ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

Published: 17th March 2020 03:32 PM  |   Last Updated: 17th March 2020 03:32 PM   |  A+A-

ಕಿರುತೆರೆಗೂ ಕೊರೋನಾ ಭೀತಿ! ಮಾರ್ಚ್ 31ರವರೆಗೆ ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್

Posted By : Raghavendra Adiga
Source : Online Desk

ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೋನಾವೈರಸ್ ಇದೀಗ ಕಿರುತೆರೆಗೆ ಸಹ ಬಿಸಿ ಮುಟ್ಟಿಸಿದೆ. ಕೊರೋನಾ ಕಾರಣದಿಂದಾಗಿ ಮನೆ ಮನೆಗಳಲ್ಲಿ ಮಹಿಳೆಯರು ಕುಳಿತು ನೋಡುವ ಮೆಗಾ ಧಾರಾವಾಹಿಗಳ ಚಿತ್ರೀಕರಣವನ್ನು ನಿಲ್ಲಿಸಲು  ತೀರ್ಮಾನಿಸಲಾಗಿದೆ. ಮುಂದಿನ ಹದಿಮೂರು ದಿನಗಳ ಕಾಲ ಜನಪ್ರಿಯ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಲಿದೆ.

ಮುಂದಿನ 13 ದಿನಗಳ ಕಾಲ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತವಾಗಲಿದೆ. ಇದಾಗಲೇ ಮಹಾರಾಷ್ಟ್ರದಲ್ಲಿ ಹಿಂದಿ ಧಾರಾವಾಹಿಗಳ ಶೂಟಿಂಗ್ ಸ್ಥಗಿತವಾಗಿದೆ. ಮಾರ್ಚ್ 19ರಿಂದ ಮಾರ್ಚ್ 31ರವರೆಗೆ ಕನ್ನಡದ ಎಲ್ಲಾ ಧಾರಾವಾಹಿಗಳ ಶೂಟಿಂಗ್ ಸ್ತಬ್ದವಾಗಲಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಹೇಳಿದೆ.

ಧಾರಾವಾಹಿಗಳು ನಿತ್ಯವೂ ಪ್ರಸಾರ ಕಾಣಬೇಕಾಗಿರುವ ಕಾರಣ ಇದುವರೆಗೆ ಶೂಟಿಂಗ್ ನಿಲ್ಲಿಸಿಲ್ಲ. ಆದರೆ ಇದೀಗ ದಿನ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನೆಲೆ ಮುಂಜಾಗ್ರತೆ ಕ್ರಮವಾಗಿ ಮುಂದಿನ ದಿನಗಳಲ್ಲಿ ಶುತಿಂಗ್ ನಿಲ್ಲಿಸುತ್ತೇವೆ. ಇದಾಗಲೇ ನಿರ್ಮಾಪಕರು, ಪ್ರಾಯೋಜಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೆ ಶೂಟಿಂಗ್ ಸಾಧ್ಯವಾದಷ್ಟು ಮುಗಿಸಿಕೊಳ್ಲಲುಲ್ ಮೂರು ದಿನಗಳ ಕಾಲಾವಕಾಶ ಕಲ್ಪಿಸಿದ್ದು ಆ ನಂತರ ಮಾರ್ಚ್ 31ರವರೆಗೆ ಯಾವ ಧಾರಾವಾಹಿಗಳೂ ಇರುವುದಿಲ್ಲ. ಇದರ ಸಂಬಂಧ ಕಿರುತೆರೆ ನಟ ನಟಿಯರು, ತಾಂತ್ರಿಕ ವರ್ಗಕ್ಕೆ ಸಹ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಟಿವಿ ಅಸೋಸಿಯೇಷನ್ ಪ್ರಕಟಣೆ ಹೇಳಿದೆ.

ಒಂದೊಮ್ಮೆ ಧಾರಾವಾಹಿ ಚಿತ್ರೀಕರಣ ಸ್ಥಗಿತವಾಗಿ ಧಾರಾವಾಹಿ ಪ್ರಸಾರ ನಿಂತರೆ ವೀಕ್ಷಕರು ಒಮ್ಮೆ ನೋಡಿದ ಎಪಿಸೋಡ್ ಗಳನ್ನೇ ಮತ್ತೆ ಮತ್ತೆ ನೋಡುವಂತಾಗಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?

Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp