ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಶೂಟಿಂಗ್  ನವೆಂಬರ್ 9 ರಿಂದ ಆರಂಭ

ಡಾಲಿ ಧನಂಜಯ ನಟನೆಯ ರತ್ನನ್ ಪ್ರಪಂಚ ಸಿನಿಮಾ ಶೂಟಿಂಗ್ ನವೆಂಬರ್ 9 ರಿಂದ ಆರಂಭವಾಗಲಿದೆ, ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.
ಧನಂಜಯ್
ಧನಂಜಯ್

ಡಾಲಿ ಧನಂಜಯ ನಟನೆಯ ರತ್ನನ್ ಪ್ರಪಂಚ ಸಿನಿಮಾ ಶೂಟಿಂಗ್ ನವೆಂಬರ್ 9 ರಿಂದ ಆರಂಭವಾಗಲಿದೆ, ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

ಶೂಟಿಂಗ್ ಗಾಗಿ ಚಿತ್ರತಂಡ ಸ್ಥಳಗಳನ್ನು ಗುರುತಿಸಿದ್ದು,  ಮೊದಲಿಗೆ ಮೈಸೂರು, ನಂತರ ಹಾವೇರಿಯಲ್ಲಿ ಶೂಟಿಂಗ್ ನಡೆಯಲಿದೆ, ಕಾಶ್ಮೀರದಲ್ಲಿ ಶೂಟಿಂಗ್ ನಡೆಸುವ ಸಾಧ್ಯತೆಯಿದೆ,

ಧನಂಜಯ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ನಟ, ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಹಾಸ್ಯಮಯ ಚಿತ್ರ ರತ್ನನ್ ಪ್ರಪಂಚ ಶೂಟಿಂಗ್ ಸೆಟ್ ಗೆ ಧನಂಜಯ ಶೀಘ್ರವೇ ಸೇರ್ಪಡೆಯಾಗಲಿದ್ದಾರೆ. ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಧನಂಜಯ್ ನಟಿಸಿದ್ದು, ರೆಬಾ ಮೋನಿಕಾ ನಾಯಕಿಯಾಗಿದ್ದಾರೆ.

ಇನ್ನೂ ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರಿ, ಐದು ವರ್ಷಗಳ ನಂತರ ಮತ್ತೆ ಸಿನಿಮಾಗಾಗಿ ಬಣ್ಣ ಹಚ್ಚುತ್ತಿದ್ದಾರೆ, ಮಧ್ಯಮ ವರ್ಗದ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದು,  ಶ್ರೀಶ ಕುಡವಲ್ಲಿ ಸಿನಿಮಾಟೋಗ್ರಫಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com