ನಟಿ ರಾಗಿಣಿ ಮನೆ ಮಾರಾಟಕ್ಕಿದೆ!

ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾದ ಬೆನ್ನಲ್ಲೇ ಆಕೆ ಪ್ರೀತಿಯಿಂದ ಖರೀದಿಸಿದ್ದ ಅಪಾರ್ಟ್ ಮೆಂಟ್ ಮಾರಾಟಕ್ಕಿಡಲಾಗಿದೆ. 
ನಟಿ ರಾಗಿಣಿ ಮನೆ ಮಾರಾಟಕ್ಕಿದೆ!

ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾದ ಬೆನ್ನಲ್ಲೇ ಆಕೆ ಪ್ರೀತಿಯಿಂದ ಖರೀದಿಸಿದ್ದ ಅಪಾರ್ಟ್ ಮೆಂಟ್ ಮಾರಾಟಕ್ಕಿಡಲಾಗಿದೆ. 

ಯಲಹಂಕದ ನ್ಯಾಯಾಂಗ ಬಡವಾಣೆಯ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿ ರಾಗಿಣಿ ಅವರ 2 ಫ್ಲ್ಯಾಟ್ ಇದ್ದು, ಇದೀಗ ಅದರಲ್ಲಿ ಒಂದನ್ನು ರಾಗಿಣಿ ತಂದೆ ರಾಕೇಶ್ ದ್ವಿವೇದಿ ಮಾರಾಟ ಮಾಡಲು ಮುಂದಾಗಿದ್ದು, ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ.

ಈ ಫ್ಯ್ಲಾಟ್‌ನ ಮಾಲೀಕರು ರಾಗಿಣಿ ತಂದೆಯೇ ಆಗಿದ್ದು, 3 ಬಿಹೆಚ್‌ಕೆ ಫ್ಲ್ಯಾಟ್ ಇದಾಗಿದೆ. 

ಈ ಮನೆ ಮಾರುವುದರ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ರಾಗಿಣಿಗೆ ಸೇರಿದ್ದ ಇದೇ ಅಪಾರ್ಟ್‌ಮೆಂಟ್  ಮೇಲೆ ಸಿಸಿಬಿ ದಾಳಿ ನಡೆದಿತ್ತು. ಸುಮಾರು ನಾಲ್ಕು ಗಂಟೆ ಕಾಲ ಸಿಸಿಬಿ ರೇಡ್ ನಡೆದ ನಂತರ ನಟಿಯನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನು ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಗೆ ನಿನ್ನೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com