಲ್ಲೂ ಮಾತಾಡಿಲ್ಲ. ಆದ್ರೆ ಕೆಜಿಎಫ್-2 ನಿರ್ಮಿಸ್ತಿರೋ ಹೊಂಬಾಳೆ ಫಿಲಂನ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕಾರ್ತಿಕ್ ಗೌಡ ಈ ತಿಂಗಳ ಕೊನೆಯಲ್ಲಿ ನಿಮಗೆ ಚಿತ್ರದ ಬಗ್ಗೆ ಅಪ್ಡೇಟ್ ಸಿಗಲಿದೆ ಆದ್ರೆ ಖಂಡಿತ ಕೆಜಿಎಫ್-2 ಟೀಸರ್ ಬಗ್ಗೆ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೇನು ಚಿತ್ರ ಮುಗಿಯೋ ಹಂತದಲ್ಲಿರುವುದರಿಂದ ದಸರಾ ಟೈಂಗೆ ರಿಲೀಸ್ ಆಗಬಹುದು ಅನ್ನೋ ಲೆಕ್ಕಾಚಾರದ ಮೇಲೆ ಈ ಸುದ್ದಿ ಹೊರಬಂದಿದೆ.

Stay up to date on all the latest ಸಿನಿಮಾ ಸುದ್ದಿ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp