ಪೃಥ್ವಿ ಅಂಬರ್ ನಟನೆಯ 'ಲೈಫ್ ಈಸ್ ಬ್ಯೂಟಿಫುಲ್’ ಚಿತ್ರೀಕರಣ ಪೂರ್ಣ

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

‘ಮಮ್ಮಿ’ ಸಿನಿಮಾ ಖ್ಯಾತಿಯ ಲೋಹಿತ್ ಅವರು ಚಿತ್ರದ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ನಿರ್ದೇಶನದ ಹೊಣೆಯನ್ನು ಅರುಣ್‌ಕುಮಾರ್ ಹಾಗೂ ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ವಹಿಸಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸವೊಂದೇ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.

ಇನ್ನು ಚಿತ್ರ ಬಿಡುಗಡೆ ದಿನಾಂಕ ಕುರಿತು ಕೊರೋನಾ ಸಾಂಕ್ರಾಮಿಕ ರೋಗ ಪರಿಸ್ಥಿತಿ ಅಧಾರಿಸಿ ನಿರ್ಧಾರ ಕೈಗೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಒಟಿಟಿ ಆಯ್ಕೆಯನ್ನೂ ನೋಡಲಾಗುತ್ತಿದೆ ಎಂದು ಲೋಹಿತ್ ಅವರು ಹೇಳಿದ್ದಾರೆ. 

ಚಿತ್ರ ಅತ್ಯುತ್ತಮ ಕಥೆಯನ್ನು ಹೊಂದಿದೆ. ಮೊದಲ ಬಾರಿಗೆ ಚಿತ್ರ ನಿರ್ಮಾಪಕನಾಗಿದ್ದು, ಲೈಫ್ ಈಸ್ ಬ್ಯೂಟಿಫುಲ್ ಜರ್ನಿಯನ್ನು ಬಹಳ ಎನ್ಜಾಯ್ ಮಾಡಿದೆ. ಚಿತ್ರದ ಚಿತ್ರೀಕರಣದ ಸಂಪೂರ್ಣ ಪ್ರಕ್ರಿಯೆ ಅತ್ಯುತ್ತಮ ಅನುಭವವನ್ನು ನೀಡಿದೆ. ಚಿತ್ರ ನೋಡಿದ ಬಳಿಕ ಪ್ರೇಕ್ಷಕರೂ ಇದೇ ರೀತಿಯ ಅನುಭವ ಹೊಂದಲಿದ್ದಾರೆಂದು ಲೋಹಿತ್ ತಿಳಿಸಿದ್ದಾರೆ. 

ಚಿತ್ರದಲ್ಲಿ, ಪೃಥ್ವಿ ಅಂಬರ್ ಒಂದು ಹಾಡಿಗೂ ಧ್ವನಿಯಾಗಿದ್ದು, ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿಯಾಗಿದ್ದಾರೆ. ಉಳಿದಂತೆ ಸಿದ್ಲಿಂಗು ಶ್ರೀಧರ್, ಪದ್ಮ ಶಿವಮೊಗ್ಗ, ಮಾಂತೇಶ್ ಮುಂತಾದವರು ನಟಿಸಿದ್ದಾರೆ. 

ಮದನ್‌ ಬೆಳ್ಳಿಸಾಲು, ಧನಂಜಯ್‌ ರಂಜನ್ ಸಾಹಿತ್ಯದ ಗೀತೆಗಳಿಗೆ ನೋಬಿನ್‌ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಛಾಯಾಗ್ರಹಣ, ಸಂದೀಪ್ ಸಂಕಲನವಿದೆ. ಫ್ರೈಡೆ ಫಿಲಿಂಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರಲು ಚಿತ್ರತಂಡವು ಸಿದ್ಧತೆ ನಡೆಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com