'ಗಂಧದಗುಡಿಯ ಗಂಧರ್ವರು': ಸ್ಯಾಂಡಲ್ ವುಡ್ ಕಲಾವಿದರ ಗಾಯನಕಲೆಗೆ ವೇದಿಕೆ!

ಲಾಕ್‌ಡೌನ್‌ನ ಈ ಕೊನೆಯ ಹಂತದಲ್ಲಿ ಪೇಕ್ಷಕರೊಡನೆ ಸಂಪರ್ಕ ಸಾಧ್ಯವಾಗಿಸಲು ನಿರ್ದೇಶಕ ರಘುರಾಮ್ ಸಂಗೀತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. "ಗಂಧದಗುಡಿಯ ಗಂಧರ್ವರು" ಎಂಬ ಹೆಸರಿನ ಈ ಸರಣಿಯಲ್ಲಿ ಗಾಯನ ಕೌಶಲ್ಯವನ್ನು ಹೊಂದಿರುವ ನಟರು, ಕಲಾವಿದರು ಇರಲಿದ್ದಾರೆ.
ಗಂಧದಗುಡಿಯ ಗಂಧರ್ವರು

ಶೋನಲ್ಲಿ ವಿಜಯ ರಾಘವೇಂದ್ರ, ರವಿಶಂಕರ್ ಗೌಡ, ಸುನಿಲ್ ರಾವ್, ಅನಿರುದ್ಧ್ ಮತ್ತು ನವೀನ್ ಕೃಷ್ಣ ಅವರು ಎವರ್ ಗ್ರೀನ್ ರೆಟ್ರೊ ಹಾಡುಗಳಿಗೆ ದನಿಯಾಗಲಿದ್ದಾರೆ.

"ಇಡೀ ಸಂಚಿಕೆಯನ್ನು ಸೃಜನ್ ಲೋಕೇಶ್  ನಿರೂಪಿಸಲಿದ್ದಾರೆ" ಎಂದು ನಿರ್ದೇಶಕರು ಹೇಳಿದ್ದು ಈ ಸರಣಿಯನ್ನು ಸ್ಯಾಂಡಲ್‌ವುಡ್‌ನ ಮೂರು ದೊಡ್ಡ ತಾರೆಯರು ಸ್ಯಾಂಡಲ್‌ವುಡ್‌ನ ಮೂರು "ಇದು ಸಂಭಾಷಣೆ-ಕಮ್ ಸಾಂಗ್ ನ ಕಾರ್ಯಕ್ರಮವಾಗಿದೆ. ಹತ್ತು ವಿವಿಧ ನಟರು ಹಾಡಿದ ಪ್ರತಿ ಹಾಡಿನ ಇತಿಹಾಸದ ವಿವರಗಳನ್ನು ಸೃಜನ್ ನೀಡಲಿದ್ದಾರೆ" ಎಂದು ಅವರು ವಿವರಿಸಿದ್ದಾರೆ.

ಪ್ರಸ್ತುತ ನಿರ್ದೇಶಕರು ಈಗ ಅವರ ಮನೆಯಲ್ಲಿ ಇದಾಗಲೇ  ಚಿತ್ರೀಕರಣಗೊಂಡಿರುವ ಮ್ಯೂಸಿಕಲ್ ಫೂಟೇಜ್‌ನ ಕೆಲಸದಲ್ಲಿ ನಿರತವಾಗಿದ್ದಾರೆ.45 ನಿಮಿಷಗಳ ಎಪಿಸೋಡ್ ಆನಂದ್ ಆಡಿಯೊದ ಯೂಟ್ಯೂಬ್ ಚಾನೆಲ್‌ನಲ್ಲಿ ಮೇ 15, 16 ಮತ್ತು 17 ರಂದು ಮೂರು ಸಂಚಿಕೆಗಳಾಗಿ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com