ಅಕ್ಕ ಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ಖರೀದಿಸಿ: ವಿಜಯಲಕ್ಷ್ಮಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಲಾಕ್‍ಡೌನ್ ವೇಳೆ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Published: 22nd May 2020 09:39 AM  |   Last Updated: 22nd May 2020 12:32 PM   |  A+A-


Vijayalakshmi darshan

ವಿಜಯಲಕ್ಷ್ಮಿ ದರ್ಶನ್

Posted By : Shilpa D
Source : UNI

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಲಾಕ್‍ಡೌನ್ ವೇಳೆ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ವಿಜಯಲಕ್ಷ್ಮಿ,ಇದೀಗ ಲಾಕ್‍ಡೌನ್ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. “ಕೊರೊನಾ ಲಾಕ್‍ಡೌನ್‍ನಿಂದ ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ.

ಲಾಕ್‍ಡೌನ್ ಮುಗಿದ ನಂತರ ಸ್ಥಳೀಯ ಮಾರಾಟಗಾರರಿಂದ ತರಕಾರಿಗಳನ್ನು ಖರೀದಿಸಿ. ಸ್ಟಾರ್ ಹೋಟೆಲ್‍ಗೆ ಹೋಗಿ  ಕಾಫಿ ಕುಡಿಯುವ ಬದಲು ನಿಮ್ಮ ಮನೆಯ ಹತ್ತಿರ ಇವರ ಅಂಗಡಿಗೆ ಹೋಗಿ ಕಾಫಿ ಕುಡಿಯಿರಿ. ಅಮೆಜಾನ್ ಬದಲಿಗೆ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು  ಖರೀದಿಸಿ. ಈ ಕೊರೊನಾ ಮಹಾಮಾರಿ ವೇಳೆ ಸಣ್ಣ ವ್ಯಾಪಾರಿಗಳಿಗೆ ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ.

“ಅಮೆಜಾನ್, ಪಿಜ್ಜಾ, ಕೆಎಫ್‍ಸಿ, ಮ್ಯಾಕ್ ಡೊನಾಲ್ಡ್ ಲಾಕ್‍ಡೌನ್ ಇದ್ದರೂ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗುತ್ತದೆ ಎಂದು ಎಂದು ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp