ನಟನಾಗಿ ಜನ ನನಗೆ ಆಶೀರ್ವದಿಸಿದ್ದಾರೆ, ನಾನು ನಿವೃತ್ತನಾಗುವುದಿಲ್ಲ: ಜನ್ಮದಿನ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಎಂದಿಗೂ ಚಿರಯುವಕನಂತೆ ಕಾಣುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ನಟರಲ್ಲಿ ಪವರ್ ಸ್ಟಾರ್  ಸಹ ಒಬ್ಬರು.ಅವರ ಪ್ರಕಾರ ಈ ರೀತಿ ಯುವಕರಾಗಿ ಕಾಣುವುದರ ಹಿಂದಿನ ರಹಸ್ಯ  ಅವರ ಫಿಟ್ನೆಸ್ ಹಾಗೂ ದೈನಂದಿನ ದಿನಚರಿಯಾಗಿದೆ.  "ನಾನು ಚೆನ್ನಾಗಿ ತಿನ್ನುತ್ತೇನೆ ಮತ್ತು ಕೆಲಸ ಮಾಡಲು ಸಾಕಷ್ಟು ಗಮನ ನೀಡುತ್ತೇನ
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಎಂದಿಗೂ ಚಿರಯುವಕನಂತೆ ಕಾಣುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ನಟರಲ್ಲಿ ಪವರ್ ಸ್ಟಾರ್  ಸಹ ಒಬ್ಬರು.ಅವರ ಪ್ರಕಾರ ಈ ರೀತಿ ಯುವಕರಾಗಿ ಕಾಣುವುದರ ಹಿಂದಿನ ರಹಸ್ಯ  ಅವರ ಫಿಟ್ನೆಸ್ ಹಾಗೂ ದೈನಂದಿನ ದಿನಚರಿಯಾಗಿದೆ.  "ನಾನು ಚೆನ್ನಾಗಿ ತಿನ್ನುತ್ತೇನೆ ಮತ್ತು ಕೆಲಸ ಮಾಡಲು ಸಾಕಷ್ಟು ಗಮನ ನೀಡುತ್ತೇನೆ.. ಇದು ನನ್ನ ಜೀನ್‌ನಲ್ಲೇ ಬಂದಿದೆ ಅದಕ್ಕಾಗಿ ನಾನು ಅದೃಷ್ಟಶಾಲಿ" ಪುನೀತ್ ಹೇಳುತ್ತಾರೆ. ಕೋವಿಡ್ -19 ಭೀತಿಯ ಕಾರಣ ಈ ವರ್ಷ ತನ್ನ ಅಭಿಮಾನಿಗಳ ಜತೆಯಲ್ಲದೆ ನಟ ಸರಳ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ.

“ಕಳೆದ 17-18 ವರ್ಷಗಳಿಂದ ನಾನು  ನನ್ನ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಾ ಬಂದಿದ್ದೇನೆ. ಆದಾಗ್ಯೂ, ಈ ವರ್ಷ ವಿಭಿನ್ನವಾಗಿದೆ. . ನಾನು ಅದನ್ನು ಎಂದಿಗೂ ಮರೆಯುವುದಿಲ್ಲ ಆದರೆ ಇಂದು ನಾನು ಅಸಹಾಯಕ. ನಾವೆಲ್ಲ ಈಗ ಸರ್ಕಾರದೊಡನೆ ಕೈಜೋಡಿಸಬೇಕಾದ ಸಮಯವಾಗಿದೆ. ನಾವು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಇದು ನಮ್ಮ ಸುರಕ್ಷತೆಗಾಗಿ. ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವುದು ಉತ್ತಮ ಮತ್ತು ಶೀಘ್ರದಲ್ಲೇ  ಎಲ್ಲವೂ ಸರಿಯಾಗಲಿದೆ ಎಂದು ಭಾವಿಸುತ್ತೇನೆ.  ”ಎಂದು ಪುನೀತ್ ಹೇಳುತ್ತಾರೆ, ಅವರು ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸುತ್ತಿಲ್ಲವ್ವೆಂದು ಒತ್ತಿ ಹೇಳಿದ್ದಾರೆ.

"ಸಂತೋಷ್ ಆನಂದ್ ರಾಮ್ ನಿರ್ದೇಶನದ ದ ಯುವರತ್ನದ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಮೋಷನ್ ಪೋಸ್ಟರ್ ಸಹ  ರಿಲೀಸ್ ಆಗುತ್ತಿದೆ. ಅಂತೆಯೇ, ನನ್ನ ಜನ್ಮದಿನದಂದು ಅಭಿಮಾನಿಗಳು ನನ್ನನ್ನು ಹಾರೈಸುವಷ್ಟು ಹಾಡುಗಳನ್ನು ತಯಾರಿಸಿ ಸಂಭ್ರಮಿಸಿದ್ದಾರೆ.ಅವುಗಳಲ್ಲಿ ಒಂದೆರಡು ಕಿರುಚಿತ್ರಗಳೊಂದಿಗೆ ಬಂದಿವೆ. ನಿಮಗೆ ಇನ್ನೇನು ಬೇಕು, ನನ್ನ ಉಡುಗೊರೆಯನ್ನು ನಾನು ಈಗಾಗಲೇ ಪಡೆದುಕೊಂಡಿದ್ದೇನೆ, ” ನಟ ಹೇಳಿದ್ದಾರೆ.

ಬಾಲ್ಯದಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಟನಿಗೆ, ಪ್ರತಿವರ್ಷದಲ್ಲಿ ಉತ್ಸಾಹ ಹೆಚ್ಚುತ್ತಾ ಸಾಗಿದೆ. ಅವರು ನಟನೆಯಿಂದ ನಿವೃತ್ತಿ ಹೊಂದಲು ಬಯಸುವುದಿಲ್ಲ. "ವಯಸ್ಸಿನಲ್ಲಿ, ನಾನು ಇತರ ಪಾತ್ರಗಳನ್ನು ಮಾಡುತ್ತೇನೆ ಏಕೆಂದರೆ ನಾನು ನಟನೆಯನ್ನು ಇಷ್ಟಪಡುತ್ತೇನೆ, ಮತ್ತು ಅದು ನನ್ನ ವೃತ್ತಿಯಾಗಿದೆ" ಎಂದು ಪುನೀತ್ ಹೇಳುತ್ತಾರೆ, "ನಾನು ಉತ್ತಮ ಶಕ್ತಿಯನ್ನು ಹೊಂದುವವರೆಗೂ ನಾನು ನಾಯಕನಾಗಿ ಉಳಿಯುತ್ತೇನೆ ಮತ್ತು ಎಲ್ಲಿಯವರೆಗೆ ನಾನು  ಯುವಕನಂತೆ ಕಾಣುವೆನೋ ಅಲ್ಲಿವರೆಗೆ ಇದು ನಡೆಯುತ್ತದೆ. ನಂತರ, ನಾನು ಪೋಷಕ ನಟನಾಗಿ ಬದಲಾಗಬೇಕಾಗುವುದು.

"ನಟನಾಗಿ ನನಗೆ ಜನರ ಆಶೀರ್ವಾದವಿದೆ. ಹಾಗಾಗಿ ನನಗೆ ನಿವೃತ್ತಿಯ ವಯಸ್ಸೆನ್ನುವುದಿಲ್ಲ. . ಇದು ನಾವು ಪ್ರತಿದಿನ ಕಲಿಯುವ ಸ್ಥಳವಾಗಿದೆ. ನಿರ್ದೇಶಕರು ನಿಮಗಿಂತ ಕಿರಿಯರು ಅಥವಾ ಹಿರಿಯರು,  ಇರಬಹುದು  ಅವರು ನಿಮಗೆ ಏನನ್ನಾದರೂ ಕಲಿಸಲು ಪ್ರಯತ್ನಿಸುತ್ತಾರೆ. ನಟನಾಗಿ ನಾನು ಈ ಕೆಲಸವನ್ನು ಆನಂದಿಸುತ್ತೇನೆ, ”ಎಂದು ಅವರು ಹೇಳುತ್ತಾರೆ.

