ನೀನು ಹುಟ್ಟಿದಾಗ ಕುಣಿದಾಡಿದ್ದೆ, ಇಂದು ಈ ರೀತಿಯ ಸಾಲುಗಳ ಬರೆಯುತ್ತೇನೆ ಎಂದುಕೊಂಡಿರಲಿಲ್ಲ: ಚಿರು ನೆನೆದ ಅರ್ಜುನ್ ಸರ್ಜಾ

36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಕುಣಿದಾಡಿದ್ದೆ. ವಿಧಿಯ ಕೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಸಾಲುಗಳನ್ನು ಬರೆಯುತ್ತೇನೆಂದುಕೊಂಡಿರಲಿಲ್ಲ ಎಂದು ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 

Published: 17th October 2020 01:42 PM  |   Last Updated: 17th October 2020 01:45 PM   |  A+A-


Chiranjeevi Sarja and arjun sarja

ಚಿರಂಜೀವಿ ಸರ್ಜಾ ಮತ್ತು ಅರ್ಜುನ್ ಸರ್ಜಾ (ಸಂಗ್ರಹ ಚಿತ್ರ)

Posted By : Manjula VN
Source : Online Desk

ಬೆಂಗಳೂರು: 36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಕುಣಿದಾಡಿದ್ದೆ. ವಿಧಿಯ ಕೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಸಾಲುಗಳನ್ನು ಬರೆಯುತ್ತೇನೆಂದುಕೊಂಡಿರಲಿಲ್ಲ ಎಂದು ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 

ದಿವಂಗತ ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಮ್ ನಲ್ಲಿ ಅರ್ಜುನ್ ಸರ್ಜಾ ಅವರು ಚಿರು ನೆನೆದು ಭಾವನಾತ್ಮಕ ಸಾಲುಗಳನ್ನು ಬರೆದು, ಅಳಿಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 

36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಸಂತಸದಿಂದ ಕುಣಿದು ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಪದಗಳನ್ನು ಬರೆಯುತ್ತೇನೆಂದು ನನ್ನ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನೀನು ಯಾವಾಗಲೂ ನನ್ನ ಆಲೋಚನೆಯಲ್ಲಿರುವ ಮಗನೆ. ಲವ್ ಯು ಸೋ ಮಜ್ ಮೈ ಬೇಬಿ ಎಂದು ಬರೆದುಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಈ ಸಾಲುಗಳಿಗೆ ಹಲವಾರು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಶುಭಾಶಯಗಳನ್ನು ತಿಳಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp