ರ್ಯಾಂಪ್ ನಿಂದ ಸುಲಭವಾಗಿ ಬೆಳ್ಳಿ ತೆರೆ ಪ್ರವೇಶಿಸಿದ 'ಮಾದಕ' ನಟಿ ರಾಗಿಣಿ ನಡೆದು ಬಂದ ಹಾದಿ!
ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ನಂತರ ನಟಿಯಾಗಿ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಹೆಸರು ಪಡೆದವರು.
Published: 05th September 2020 11:14 AM | Last Updated: 05th September 2020 11:17 AM | A+A A-

ರಾಗಿಣಿ
ಬೆಂಗಳೂರು: ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ನಂತರ ನಟಿಯಾಗಿ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಹೆಸರು ಪಡೆದವರು.
ಪ್ಯಾಷನ್ ಗುರು ಬಿಡ್ಡಪ್ಪ ಅವರಿಂದ ಗುರುತಿಸಲ್ಪಟ್ಟ ರಾಗಿಣಿ 2008 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಮೂಲಕ ಗ್ಲಾಮರ್ ಜಗತ್ತಿನಲ್ಲಿ ಕಾಣಿಸಿಕೊಂಡರು, 2008 ರಲ್ಲಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ನಟಿ ರಾಗಿಣಿ ಪಂಜಾಬಿ ಮೂಲದದವರು.
ರಾಗಿಣಿಗೆ ಸೈನ್ಯದ ಸಂಪರ್ಕವಿದೆ. ಆಕೆಯ ತಂದೆ ರಾಕೇಶ್ ಕುಮಾರ್ ದ್ವಿವೇದಿ ಕೊಲೋನಿಯಲ್ ಆಗಿದ್ದವರು, ಆಕೆಯ ತಾಯಿ ಗೃಹಿಣಿ, ಮತ್ತು ಸಹೋದರ ರುದ್ರಾಕ್ಷ್ ಸಹ ವಸ್ತ್ರ ವಿನ್ಯಾಸಕರಾಗಿದ್ದರು.
ಮನೀಶ್ ಮಲ್ಹೋತ್ರಾ. ರೀತು ಕುಮಾರ್, ತರುಣ್ ತಹಿಲಾನಿ, ರೋಹಿತ್ ಬಾಲ್, ಸಬ್ಯಸಾಚಿ ಮುಖರ್ಜಿ ಮುಂತಾದ ಪ್ರಸಿದ್ಧ ಪ್ಯಾಶನ್ ಡಿಸೈನರ್ ಗಳ ಜೊತೆ ರಾಗಿಣಿ ಕೆಲಸ ಮಾಡಿದ್ದಾರೆ.
ಸುಮಾರು 30 ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಗಿಣಿ 2009 ರಲ್ಲಿ ಸುದೀಪ್ ನಟನೆಯ ವೀರ ಮದಕರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದರು. ನಂತರ ಕೆಂಪೇಗೌಡ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಮೂಲಕ ಅವರ ಸಿನಿಮಾ ಕೆರಿಯರ್ ಗೆ ಬ್ರೇಕ್ ನೀಡಿತ್ತು.
ಮಲಯಾಳಂ ನ ಕಂದಹಾರ್ ಸಿನಿಮಾ ಆಕೆಗೆ ಮತ್ತಷ್ಟು ಹೆಸರು ತಂದಿತು. ತಮಿಳಿನಲ್ಲು ರಾಗಿಣಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸಿದ್ದ ರಾಗಿಣಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುನ್ಸಿಪಲ್ ಕಾರ್ಪೋರೇಷನ್ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿದ್ದರು. ಈ ನಟಿಗೆ ವಿವಾದ ಹೊಸದಲ್ಲ, ಆದರೆ ಇವರಿಗೆ ತಮ್ಮದೇ ಆದ ಫ್ಯಾನ್ ಫಾಲೋ ಇದೆ.
ಶಂಕರ್ ಐಪಿಎಸ್, ಕಳ್ಳಮಳ್ಳ ಸುಳ್ಳ, ರಾಗಿಣಿ ಐಪಿಎಸ್, ಕಾಂಚನ, ಆರಕ್ಷಕ, ಮತ್ತು ಶಿವಂ, 2019ರ ಅಧ್ಯಕ್ಷ ಇನ್ ಅಮೆರಿಕಾ ರಾಗಿಣಿ ನಟನೆಯ ಕೊನೆಯ ಸಿನಿಮಾ. ಶಿವರಾಜ್ ಕುಮಾರ್, ಉಪೇಂದ್ರ, ಮುಮ್ಮಟಿ ಮುಂತಾದ ಸ್ಟಾರ್ ಗಳ ಜೊತೆ ರಾಗಿಣಿ ನಟಿಸಿದ್ದಾರೆ.