ಹಿಂದಿ ವಿರುದ್ಧವಲ್ಲ ಆದರೆ ಕನ್ನಡಕ್ಕಾಗಿ ನಮ್ಮ ಹೋರಾಟ: ಪವನ್ ಕುಮಾರ್

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ, ಮತ್ತು ಬಹುಶಃ ಭಾರತದಲ್ಲೇ ಇದು ಮೊದಲ ಬಾರಿಗೆ, ಸುಮಾರು ಒಂದು ಡಜನ್ ಚಲನಚಿತ್ರ ನಿರ್ದೇಶಕರು ಒಂದೇ ಉದ್ದೇಶದೊಂದಿಗೆ ಒಂದು ಚಲನಚಿತ್ರವನ್ನು ನಿರ್ಮಿಸಲು ಒಗ್ಗೂಡಿದ್ದಾರೆ.
ಪವನ್ ಕುಮಾರ್ ಕ
ಪವನ್ ಕುಮಾರ್ ಕ

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ, ಮತ್ತು ಬಹುಶಃ ಭಾರತದಲ್ಲೇ ಇದು ಮೊದಲ ಬಾರಿಗೆ, ಸುಮಾರು ಒಂದು ಡಜನ್ ಚಲನಚಿತ್ರ ನಿರ್ದೇಶಕರು ಒಂದೇ ಉದ್ದೇಶದೊಂದಿಗೆ ಒಂದು ಚಲನಚಿತ್ರವನ್ನು ನಿರ್ಮಿಸಲು ಒಗ್ಗೂಡಿದ್ದಾರೆ. ಸೆನ್ಸಾರ್ ಮಂಡಳಿ ಕನ್ನಡ ಚಿತ್ರಗಳಿಗೆ ಕನ್ನಡದಲ್ಲೇ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿಸಿದ್ದ ನಿರ್ದೇಶಕರು ರಾಜ್ಯದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಇದನ್ನು ಹಿಂದಿ ವಿರೋಧಿ ಚಳುವಳಿ ಎಂದು ಕರೆಯದೆ ಕನ್ನಡ ಪರ ಚಳುವಳಿ ಎಂದು ಕರೆದುಕೊಂಡಿದ್ದಾರೆ.

ಯೋಜನೆಗೆ ಖ್ಯಾತ ನಿರ್ದೇಶಕರಾದ ಎಂ ಎಸ್ ಸತ್ಯು, ಕೆ ಎಂ ಚೈತನ್ಯ, ಪವನ್ ಕುಮಾರ್, ಪಿ ಶೇಷಾದ್ರಿ, ಅರವಿಂದ್ ಶಾಸ್ತ್ರಿ, ಗಿರಿರಾಜ್ ಬಿಎಂ, ಸುನಿಮತ್ತು ಗೌತಮ್ ಅಯ್ಯರ್ ಮುಂತಾದವರ ಬೆಂಬಲವಿದೆ. ಪ್ರತಿಯೊಬ್ಬರೂ ಸುಮಾರು 15 ನಿಮಿಷಗಳ ಅವಧಿಯ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದು ಈ ಚಲನಚಿತ್ರಗಳು ಒಂದು ವೈಶಿಷ್ಟ್ಯಪೂರ್ಣ ಚಲನಚಿತ್ರವಾಗಿ ಸಂಯೋಜಿಸಲ್ಪಡುತ್ತವೆ ಮತ್ತು ಸೆನ್ಸಾರ್ ಮಂಡಳಿಯ ಪ್ರಮಾಣೀಕರಣಕ್ಕಾಗಿ ಸಲ್ಲಿಸಲ್ಪಡುತ್ತದೆ.  "ಇದು ಸಕಾರಾತ್ಮಕ ಕ್ಷಣವಾಗಿದೆ" ಎಂದು ಪವನ್ ಕುಮಾರ್  ತಮ್ಮ ಚಲನಚಿತ್ರ ನಿರ್ಮಾಪಕಯುನೈಟೇಡ್ ಕ್ಲಬ್ ಯೋಜನೆ ಬಗೆಗೆ ಹೇಳಿದ್ದಾರೆ. 

ಕನ್ನಡ ಚಿತ್ರಗಳಿಗೆ ಇದುವರೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೆನ್ಸಾರ್ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಇದಕ್ಕಾಗಿ . "ಸ್ಥಳೀಯ ಭಾಷೆಯನ್ನು ಕಡೆಗಣಿಸಲಾಗಿದೆ," ಅವರು ಒತ್ತಿ ಹೇಳಿದ್ದಾರೆ. "ಕನ್ನಡ ಚಿತ್ರಗಳಿಗೆ ಸೆನ್ಸಾರ್ ಮಂಡಳಿ ಕನ್ನಡದಲ್ಲೇ ಪ್ರಮಾಣಪತ್ರ ನೀಡಬೇಕೆನ್ನುವುದು ನನ್ನ ಉದ್ದೇಶ. ಮತ್ತು ಈ ನಿಟ್ಟಿನಲ್ಲಿ ನಾವೆಲ್ಲ ಸೇರಿ ಚಲನಚಿತ್ರ ನಿರ್ಮಾಣಕ್ಕೆ ಸೇರಿರುವುದು ಇದು ಮೊದಲ ಹೆಜ್ಜೆಯಾಗಿದೆ.  ಚಲನಚಿತ್ರಯಾವ ಭಾಷೆಯಲ್ಲಿರುವುದೋ ಅದೇ ಭಾಷೆಯಲ್ಲಿ ಪ್ರಮಾಣಪತ್ರ ಇರಬೇಕೆಂದು ನಾವು ಒತ್ತಾಯಿಸುತ್ತೇವೆ" 

ಈ ಹನ್ನೆರಡಕ್ಕೂ ಹೆಚ್ಚಿನ ನಿರ್ದೇಶಕರು ಸೇರಿ ತಯಾರಿಸಿದ ಚಿತ್ರವನ್ನು  ಕನ್ನಡ ರಾಜ್ಯೋತ್ಸವದ ದಿನ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ. ತಂಡವು ಪ್ರಸ್ತುತ ಯೋಜನೆಗೆ ಸಿದ್ಧತೆ ನಡೆಸುತ್ತಿದೆ. ಚಿತ್ರ ಸಿದ್ಧವಾದ ನಂತರ ಅವರು ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. “ನಾವು ಸೆನ್ಸಾರ್ ಮಂಡಳಿಯ ನಿಯಮಗಳಿಗೆ ಬದ್ಧರಾಗಿರುತ್ತೇವೆ, ಆದರೆ ನಮ್ಮ ಏಕೈಕ ವಿನಂತಿಯೆಂದರೆ ನಾವು ಕನ್ನಡದಲ್ಲಿ ಪ್ರಮಾಣಪತ್ರವನ್ನು ಪಡೆಯಬೇಕೇ ಹೊರತು ಹಿಂದಿಯಲ್ಲಿ ಅಲ್ಲ. ಮಂಡಳಿಯು ನಮ್ಮ ವಿನಂತಿಯನ್ನು ಪರಿಗಣಿಸದಿದ್ದರೆ, ನಾವು ಪ್ರಮಾಣಪತ್ರವಿಲ್ಲದೆ ಚಿತ್ರವನ್ನು ಪ್ರದರ್ಶಿಸುತ್ತೇವೆ ”ಎಂದು ಪವನ್ ವಿವರಿಸುತ್ತಾರೆ.

ಛಾಯಾಗ್ರಹಣ ಕಾಯ್ದೆಯ ಅನುಸಾರರ ಪ್ರಮಾಣಪತ್ರವನ್ನು ಪ್ರಸ್ತುತಪಡಿಸದೆ ಚಲನಚಿತ್ರವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದೆ. ಆದರೆ ಹಾಗೊಮ್ಮೆ ನಾವು ಕನ್ನಡದಲ್ಲಿ ಪ್ರಮಾಣಪತ್ರ ಪಡೆದುಕೊಳ್ಳಲು ವಿಫಲವಾಗಿ ಪ್ರಮಾಣಪತ್ರವಿಲ್ಲದೆ ಚಿತ್ರ ಪ್ರದರ್ಶಿಸಿದರೆ ಅದು ಬಹು ದೊಡ್ಡ ಅಪರಾಧವಾಗಲಿದೆ.  ಆದರೆ ನಮ್ಮದು ಸದುದ್ದೇಶದ ಹಿನ್ನೆಲೆಯ ಹೋರಾಟ  ” ಈ ಉಪಕ್ರಮಕ್ಕೆ ಸೇರಲು ತಂಡವು ಹೆಚ್ಚಿನ ಚಲನಚಿತ್ರ ನಿರ್ದೇಶಕರನ್ನು ಸಂಪರ್ಕಿಸುತ್ತಿದೆ ಮತ್ತು ಸ್ಥಳೀಯ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಂತಹ ವಿಷಯಗಳೊಂದಿಗೆ ಬರಲು ಬರಹಗಾರರನ್ನು ಆಹ್ವಾನಿಸಿದೆ.

ನಿರ್ದೇಶಕ ಚೈತನ್ಯ ಅವರ ಪ್ರಕಾರ, ದೇಶಾದ್ಯಂತ ಹಿಂದಿ ಹೇರಿಕೆ ವಿರುದ್ಧ ವಿವಿಧ ರೀತಿಯ ಪ್ರತಿಭಟನೆಗಳು ನಡೆದಿವೆ. “ನಮ್ಮಲ್ಲಿ ಜನರು ಟಿ-ಶರ್ಟ್ ಧರಿಸಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ನಡೆಸುತ್ತಿದ್ದಾರೆ ಬೀದಿಗಳಲ್ಲಿ ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. ಎಷ್ಟೇ ಸಣ್ಣದಾದರೂ ಒಂದು ವ್ಯತ್ಯಾಸ ತರುವುದು ನಮ್ಮ ಉದ್ದೇಶ. . ನಮ್ಮ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ಕನ್ನಡದಲ್ಲಿ ಪಡೆಯುವಲ್ಲಿ ನಾವು ಯಶಸ್ವಿಯಾದರೆ, ಅದು ಮಹತ್ವದ ವಿಜಯವಾಗಿರುತ್ತದೆ ”ಎಂದು ಅವರು ಹೇಳುತ್ತಾರೆ. ಹೋರಾಟವು ಹಿಂದಿ ಅಥವಾ ಬೇರೆ ಯಾವುದೇ ಭಾಷೆಯ ವಿರುದ್ಧವಲ್ಲ ಎಂದ ಚೈತನ್ಯ . “ನಮ್ಮ ಹೋರಾಟವು ಕನ್ನಡಕ್ಕಾಗಿ, ಮತ್ತು ನಾವು ತರಲು ಬಯಸುವ ಈ ಬದಲಾವಣೆ . ನನ್ನ ಭಾಷೆಯಲ್ಲಿ ನನಗೆ ಸೇವೆ ಮಾಡುವ ನನ್ನಬಯಕೆಯಾಗಿದ್ದು ಅದುವೇ ಈ ಚಿತ್ರದ ಧ್ಯೇಯವಾಕ್ಯವಾಗಿರುತ್ತದೆ. ”ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com