ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ

ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು.
ಬ್ಯಾಂಗ್ ಸಿನಿಮಾ ಪೋಸ್ಟರ್
ಬ್ಯಾಂಗ್ ಸಿನಿಮಾ ಪೋಸ್ಟರ್

ಶ್ರೀಗಣೇಶ್ ಪರಶುರಾಮ್ ಬರೆದು ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಬ್ಯಾಂಗ್' ಫರ್ಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ, ರಿತ್ವಿಕ್ ಮುರಳೀಧರ್, ಸಾತ್ವಿಕಾ, ನಾಟ್ಯ ರಂಗ, ಸುನಿಲ್ ಗುಜ್ಜರ್ ಅವರು ನಟಿಸಿದ್ದಾರೆ.

ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು. ವಿನೂತನ ಕಥಾವಸ್ತುವನ್ನು ಹೊಂದಿದ್ದ ಆ ಸಿನಿಮಾ ಪ್ರೇಕ್ಷಕರನ್ನು ನಗಿಸಿತ್ತು.

ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ನಟರಾಗುತ್ತಿದ್ದಾರೆ ಎನ್ನುವುದು ವಿಶೇಷ. ಬ್ಯಾಂಗ್ ಸಿನಿಮಾಗೆ ಪೂಜಾ ವಸಂತ್ ಕುಮಾರ್ ಅವರು ಹಣ ಹೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com