ಕೊರೋನಾ ವೈರಸ್: ಎಚ್‌ಡಿ, ಅಲ್ಟ್ರಾ-ಎಚ್‌ಡಿ ಸ್ಟ್ರೀಮಿಂಗ್ ಸೇವೆಗಳು ಏಪ್ರಿಲ್ 14 ರವರೆಗೆ ಸ್ಥಗಿತ

21 ದಿನಗಳ ಕಾಲ ದೇಶದ ಜನತೆ ಮನೆಯೊಳಗೆ ಇರಬೇಕೆಂದು ಪ್ರದಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂಟರ್ ನೆಟ್ ಸೇವೋ ಸುಗಮವಾಗಬೇಕೆಂಬ ದೃಷ್ಟಿಯಿಂದ ಎಲ್ಲಾ ಎಚ್.ಡಿ ಮತ್ತು ಅಲ್ಟ್ರಾ ಎಚ್ ಡಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: 21 ದಿನಗಳ ಕಾಲ ದೇಶದ ಜನತೆ ಮನೆಯೊಳಗೆ ಇರಬೇಕೆಂದು ಪ್ರದಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂಟರ್ ನೆಟ್ ಸೇವೋ ಸುಗಮವಾಗಬೇಕೆಂಬ ದೃಷ್ಟಿಯಿಂದ ಎಲ್ಲಾ ಎಚ್.ಡಿ ಮತ್ತು ಅಲ್ಟ್ರಾ ಎಚ್ ಡಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಜನ ಮನೆಯಲ್ಲಿರಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದು, ಮನೆಯಲ್ಲಿ ಇರುವವರಿಗೆ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಡಿಜಿಟಲ್ ಇಂಡಸ್ಟ್ರಿ ಈ ನಿರ್ಧಾರ ಕೈಗೊಂಡಿದೆ.  ನಿನ್ನೆ ನಡೆದ ಸಭೆಯಲ್ಲಿ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ಅಸಾಧಾರಣ ಕ್ರಮವಾಗಿ, ಎಲ್ಲಾ ಕಂಪನಿಗಳು ತಕ್ಷಣವೇ ಎಚ್‌ಡಿ ಮತ್ತು ಅಲ್ಟ್ರಾ-ಎಚ್‌ಡಿ ಸ್ಟ್ರೀಮಿಂಗ್ ಅನ್ನು ಎಸ್‌ಡಿ ವಿಷಯಕ್ಕೆ ಡೀಫಾಲ್ಟ್ ಮಾಡುವುದು ಅಥವಾ ಎಸ್‌ಡಿ ವಿಷಯವನ್ನು ಮಾತ್ರ ನೀಡುವುದು ಸೇರಿದಂತೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಈ ನಿರ್ಧಾರ ಏಪ್ರಿಲ್ 14 ರವೆರೆಗೂ ಮುಂದುವರೆಯಲಿದೆ.

ಮಂಗಳವಾರ ನಡೆದ ಸಭೆಯಲ್ಲಿ ಸ್ಟಾರ್ & ಡಿಸ್ನಿ ಇಂಡಿಯಾದ ಅಧ್ಯಕ್ಷ ಉದಯ್ ಶಂಕರ್ ಮತ್ತು ಎನ್.ಪಿ.ಸಿಂಗ್ (ಸೋನಿ), ಸಂಜಯ್ ಗುಪ್ತಾ (ಗೂಗಲ್), ಅಜಿತ್ ಮೋಹನ್ (ಫೇಸ್ಬುಕ್), ಸುಧಾಂಶು ವ್ಯಾಟ್ಸ್ (ವಯಾಕಾಮ್ 18), ಗೌರವ್ ಗಾಂಧಿ (ಅಮೆಜಾನ್ ಪ್ರೈಮ್ ವಿಡಿಯೋ), ಅಂಬಿಕಾ ಖುರಾನಾ (ನೆಟ್ಫ್ಲಿಕ್ಸ್), ಕರಣ್ ಬೇಡಿ (ಎಂಎಕ್ಸ್ ಪ್ಲೇಯರ್) ಮತ್ತು ವರುಣ್ ನಾರಂಗ್ (ಹಾಟ್ಸ್ಟಾರ್) ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com