ಮತ್ತೊಂದು ಸಿನಿಮಾಗೆ ಸಹಿ ಮಾಡಿದ 'ದಿಯಾ' ಹೀರೋ ಪೃಥ್ವಿ ಅಂಬಾರ್

ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ  ಕಾಲಿರಿಸಿದ  ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .

Published: 23rd March 2020 11:41 AM  |   Last Updated: 23rd March 2020 11:41 AM   |  A+A-


Pruthvi Ambaar

ಪೃಥ್ವಿ ಅಂಬಾರ್

Posted By : Shilpa D
Source : The New Indian Express

ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ  ಕಾಲಿರಿಸಿದ  ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .

ಪೃಥ್ವಿ ನಟಿಸಲಿರುವ ಹೊಸ ಚಿತ್ರಕ್ಕೆ 'for regn' (ಫಾರ್‌ ರಿಜಿಸ್ಟ್ರೇಷನ್‌) ಎಂದು ಶೀರ್ಷಿಕೆ ಇಡಲಾಗಿದೆ. ಮೇ ತಿಂಗಳಿಂದ ಇದರ ಶೂಟಿಂಗ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೊಮ್ಯಾಂಟಿಕ್ ಕಥಾಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ.

ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಅವರಿಗೆ ಕೆಲವು ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ. ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್. ಸಂಗೀತ ನಿರ್ದೇಶನ 'For regn' ಚಿತ್ರಕ್ಕಿದೆ.

ಕನ್ನಡದ ಜೊತೆಗೆ ತುಳು ಸಿನಿಮಾಗಳಲ್ಲಿಯೂ ಪೃಥ್ವಿ ಅಭಿನಯಿಸುತ್ತಿದ್ದಾರೆ. 'ದಿಯಾ' ಸಿನಿಮಾದ ಯಶಸ್ಸಿನ ನಂತರ ಅವರಿಗೆ ಒಳ್ಳೊಳ್ಳೆಯ ಆಫರ್‌ಗಳು ಸಿಗುತ್ತಿವೆ. ಎಲ್ಲವನ್ನೂ ಅಳೆದು-ತೂಗಿ ಅವರು ಸಹಿ ಮಾಡುತ್ತಿದ್ದಾರೆ. ಈ ನಡುವೆ ಕೆಲವು ಚಿತ್ರಗಳ ಸ್ಕ್ರಿಪ್ಟ್‌ ಕೆಲಸದಲ್ಲೂ ಪೃಥ್ವಿ ತೊಡಗಿಕೊಂಡಿದ್ದಾರೆ ಎಂಬುದು ವಿಶೇಷ.

ದಿಯಾ ಸಿನಿಮಾದಲ್ಲಿ ಆದಿ ಪಾತ್ರದಲ್ಲಿ ನಟಿಸಿ  ಪೃಥ್ವಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp