ದೀಪಿಕಾಗೆ ಎನ್‍ಸಿಬಿ ಬುಲಾವ್: ನಟಿಯನ್ನು ಆದರ್ಶವೆಂದು ಹಿಂಬಾಲಿಸುತ್ತಿದ್ದವರಿಗೆ ಬೇಸರವಾಗಿದೆ- ಮಾಳವಿಕಾ

ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ  ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ  ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ,, ರಾಜಕಾರಣಿ ಮಾಳವಿಕಾ  ಬೇಸರ ವ್ಯಕ್ತಪಡಿಸಿದ್ದಾರೆ.

Published: 25th September 2020 03:13 PM  |   Last Updated: 25th September 2020 03:36 PM   |  A+A-


ಮಾಳವಿಕಾ ದೀಪಿಕಾ ಪಡುಕೋಣೆ

Posted By : Raghavendra Adiga
Source : Online Desk

ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ, ರಾಜಕಾರಣಿ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಈ ಬಗ್ಗೆ ಪ್ರತಿಕ್ರಯಿಸಿರುವ ಮಾಳವಿಕಾ "ದೀಪಿಕಾ ಅವರನ್ನು ರೋಲ್ ಮಾಡಲ್ ಆಗಿ ಅನುಸರಿಸಿರುವವರಿಗೆ ಈ ಬೆಳವಣಿಗೆ ನಿಜಕ್ಕೂ ಬೇಸರಕ್ಕೆ ಕಾರಣವಾಗಿದೆ" ಎಂದಿದ್ದಾರೆ.

"ಖಿನ್ನತೆ ಎಂಬ ಕಥೆ ಹೇಳಿ ಸಾಮಾಜಿಕ ಕಳಕಳಿಯ ಬಗೆಗೆ ಪ್ರಚಾರ ಪಡೆದಿದ್ದ ನಟಿ ದೀಪಿಕಾಗೆ ಇಂದು "ಮಾಲ್"ನ ಹೊಗೆಯು ಆವರಿಸಿದೆ. ಇದರಿಂದ ಅವರನ್ನು ರೋಲ್ ಮಾಡೆಲ್ (ಆದರ್ಶ) ಆಗಿ ಅನುಸರಿಸಿದ್ದವರಿಗೆ ಇದರಿಂದ ಬೇಸರವಾಗಿದೆ" ಮಾಳವಿಕಾ ಟ್ವೀಟ್ ಮಾಡಿದ್ದಾರೆ.

 

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಡ್ರಗ್ಸ್ ಪ್ರಕರಣ ಸಂಬಂಧ ನಟಿ ದೀಪಿಕಾ ಹಾಗೂ ಇತರೆ ಟಾಪ್ ನಟಿಯರನ್ನು ಎನ್‍ಸಿಬಿ ತನಿಖೆಗೆ ಆಹ್ವಾನಿಸಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp