
ವಿಜಯ್ ಮಿಲ್ಟನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದೆ.
ಇದೇ ವೇಳೆ ಶಿವಣ್ಣ ನಟನೆಯ 124ನೇ ಸಿನಿಮಾ ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಅಂದರೇ ಜೂನ್ ಮಧ್ಯಭಾಗದಲ್ಲಿ ಆರಂಭವಾಗುವ ಸಾಧ್ಯತೆಯಿದೆ.
ರಾಮ್ ಧುಳಿಪುಡಿ ನಿರ್ದೇಶನ ರೋಮ್ಯಾಂಟಿಕ್ ಪ್ರೇಮ ಕಥೆಯಲ್ಲಿ ಶಿವಣ್ಣ ನಟಿಸಲಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಶಿವಣ್ಣ ಮಿಲಿಟರಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ನಟಿಸಿದ್ದ ಎಲ್ಲಾ ಸಿನಿಮಾಗಳಿಗಿಂತ ಕಥೆ ಭಿನ್ನವಾಗಿದೆ, ನಾಸರ್, ಸಂಪತ್, ಸಾಧುಕೋಕಿಲ ಸೇರಿದಂತೆ ಹಲವರು ನಟಿಸಿದ್ದಾರೆ. ಕಣ್ಣು ಅದಿರಿಂದ ಹಾಡಿನ ಮೂಲಕ ಪ್ರಸಿದ್ಧವಾಗಿರುವ ಗಾಯಕಿ ಮಾಂಗ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇನ್ನೂ ಶಿವಣ್ಣನ ಜೊತೆ ಯಾರೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಫೈನಲ್ ಆಗಿಲ್ಲ.
Advertisement