ಚಿತ್ರರಂಗದ ಸಂಕಷ್ಟವನ್ನೂ ಗಮನಿಸಿ: ಮುಖ್ಯಮಂತ್ರಿಗಳಿಗೆ ನಟಿ ತಾರಾ ಪತ್ರ

ಜಗತ್ತಿನಾದ್ಯಂತ ಮಾರಣಾಂತಿಕ ಕೊರೋನಾ ವೈರಾಣು ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯವೂ ಸಹ ಪೀಡನೆಯಿಂದ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ಕೋರಿ ಸರ್ಕಾರದ ಮೊರೆ ಹೊಕ್ಕಿದೆ. ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ,ನಟಿ  ತಾರಾ ಅನುರಾಧ, ಚಿತ್ರರಂಗಕ್ಕೂ ಸಹಾ
ಸಿಎಂ ಯಡಿಯೂರಪ್ಪ ಭೇಟಿಯಾದ ನಟಿ ತಾರಾ
ಸಿಎಂ ಯಡಿಯೂರಪ್ಪ ಭೇಟಿಯಾದ ನಟಿ ತಾರಾ

ಜಗತ್ತಿನಾದ್ಯಂತ ಮಾರಣಾಂತಿಕ ಕೊರೋನಾ ವೈರಾಣು ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯವೂ ಸಹ ಪೀಡನೆಯಿಂದ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ಕೋರಿ ಸರ್ಕಾರದ ಮೊರೆ ಹೊಕ್ಕಿದೆ. ಈ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ,ನಟಿ  ತಾರಾ ಅನುರಾಧ, ಚಿತ್ರರಂಗಕ್ಕೂ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.

ಕೋವಿಡ್ 19 ಸಂಕಷ್ಟದಿಂದ ಪೀಡಿತರಾಗಿರುವ ರಾಜ್ಯದ ವಿವಿಧ ವೃತ್ತಿಪರ ವಿಭಾಗಗಳಿಗಾಗಿ 16 00 ಕೋಟಿ ರೂಪಾಯಿಗಳ ಸಹಾಯ ಹಸ್ತ ಚಾಚಿರುವ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ನಟಿ ತಾರಾ, “ಚಿತ್ರರಂಗವೂ ಸಹ ವೃತ್ತಿಪರ ವಿಭಾಗವೇ ಆಗಿದ್ದು, ಕೊರೋನಾ ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿದೆ. ಹೀಗಾಗಿ ಈ ವಿಭಾಗವೂ ನೆರವು ಪಡೆಯಲು ಅರ್ಹವಾಗಿದ್ದು, ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು” ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಲಾಕ್ ಡೌನ್ ಆರಂಭವಾದ ದಿನದಿಂದಲೂ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧವಾಗಿವೆ. ಯಾವುದೇ ಹೊಸ ಚಿತ್ರಗಳು ಸೆಟ್ಟೇರಿಲ್ಲ. ಆರಂಭವಾಗಿರುವ ಚಿತ್ರಗಳ ಶೂಟಿಂಗ್ ಅರ್ಧಕ್ಕೇ ನಿಂತಿದೆ. “ಸದ್ಯಕ್ಕೆ ಚಿತ್ರೀಕರಣಕ್ಕೆ ಅವಕಾಶವಿಲ್ಲ. ರೆಕಾರ್ಡಿಂಗ್, ಡಬ್ಬಿಂಗ್ ಮೊದಲಾದ ಕಾರ್ಯಗಳನ್ನು ಮುಗಿಸಿಕೊಳ್ಳಿ” ಎಂದು ಕಂದಾಯ ಸಚಿವ ಆರ್. ಅಶೋಕ ಈಗಾಗಲೇ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com