ಬಿಗ್ ಬಾಸ್ ಸೀಸನ್-8ಕ್ಕೆ ಇಂದು ತೆರೆ: ಅಂತಿಮ ಸುತ್ತಿನಲ್ಲಿ ಹೊರಬಿದ್ದ ಪ್ರಶಾಂತ್ ಸಂಬರ್ಗಿ, ವೈಷ್ಣವಿ ಗೌಡ 

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಭಾನುವಾರ ತೆರೆ ಬೀಳಲಿದೆ. ಕೊನೆಯ ಹಂತದಲ್ಲಿ ಮಂಜು ಪಾವಗಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಇದ್ದು ಅಂತಿಮವಾಗಿ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲ ಮನೆಮಾಡಿದೆ.
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ವೈಷ್ಣವಿ ಗೌಡ, ಪ್ರಶಾಂತ್ ಸಂಬರ್ಗಿ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ವೈಷ್ಣವಿ ಗೌಡ, ಪ್ರಶಾಂತ್ ಸಂಬರ್ಗಿ
Updated on

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಭಾನುವಾರ ತೆರೆ ಬೀಳಲಿದೆ. ಕೊನೆಯ ಹಂತದಲ್ಲಿ ಮಂಜು ಪಾವಗಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಇದ್ದು ಅಂತಿಮವಾಗಿ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲ ಮನೆಮಾಡಿದೆ.

ಫೈನಲ್ ವರೆಗೆ ಹೋಗಿ ಗೆಲ್ಲುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದ ಪ್ರಶಾಂತ್ ಸಂಬರ್ಗಿ ಮತ್ತು ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ವೈಷ್ಣವಿ ಗೌಡ ನಿನ್ನೆ ಅಚ್ಚರಿ ರೀತಿಯಲ್ಲಿ ಮನೆಯಿಂದ ಹೊರಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ನಿನ್ನೆ ಮನೆಯಿಂದ ಹೊರಬಿದ್ದ ಸ್ಪರ್ಧಿಗಳಿಗೆ ಸಿಕ್ಕ ಮತಗಳ ಸಂಖ್ಯೆಯನ್ನು ನಿರೂಪಕ ಕಿಚ್ಚ ಸುದೀಪ್ ಬಹಿರಂಗಪಡಿಸಿದರು.

ಪ್ರಶಾಂತ್ ಸಂಬರ್ಗಿಯವರಿಗೆ 6 ಲಕ್ಷದ 69 ಸಾವಿರದ 020 ಮತಗಳು ಬಂದರೆ ವೈಷ್ಣವಿಯವರು 10 ಲಕ್ಷದ 21 ಸಾವಿರದ 831 ಮತಗಳು ಬಂದಿದ್ದವು ಎಂದು ಕಿಚ್ಚ ಸುದೀಪ್ ಪ್ರಕಟಿಸಿದರು.ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳನ್ನು ಬಹಿರಂಗಪಡಿಸಿರುವುದು ಇದೇ ಮೊದಲು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com