
ಅಕಾಲದಲ್ಲಿ ಕಣ್ಮರೆಯಾಗಿ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ ಚಿರಂಜೀವಿ ಸರ್ಜಾರ ಮಗುವಿನ ಸ್ವಾಗತಕ್ಕೆ ಸರ್ಜಾ ಕುಟುಂಬ ಸಜ್ಜಾಗಿದೆ.
ಶನಿವಾರ ಅಕ್ಟೋಬರ್ 17 ರಂದು ಚಿರಂಜೀವಿ ಜನ್ಮದಿನ. ಮೇಘನಾ ರಾಜ್ ಅಂದೇ ಮಗುವಿಗೆ ಜನ್ಮ ನೀಡಲಿದ್ದಾರೆ. ಹೀಗಾಗಿ ಮಗುವನ್ನು ಸ್ವಾಗತಿಸುವ ಸುಂದರ ವಿಡಿಯೋವೊಂದನ್ನು ಕುಟುಂಬ ವರ್ಗವು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ.
ಈ ಸ್ಪೆಷಲ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಿರಂಜೀವಿ ಸರ್ಜಾ ಇಲ್ಲದ ನೋವನ್ನು ಜ್ಯೂನಿಯರ್ ಚಿರು ಮರೆಸಲಿ, ಮೇಘನಾ ಬಾಳಲ್ಲಿ ನಗು ತರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಚಿರಂಜೀವಿ ಸರ್ಜಾರ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಮೇಘನಾ ಮುಖದಲ್ಲಿ ನಗು ಮೂಡಿಸಲು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಶ್ರಮಿಸುತ್ತಿದ್ದಾರೆ.