ಕೋವಿಡ್-19 ಎಫೆಕ್ಟ್: ರುದ್ರಪ್ರಯಾಗ ಚಿತ್ರೀಕರಣ ಮುಂದೂಡಿದ ರಿಷಬ್ ಶೆಟ್ಟಿ 

ಎ;ಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿರ್ದೇಶಕ ರಿಷಬ್ ಶೆಟ್ಟಿ ಮಾರ್ಚ್ 26 ರಂದು ರುದ್ರಪ್ರಯಾಗ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಿತ್ತು ಆದರೆ ಈಗ ಕೋವಿಡ್ -19 ಹಾವಳಿ ಕಾರಣ ಮುಂದೂಡಲ್ಪಟ್ಟಿದೆ.
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

ಎ;ಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿರ್ದೇಶಕ ರಿಷಬ್ ಶೆಟ್ಟಿ ಮಾರ್ಚ್ 26 ರಂದು ರುದ್ರಪ್ರಯಾಗ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಿತ್ತು ಆದರೆ ಈಗ ಕೋವಿಡ್ -19 ಹಾವಳಿ ಕಾರಣ ಮುಂದೂಡಲ್ಪಟ್ಟಿದೆ.

ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿದ್ದಾರೆ.

ನಿರ್ದೇಶಕ ಶೆಟ್ಟಿತಮ್ಮ ಊರಾದ ಕುಂದಾಪುರಕ್ಕೆ ತರಳಿದ್ದು ಅಲ್ಲೇ ನೆಲೆಸಿದ್ದಾರೆ. ಈ ಬಿಡುವಿನ ವೇಳೆಯಲ್ಲಿ ಅವರು ತಮ್ಮ ಚಿತ್ರದ ಸ್ಕ್ರಿಪ್ಟ್ ಅನ್ನು ಮರುಪರಿಶೀಲನೆ ಮಾಡುತ್ತಿದ್ದಾರೆ. 

"ಶೂಟಿಂಗ್ ಗುರುವಾರದಿಂದ ಪ್ರಾರಂಭವಾಗಬೇಕಿತ್ತು, ಆದರೆ ಈಗ ನಾವು ಅದನ್ನು ಮುಂದೂಡಬೇಕಾಯಿತು. ಕಲಾವಿದರ ದಿನಾಂಕಗಳ ಲಭ್ಯತೆಗೆ ಅನುಗುಣವಾಗಿ ಮೊದಲ ವೇಳಾಪಟ್ಟಿಯನ್ನು ಈಗ ಪುನರ್ ಪರಿಶೀಲಿಸಬೇಕಿದೆ/ ಈಗಾಗಲೇ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದರಿಂದ ಮತ್ತು ಸಂಭಾಷಣೆಗಳು ಸಿದ್ಧವಾಗಿರುವುದರಿಂದ ನಾನೀಗ ಹೆಚ್ಚಿನ ಕಥೆಯಲ್ಲಿ ಸುಧಾರಿಸುವ ಕೆಲಸದಲ್ಲಿದ್ದೇನೆ"

ಏತನ್ಮಧ್ಯೆ ರಿಷಬ್ ಇನ್ನೂ ಎರಡು ಸ್ಕ್ರಿಪ್ಟ್‌ಗಳನ್ನು ಬರೆಯಲು ಮುಂದಾಗುತ್ತಿದ್ದಾರೆ.“ವಿಷಯಗಳು ಅಥವಾ ಪ್ರಕಾರವನ್ನು ಬಹಿರಂಗಪಡಿಸುವುದು ಈಗ ಸಾಧ್ಯವಿಲ್ಲ. , ಒಂದು ಕಥೆಯಲ್ಲಿ, ಹುಟ್ಟಿನಿಂದ 45 ವರ್ಷಗಳವರೆಗೆ ವ್ಯಕ್ತಿಯ ಜೀವನ ಪ್ರಯಾಣವನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಎಂದುನಾನು ಹೇಳಬಲ್ಲೆ.  ಎರಡನೆಯ ಕಥಾವಸ್ತುವು 1970 ರ ದಶಕದ ಒಂದು ಆಕ್ಷನ್ ಡ್ರಾಮಾ ಇದು ವಾಸ್ತವಕ್ಕೆ ಹತ್ತಿರವಾಗಲಿದೆ, ನಮ್ಮ ಸುತ್ತಮುತ್ತಲಿನ ಘಟನೆಗಳ ಸುತ್ತಲೂ ಕಥೆ ಹೆಣೆದಿದ್ದೇನೆ"ಅವರು ಹೇಳುತ್ತಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com