ಮಾಸ್ ಸಿನಿಮಾದಿಂದ ಪ್ರೇಕ್ಷಕರು ನಿರೀಕ್ಷಿಸುವ ಎಲ್ಲವೂ ಮದಗಜ ಸಿನಿಮಾದಲ್ಲಿದೆ: ಶ್ರೀಮುರಳಿ

ಮಾಸ್ ಸಿನಿಮಾ ಆದರು ಪ್ರತೀ ಸಿನಿಮಾದಲ್ಲಿಯೂ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದು ನನ್ನ ಜವಾಬ್ದಾರಿ. ಮದಗಜ ಸಿನಿಮಾದಲ್ಲಿಯೂ ಅದನ್ನು ಪಾಲಿಸಿದ್ದೇನೆ ಎಂದಿದ್ದಾರೆ ಶ್ರೀಮುರುಳಿ. ಸಿನಿಮಾ ಡಿ.3 ರಂದು ತೆರೆ ಕಾಣುತ್ತಿದೆ.
ಸಿನಿಮಾ ಪೋಸ್ಟರ್
ಸಿನಿಮಾ ಪೋಸ್ಟರ್
Updated on

ನಾಯಕ ನಟ ಶ್ರೀಮುರಳಿ ಅವರಿಗೆ ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ಸಿನಿಮಾ ಉಗ್ರಂ ಟರ್ನಿಂಗ್ ಪಾಯಿಂಟ್ ಎನ್ನುವುದರಲ್ಲಿ ಅನುಮಾನವಿಲ್ಲ. ಮುರುಳಿ ಅಭಿನಯದ ಉಗ್ರಂ ಸಿನಿಮಾ ಹಿಟ್ ಆಗಿದ್ದೇ ತಡ ಅದೇ ಬಗೆಯ ಮಾಸ್ ಸಿನಿಮಾಗಳಾದ ರಥಾವರ, ಭರಾಟೆ ಸಿನಿಮಾಗಳಲ್ಲಿ ಕಾಣೀಸಿಕೊಂಡಿದ್ದರು. 

ಇದೀಗ ಮದಗಜ ಕೂಡಾ ಪಕ್ಕಾ ಮಾಸ್ ಸಿನಿಮಾ ಎನ್ನುವುದನ್ನು ಶ್ರೀಮುರುಳಿ ಅವರು ಹೇಳಿದ್ದು, ಮಾಸ್ ಸಿನಿಮಾದಿಂದ ಪ್ರೇಕ್ಷಕರು ನಿರೀಕ್ಷಿಸುವ ಎಲ್ಲಾ ಅಂಶಗಳೂ ಮದಗಜ ಸಿನಿಮಾದಲ್ಲಿದೆ ಎಂದು ಭರವಸೆ ನೀಡುತ್ತಾರೆ.

ಮಾಸ್ ಸಿನಿಮಾ ಆದರು ಪ್ರತೀ ಸಿನಿಮಾದಲ್ಲಿಯೂ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದು ನನ್ನ ಜವಾಬ್ದಾರಿ. ಮದಗಜ ಸಿನಿಮಾದಲ್ಲಿಯೂ ಅದನ್ನು ಪಾಲಿಸಿದ್ದೇನೆ ಎಂದಿದ್ದಾರೆ ಶ್ರೀಮುರುಳಿ. 

ನಿರ್ದೇಶಕ ಮಹೇಶ್ ಕುಮಾರ್ ಮತ್ತು ನಿರ್ಮಾಪಕ ಉಮಾಪತಿ ಇಬ್ಬರಿಗೂ ತಾವು ಯಾವ ಕೆಟಗರಿಯ ಸಿನಿಮಾ ಮಾಡಿದರೆ ಪ್ರೇಕ್ಷಕರಿಗೆ ಇಷ್ತವಾಗುತ್ತದೆ ಎನ್ನುವುದು ಗೊತ್ತು ಎನ್ನುವ ಅವರು ರವಿ ಬಸ್ರೂರು ಅವರ ಸಮ್ಗೀತ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ.  

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com