ಆಧುನಿಕ ಶಿಕ್ಷಣದಲ್ಲಿನ ಸಮಸ್ಯೆಗಳ ಬಿಂಬಿಸುವ ಕಿರುಚಿತ್ರ 'ಐ ಆಮ್ ಎನಫ್'

2005ರ ಘಟನೆಯೊಂದನ್ನು ಆಧರಿಸಿ  ಥಿಯೇಟರ್ ಫಾರ್ ಚೇಂಜ್ ಸಂಸ್ಥಾಪಕಿ ಸುಜಾತ ಬಾಲಕೃಷ್ಣನ್ ಕಳೆದೆರಡು ತಿಂಗಳಿನಿಂದ "ಐ ಆಮ್ ಎನಫ್" ಎಂಬ ಕಿರುಚಿತ್ರದ ತಯಾರಿ ನಡೆಸಿದ್ದಾರೆ. 
ಐ ಆಮ್ ಎನಫ್ ಚಿತ್ರದ ದೃಶ್ಯ
ಐ ಆಮ್ ಎನಫ್ ಚಿತ್ರದ ದೃಶ್ಯ

2005ರ ಘಟನೆಯೊಂದನ್ನು ಆಧರಿಸಿ  ಥಿಯೇಟರ್ ಫಾರ್ ಚೇಂಜ್ ಸಂಸ್ಥಾಪಕಿ ಸುಜಾತ ಬಾಲಕೃಷ್ಣನ್ ಕಳೆದೆರಡು ತಿಂಗಳಿನಿಂದ "ಐ ಆಮ್ ಎನಫ್" ಎಂಬ ಕಿರುಚಿತ್ರದ ತಯಾರಿ ನಡೆಸಿದ್ದಾರೆ. 

“ಇದು ಸ್ಕ್ರೀನ್ ಗಾಗಿ ತಯಾರಿಸಿದ ನಾಟಕವಾಗಿದೆ, ಆದರೆ ನಾವು ಜನರಿಗೆ ತಲುಪಿಸಲು ಯತ್ನಿಸುತ್ತಿರುವ ಬಲವಾದ ಸಂದೇಶವೂ ಸಹ ಇದರ ಹಿಂದಿದೆ. ನಾವು ಹೆಲಿಕಾಪ್ಟರ್ ಪಾಲನೆಯ ಯುಗದಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಮಕ್ಕಳ ಸ್ವಯಂ ಬೆಳವಣಿಗೆ ಹಾಗೂ ಬುದ್ದಿಮತ್ತೆಯನ್ನು ಅವರು ಶಾಲೆಗಳಲ್ಲಿ ಪಡೆದ ಅಂಕಗಳಿಂಡ ವ್ಯಾಖ್ಯಾನಿಸಲಾಗುತ್ತಿದೆ" ಅವರು ಹೇಳಿದ್ದಾರೆ.  ಚಿತ್ರಕಥೆಯನ್ನು ಬರೆದಿರುವ ಬಾಲಕೃಷ್ಣನ್, ಬೀಯಿಂಗ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ 15 ನಿಮಿಷಗಳ ಚಿತ್ರವನ್ನು ರಂಗಭೂಮಿ ಹಿನ್ನೆಲೆಯ ಪೂಜಾ ಪಾಂಡೆ ತ್ರಿಪಾಠಿ ನಿರ್ಮಾಣ, ನಿರ್ದೇಶನ ಮಾಡಿದ್ದಾರೆ. ಉಷಾ ರಾವ್ ಸಂಕಲನ ಹಾಗೂ ಕ್ಯಾಮೆರಾ  ಕೆಲಸ ನೆರವೇರಿಸಿದ್ದಾರೆ. "ಮಕ್ಕಳ ನಡುವೆ ಹೋಲಿಕೆ ಮಾಡುವುದು ಅವರಲ್ಲಿ ಋಣಾತ್ಮಕ ಬಾವನೆ ಮೂಡಿಸುತ್ತದೆ."

ಒಂದು ಚಿಕ್ಕ ಸಸ್ಪೆನ್ಸ್ ನೊಂದಿಗೆ ಚಿತ್ರವು ಮಕ್ಕಳ ಸಮಗ್ರ ಅಭಿವೃದ್ದಿಯ ಬಗ್ಗೆ ಪೋಷಕರಿಗೆ ಬಲವಾದ ಸಂದೇಶವನ್ನು ರವಾನಿಸುವುದು ಖಚಿತವಾಗಿದೆ. ಈ  ಕಾಲದ  ಭಾರತೀಯ ಶಿಕ್ಷಣದ ಕುರಿತು ಸಂವಾದವನ್ನು ಪ್ರಾರಂಭಿಸಲು ನಾವು ಪೋಷಕರನ್ನು ತಲುಪುತ್ತಿದ್ದೇವೆ, ”ಎಂದು ಅವರು ಹೇಳುತ್ತಾರೆ.  ಅವರ ಸ್ನೇಹಿತರಾದ ಸಾತ್ವಿಕಿ ತ್ರಿಪಾಠಿ ಮತ್ತು ಶ್ರೇಯಾ ರಾವ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಇನ್ನು ಈ ಚಿತ್ರವನ್ನು ನೇರವಾಗಿ ಚಿತ್ರಮಂದಿರ ಅಥವಾ ಆನ್ ಲೈನ್ ಮೂಲಕ ಬಿಡುಗಡೆ ಮಾಡಬೇಕೆ ಅಥವಾ ಚಲನಚಿತ್ರೋತ್ಸವಗಳಿಗೆ ಕಳುಹಿಸಬೇಕೆ ಎಂದು ಅವರು ಯೋಚಿಸುತ್ತಿದ್ದಾರೆ. ಕುತೂಹಲಕಾರಿಯಾಗಿ, ಬಾಲಕೃಷ್ಣನ್ ತಮ್ಮ ಹರೆಯದ ಮಗಳ ನಡವಳಿಕೆಗಳ ಬಗೆಗಿನ ತೊಂದರೆ ಅನುಭವಿಸುತ್ತಿದ್ದ ವೇಳೆ ಆಕೆ ತಾವೇ ಮನಶ್ಶಾಸ್ತ್ರಜ್ಞಳಾಗಲು ನಿರ್ಧರಿಸಿದ್ದರು,  "ಇದು ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು, ಮತ್ತು ನನ್ನ ಮಗಳು ಮತ್ತು ನಾನು ಎದುರಿಸಿದ ಸಮಸ್ಯೆಗಳ ಬಗ್ಗೆ ಚಲನಚಿತ್ರ ಮಾಡಲು ನಾನು ಇನ್ನೊಂದು ಚಿತ್ರ ಮಾಡಲು ಯೋಜಿಸುತ್ತಿದ್ದೇನೆ"ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com