ಹೊಂಬಾಳೆ ಫಿಲ್ಮ್ಸ್ ಹೊಸ ಚಿತ್ರ ಘೋಷಣೆ: ರಿಷಬ್ ಶೆಟ್ಟಿ ನಿರ್ದೇಶನ, ನಟನೆ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮುಂದಿನ ಚಿತ್ರ ಕಾಂತಾರ. ಅದನ್ನು ನಿರ್ದೇಶಿಸುತ್ತಿರುವವರು 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ.
ಹೊಸ ಚಿತ್ರ ಕಾಂತಾರದ ಪೋಸ್ಟರ್
ಹೊಸ ಚಿತ್ರ ಕಾಂತಾರದ ಪೋಸ್ಟರ್
Updated on: 

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮುಂದಿನ ಚಿತ್ರ ಕಾಂತಾರ. ಅದನ್ನು ನಿರ್ದೇಶಿಸುತ್ತಿರುವವರು 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ.

ನಿರ್ದೇಶನ ಮತ್ತು ನಾಯಕ ನಟನೆ ಎರಡೂ ಜವಬ್ದಾರಿಯನ್ನು ಹೊತ್ತಿರುವ ರಿಷಬ್ ಶೆಟ್ಟಿಯವರ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ ಎಂದು ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ.

ಕಾಂತಾರ ಒಂದು ದಂತಕಥೆ ಎಂದು ಹೇಳಿಕೊಂಡಿರುವ ಚಿತ್ರತಂಡ ಅದರ ಫಸ್ಟ್ ಲುಕ್ ಪೋಸ್ಟರ್ ನ್ನು ಕೂಡ ಬಿಡುಗಡೆ ಮಾಡಿದೆ. ಇನ್ನು ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಬಹಳ ದಿನಗಳ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಹೊಸ ನಂಬಿಕೆಯೊಂದಿಗೆ ಕಥೆ ಹೇಳಲು ಬರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com