ಪುನೀತ್ ಸಧ್ಯ ಹೊಂಬಾಳೆ ಫಿಲಂಸ್ ನ ಸಂತೋಷ್ ಆನಂದ್ ರಾಮ್ ನಿರ್ದೇಶನದ "ಯುವರತ್ನ" ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ, ಮತ್ತು ತಂಡವು ಈಗ ಒಂದೆರಡು ಹಾಡುಗಳನ್ನು ಚಿತ್ರೀಕರಿಸಲಷ್ಟೇ ಬಾಕಿ ಇದೆ. 2020 ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ "ಯುವರತ್ನ"ಗಾಗಿ ಅವರ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಅಥವಾ ಬಿಡುಗಡೆಯು ವೇಳಾಪಟ್ಟಿಯ ಪ್ರಕಾರ ಹೋಗದಿದ್ದಾಗ ಅದು ಒತ್ತಡಕ್ಕೆ ಒಳಗಾಗುತ್ತಾರೆಯೆ ಎಂದು ಕೇಳಿದಾಗ “ಇದೆಲ್ಲವೂ ಉತ್ತಮವಾಗಿ ನಡೆಯುತ್ತದೆ.ಯುವರತ್ನ ದೊಡ್ಡ ಪಾತ್ರದೊಂದಿಗೆ ಬರುತ್ತದೆ, ಮತ್ತು ನಾವು ಖಂಡಿತವಾಗಿಯೂ ಉತ್ತಮ ಚಿತ್ರವೊಂದನ್ನು ನೀಡಲು ಮುಂದಾಗಿದ್ದೇವೆ. ಅನಿವಾರ್ಯ ಸಂದರ್ಭಗಳಿಂದಾಗಿ ಹಾಡಿನ ಚಿತ್ರೀಕರಣವನ್ನು ರದ್ದುಗೊಳಿಸಬೇಕಾಯಿತು.ಕೊರೋನಾವೈರಸ್ ಕಾರಣದಿಂದ ವೇಳಾಪಟ್ಟಿಯ ಪ್ರಕಾರ ಮುಂದುವರಿಯಲು ನಮಗೆ ಅವಕಾಶ  ಆಗಲಿಲ್ಲ. ”ಎಂದು ಮುಂದಿನ ದಿನಗಳಲ್ಲಿ ಜೇಮ್ಸ್ ಚಿತ್ರೀಕರಣವನ್ನು ಕೈಗೊಳ್ಳಲಿರುವ ಪುನೀತ್ ಗೆ ನಿರ್ದೇಶಕ ಡಿ ಸತ್ಯ ಪ್ರಕಾಶ್ ಆಕ್ಷನ್ ಕಟ್ ಹೇಳಲಿದ್ದಾರೆ.

ಇದರ ನಡುವೆ ಅವರು ತಮ್ಮ ಹೋಂ ಬ್ಯಾನರ್ ಪಿ.ಆರ್.ಕೆ. ಪ್ರೊಡಕ್ಷನ್ಸ್ ಗೆ ಸಹ ಸಮಾನ ಗಮನ ನೀಡುತ್ತಾರೆ. ಇದನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್  ನಿರ್ವಹಿಸಿದ್ದಾರೆ. “ನನ್ನ ತಾಯಿ (ಪಾರ್ವತಮ್ಮ  ರಾಜ್‌ಕುಮಾರ್) ನಿರ್ಮಾಪಕಿ, ವಿತರಕಿಯಾಗಿ ಅನೇಕ ಚಲನಚಿತ್ರಗಳನ್ನು ಮಾಡಿದರು, ಮತ್ತು ಅವರು ಉತ್ತಮ ಕೆಲಸ ಮಾಡಿದ್ದಾರೆ.ಆಕೆ ವಜ್ರೇಶ್ವರಿ ಕಂಬೈನ್ಸ್ ಹಿಂದೆ ಒಂದು ಸ್ತಂಭವಾಗಿ ನಿಂತಿದ್ದಾರೆ. ಪಿ.ಆರ್.ಕೆ. ಯನ್ನು ನಾವು ವಿಭಿನ್ನ ಶೈಲಿಯ ಸಿನಿಮಾ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ಅದು ಈಗ ನಡೆಯುತ್ತಿದೆ."

ವರ್ಷಕ್ಕೊಂದು ಚಿತ್ರಕ್ಕಷ್ಟೇ ಸೀಮಿತವಾಗಿದ್ದಿರೇಕೆ?
“ನಾನು ನಿಜವಾಗಿಯೂ ಹೆಚ್ಚಿನದನ್ನು ಮಾಡಲು ಬಯಸುತ್ತೇನೆ, ಆದರೆ ಇದು ನಿಗದಿತ ಸಮಯ ಅಥವಾ ಸ್ಥಳವನ್ನು ಹೊಂದಿರುವುದಿಲ್ಲ. ಆದರೆ ಈ ವರ್ಷ ನಾನು ಎರಡು ರಿಲೀಸ್ ಗಳನ್ನು ನೋಡಲಿದ್ದೇನೆ. ಮುಂದಿನ ವರ್ಷ ಸಹ ಇದೇ ರೀತಿ ಮುಂದುವರಿಯುತ್ತದೆ."

ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಹಾಗೂ ಡ್ಯಾನ್ಸ್ ಅನ್ನು ಚೊತ್ರನಿರ್ದೇಶಕರು ಏಕೆ ಸೃಷ್ಟಿಸುತ್ತಿಲ್ಲ?
ಣಾನು ನನ್ನ ಮಟ್ಟಿಗೆ  ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ ಮತ್ತು ಉತ್ತಮಕಥೆಗಾಗಿ ಹುಡುಕುತ್ತಿದ್ದೇನೆ. ಕೆಲವು ಒಳ್ಳೆಯ ಸಂಗತಿಗಳು ನನ್ನ ದಾರಿಯಲ್ಲಿ ಸಿಗುತ್ತಿದೆ. "

ಪೌರಾಣಿಕ ಕಥೆಯಲ್ಲಿ ನಿಮ್ಮನ್ನು ನೋಡಲು ನಾವು ನಿರೀಕ್ಷಿಸಬಹುದೆ?
“ನಾನು ಯಾವುದೇ ರೀತಿಯ ಪಾತ್ರಗಳ ಭಾಗವಾಗಲು‘ ಇಲ್ಲ ’ಎಂದು ಎಂದಿಗೂ ಹೇಳುವುದಿಲ್ಲ. ಪೌರಾಣಿಕ ಪಾತ್ರದ ಬಗೆಗೆ ನನ್ನ ಮನಸ್ಸಿನಲ್ಲಿದೆ.  ನಾನು ಸರಿಯಾದ ಸ್ಕ್ರಿಪ್ಟ್ ಗಾಗಿ ಗಿ ಹುಡುಕುತ್ತಿದ್ದೇನೆ ಮತ್ತು ನಿರ್ದೇಶಕರು ಅದನ್ನು ತೆಗೆದುಕೊಳ್ಳಲುಲ್ ಸಾಧ್ಯವಾಗಬೇಕು"

ಶಿವರಾಜ್‌ಕುಮಾರ್ ಅವರೊಂದಿಗೆ ನೀವು ಸ್ಕ್ರೀನ್ ಹಂಚಿಕೊಳ್ಳುವುದನ್ನು ನಾವು ಕಾಣಬಹುದೆ?
“ಇದು ನಮ್ಮಿಬ್ಬರಿಗೂ ಒಂದು ಕನಸು. ನನ್ನ ಇಬ್ಬರು ಸಹೋದರರು (ಶಿವಣ್ಣ ಮತ್ತು ರಾಘಣ್ಣ)ನನ್ನೊಂದಿಗೆ ಒಂದೇ ಚಿತ್ರದಲ್ಲಿ ಕಾಣಬೇಕೆಂದು ನಾನು ಬಯಸುತ್ತೇನೆ. ನಾವು ಉತ್ತಮ ಸ್ಕ್ರಿಪ್ಟ್ ಅನ್ನು ಕಂಡುಕೊಂಡ ನಂತರ ಅ ನಡೆಯಲಿದೆ ಎಂದು ನಾನು ಆಶಿಸುವೆ"

ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಾವು ನಿಮ್ಮನ್ನು ನೋಡಲಿದ್ದೇವೆಯೆ?
“ಈಗ ಯಾವ ನಟ ತಾನೆ ಅವರೊಡನೆ ಕೆಲಸ ಮಾಡಲು ಬಯಸಲಾರ? ನಾವು ಬಹಳ ಹಿಂದೆಯೇ ಚರ್ಚೆಗಳನ್ನು ನಡೆಸಿದ್ದೇವೆ, ಮತ್ತು ನಾವು ಅಹ್ವಾನ ಎಂಬ ಟೈಟಲ್  ಸಹ ನಿರ್ಧರಿಸಿದ್ದೇವೆ. ಇದು ಸೆಟ್ಟೇರಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ನಾವಿಬ್ಬರೂ ಒಟ್ತಾಗಲಿದ್ದೇವೆ."

ಕನ್ನಡ ಚಲನಚಿತ್ರಗಳು ಪ್ಯಾನ್-ಇಂಡಿಯಾ ಅಪೀಲ್ ಪಡೆಯುವ ಬಗೆಗೆ ನಿಮ್ಮ ಅಭಿಪ್ರಾಯವೇನು?
"ಕನ್ನಡ ಚಿತ್ರವನ್ನು ಇಡೀ ದೇಶ ಮತ್ತು ಜಗತ್ತಿಗೆ ಪ್ರದರ್ಶಿಸುವುದು ಒಳ್ಳೆಯದು"

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com