8 ವರ್ಷದ ನಂತರ ತೆರೆ ಮೇಲೆ ಮತ್ತೆ ಒಂದಾದ ಐಂದ್ರಿತಾ-ದಿಗಂತ್ ಜೋಡಿ!

ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಬರೋಬ್ಬರಿ ಎಂಟು ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.  ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಐಂದ್ರಿತಾ ರೇ ಅವರೇ ತಮ್ಮ ಟ್ವಿಟ್ತರ್ ಮೂಲಕ ಈ ವಿಷಯ ಬಹಿರಂಗಪಡಿಸಿದ್ದಾರೆ.

Published: 30th November 2020 10:37 AM  |   Last Updated: 30th November 2020 10:37 AM   |  A+A-


Posted By : Raghavendra Adiga
Source : Online Desk

ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಬರೋಬ್ಬರಿ ಎಂಟು ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.  ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಐಂದ್ರಿತಾ ರೇ ಅವರೇ ತಮ್ಮ ಟ್ವಿಟ್ತರ್ ಮೂಲಕ ಈ ವಿಷಯ ಬಹಿರಂಗಪಡಿಸಿದ್ದಾರೆ.

ವಿನಾಯಕ ಕೋಡ್ಸರ ನಿರ್ದೇಶನದ  ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’  ಎಂಬ ಚಿತ್ರದಲ್ಲಿ ಈ ಸ್ಯಾಂಡಲ್ ವುಡ್ ಜೋಡಿ ಒಂದಾಗಿದೆ. 

ಇದಕ್ಕೆ ಹಿಂದೆ 2012ರಲ್ಲಿ ತೆರೆ ಕಂಡ ‘ಪಾರಿಜಾತ’ ಚಿತ್ರದಲ್ಲಿ ಕಡೆಯ ಬಾರಿಗೆ ದಿಗಂತ್ ಹಾಗೂ ಐಂದ್ರಿತಾ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಐಂದ್ರಿತಾ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಮಲೆನಾಡಿನ ಮೋಹಕ ತಾಣದಲ್ಲಿ ಚಿತ್ರೀಕರಣ.  ನನ್ನ ಆಫ್ ಸ್ಕ್ರೀನ್ ಲವ್ ನೊಂದಿಗೆ 8 ವರ್ಷಗಳ ನಂತರ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಖುಷಿ" ಐಂದ್ರಿತಾ ಹೇಳಿದ್ದಾರೆ.

 

 

‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’  ಸಿಲ್ಕ್ ಮಂಜು ನಿರ್ಮಾಣದಲ್ಲಿ ತಯಾರಾಗುತ್ತಿದೆ. "ಕನ್ನಡತಿ" ಖ್ಯಾತಿಯ ರಂಜನಿ ರಾಘವನ್  ಈ ಚಿತ್ರದಲ್ಲಿ ಮತ್ತೊಬ್ಬ ಪ್ರಮುಖ ನಾಯಕಿಯಾಗಿದ್ದಾರೆ.  ಚಿತ್ರಕ್ಕೆ ರಜ್ವಲ್​ ಪೈ ಸಂಗೀತ ಸಂಯೋಜನೆ ಇದೆ. 

 

 


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp