ಮುಂದಿನ ವಾರದಿಂದ ರಿಯಲ್ ಸ್ಟಾರ್ ನಟನೆಯ 'ಲಗಾಮ್' ಶೂಟಿಂಗ್ ಪ್ರಾರಂಭ

ಏಪ್ರಿಲ್ 26 ರಿಂದ ಚಿತ್ರೀಕರಣ ಪ್ರಾರಂಭಕ್ಕೆ ನಿರ್ಮಾಪಕರು ಯೋಜಿಸುತ್ತಿರುವ ಕಾರಣ ಉಪೇಂದ್ರ-ಕೆ ಮಾದೇಶ್ ಜೋಡಿಯ "ಲಗಾಮ್" ನ ಮಹೂರ್ತ ಸೋಮವಾರ ನೆರವೇರಿದೆ. ಪ್ರಸ್ತುತ "ಕಬ್ಜ" ಚಿತ್ರದ ಶೂಟಿಂಗ್ ನಲ್ಲಿರುವ  ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಯೋಜನೆಯ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. 
ಉಪೇಂದ್ರ, ಹರಿಪ್ರಿಯಾ
ಉಪೇಂದ್ರ, ಹರಿಪ್ರಿಯಾ
Updated on

ಏಪ್ರಿಲ್ 26 ರಿಂದ ಚಿತ್ರೀಕರಣ ಪ್ರಾರಂಭಕ್ಕೆ ನಿರ್ಮಾಪಕರು ಯೋಜಿಸುತ್ತಿರುವ ಕಾರಣ ಉಪೇಂದ್ರ-ಕೆ ಮಾದೇಶ್ ಜೋಡಿಯ "ಲಗಾಮ್" ನ ಮಹೂರ್ತ ಸೋಮವಾರ ನೆರವೇರಿದೆ. ಪ್ರಸ್ತುತ "ಕಬ್ಜ" ಚಿತ್ರದ ಶೂಟಿಂಗ್ ನಲ್ಲಿರುವ  ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಯೋಜನೆಯ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. 

"ಇದು ರಾಜಕೀಯ ವಿಡಂಬನೆಯಾಗಿರಲಿದೆ. ಹಣ ವರ್ಗಾವಣೆಯ ಸುತ್ತ ಕಥೆ ಸುತ್ತುವರಿಯುತ್ತದೆ " ಎಂದು ನಿರ್ದೇಶಕರು ಹೇಳುತ್ತಾರೆ, ಈ ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ  ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಸಾಧು ಕೋಕಿಲಾ, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಹಲವರು ತಂಡದಲ್ಲಿದ್ದಾರೆ.

"ಈ ಚಿತ್ರವು ದೊಡ್ಡ ಪಾತ್ರವರ್ಗವನ್ನು ಹೊಂದಿರಲಿದೆ.ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಸಿದ್ಧ ಟಾಲಿವುಡ್ ನಟರಾದ ಪ್ರಭು ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಅವರನ್ನು ಸಂಪರ್ಕಿಸಲಿದ್ದೇವೆ. " ಮಾದೇಶ್ ಹೇಳಿದ್ದಾರೆ. ಚಿತ್ರವನ್ನು ಎಂ ಆರ್ ಗೌಡ ನಿರ್ಮಿಸಿದ್ದು  , ಇಡೀ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ. "ಲಗಾಮ್"ಎಂ ಎಸ್ ರಮೇಶ್ ಬರೆದ ಸಂಭಾಷಣೆಗಳನ್ನು ಹೊಂದಿದ್ದರೆ ರಾಜೇಶ್  ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲಾ ಹಿನ್ನೆಲೆ ಸಂಗೀತವಿರಲಿದೆ.

ಉಪೇಂದ್ರ ಇದಾಗಲೇ "ಹೋಂ ಮಿನಿಸ್ಟರ್", "ತ್ರಿಶೂಲ", "ಬುದ್ದಿವಂತ 2" ಸೇರಿ ಅನೇಕ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು "ಅಮೃತಮತಿ" ಚಿತ್ರಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಕೆಲಸ ಮಾಡಿದ ಹರಿಪ್ರಿಯಾ, ಈ ಮಧ್ಯೆ, ಕಸ್ತೂರ್ಬಾ ಗಾಂಧಿಯವರ ಜೀವನಚರಿತ್ರೆಗಾಗಿ  ಮತ್ತೆ ಬರಗೂರು ಅವರೊಡನೆ ಜತೆಯಾಗಲಿದ್ದಾರೆ. ಇದಕ್ಕೆ "ತಾಯಿ ಕಸ್ತೂರ್ಬಾ ಗಾಂಧಿ" ಎಂದು ಹೆಸರಿಡಲಾಗಿದೆ. ಇನ್ನು . ಶಶಾಂಕ್ ಅವರ ಇನ್ನೂ ಹೆಸರಿಡದ ಚಿತ್ರಕ್ಕಾಗಿ ಹರಿಪ್ರಿಯಾ ಉಪೇಂದ್ರ ಅವರಿಗೆ ಜೋಡಿಯಾಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com