ಲಾಕ್ ಡೌನ್ ನಂತರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿರೋ ಮೊದಲ ಚಿತ್ರ ಆರ್‌ಜಿವಿಯ 'ಕರೋನಾ ವೈರಸ್'

ಜಾಗತಿಕ ಕೊರೋನಾವೈರಸ್  ಸಾಂಕ್ರಾಮಿಕದಿಂದ  ಚಲನಚಿತ್ರೋದ್ಯಮ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ತಿಳಿದಿರುವ ಸಂಗತಿ. ಈ ಕಾರಣದಿಂದ ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳುಬಾಗಿಲು ಮುಚ್ಚಬೇಕಾಗಿದೆ.
ಲಾಕ್ ಡೌನ್ ನಂತರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿರೋ ಮೊದಲ ಚಿತ್ರ ಆರ್‌ಜಿವಿಯ 'ಕರೋನಾ ವೈರಸ್'

ಜಾಗತಿಕ ಕೊರೋನಾವೈರಸ್  ಸಾಂಕ್ರಾಮಿಕದಿಂದ  ಚಲನಚಿತ್ರೋದ್ಯಮ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ತಿಳಿದಿರುವ ಸಂಗತಿ. ಈ ಕಾರಣದಿಂದ ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳುಬಾಗಿಲು ಮುಚ್ಚಬೇಕಾಗಿದೆ.  ಆದರೆ ಈಗ ಬಂದಿರುವ ಸಂತಸದ ಸುದ್ದಿ ಎಂದರೆ ಇದೇ , ಅಕ್ಟೋಬರ್ 15 ರಿಂದ ಶೇ .50 ರಷ್ಟು ಪ್ರೇಕ್ಷಕರೊಂದಿಗೆ  ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಭಾರತ ಸರ್ಕಾರ ಅನುಮತಿ ನೀಡಿದೆ. ಈ ಸುದ್ದಿಯೊಂದಿಗೇ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಹ ಮತ್ತೊಂದು ಮಹತ್ವದ ಸುದ್ದಿ ನೀಡಿದ್ದಾರೆ. ಅದೆಂದರೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ "ಕರೋನಾ ವೈರಸ್" ಲಾಕ್ ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಮೊಟ್ಟ ಮೊದಲ ಚಿತ್ರವಾಗಿದೆ ಎಂದು ಘೋಷಿಸಿದ್ದಾರೆ.

ಅನ್ ಲಾಕ್ 5.0 ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲ ತೆಲುಗು ಚಿತ್ರ "ಕೊರೋನಾ ವೈರಸ್" ಆಗಿರಲಿದೆ.

ಚಿತ್ರದ ಟ್ರೈಲರ್ ಅನ್ನು ಹಂಚಿಕೊಳ್ಳುತ್ತಾ ನಿರ್ಮಾಪಕ ವರ್ಮಾ ತಮ್ಮ ಟ್ವಿಟ್ಟರ್ ನಲ್ಲಿ  '' ಅಂತಿಮವಾಗಿ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ತೆರೆದಿಯಲಿದೆ. ಕೊರೋನಾವೈರಸ್ ಲಾಕ್ ಡೌನ್ ನಂತರ ಬಿಡುಗಡೆಯಾಗುವ ಮೊದಲ ಚಿತ್ರ "ಕೊರೋನಾ ವೈರಸ್"ಎಂದು ಘೋಷಿಸಲು ಸಂತೋಷವಾಗಿದೆ. . '' ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com