ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭವಲ್ಲ ಎನ್ನುವುದು ಮದಗಜ ಸಿನಿಮಾದ ನನ್ನ ಪಾತ್ರದಿಂದ ಅರ್ಥವಾಯಿತು: ನಟಿ ಆಶಿಕಾ ರಂಗನಾಥ್

ಈ ಸಿನಿಮಾದಲ್ಲಿ ಆಶಿಕಾ, ತುಕ್ಕು ಹಿಡಿದ ಹಳೆಯ ಸೈಕಲ್ ಓಡಿಸಿದ್ದಾರೆ, ಟ್ರ್ಯಾಕ್ಟರ್ ಓಡಿಸುವುದನ್ನೂ ಕಲಿತಿದ್ದಾರೆ. 'ಮದಗಜ' ಸಿನಿಮಾ ಡಿಸೆಂಬರ್ 3ರಂದು ತೆರೆಕಾಣುತ್ತಿದೆ.
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್

ಬೆಂಗಳೂರು: ಶ್ರೀಮುರಳಿ ನಾಯಕ ನಟರಾಗಿ ಅಭಿನಯಿಸಿರುವ ಮದಗಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಆಶಿಕಾ ರಂಗನಾಥ್ ತಮ್ಮ ಪಾತ್ರದ ಕುರಿತು ಹಂಚಿಕೊಂದಿದ್ದಾರೆ. 'ಮದಗಜ' ಸಿನಿಮಾ ಡಿಸೆಂಬರ್ 3ರಂದು ತೆರೆಕಾಣುತ್ತಿದೆ.

ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಶಿಕಾ, ಆ ಪಾತ್ರದಿಂದಾಗಿ ತಮಗೆ ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭದ ಕೆಲಸ ಅಲ್ಲ ಎಂಬುದು ಅರ್ಥವಾಯಿತು ಎಂದಿದ್ದಾರೆ. 

ಇಂದಿನ ಯುವಪೀಳಿಗೆಗೆ ಸಿನಿಮಾ ಒಳ್ಳೆಯ ಸಂದೇಶ ನೀಡುವುದಾಗಿ ಅವರು ಹೇಳಿದ್ದಾರೆ. ಮಹೇಶ್ ಕುಮಾರ್ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಉಮಾಪತಿ ಅವರು ಹಣ ಹೂಡಿದ್ದಾರೆ.

ಮದಗಜ ಸಿನಿಮಾದಲ್ಲಿ ಆಶಿಕಾ ಅವರು ಇದೇ ಮೊದಲ ಬಾರಿಗೆ ಮುರಳಿ ಅವರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ತುಕ್ಕು ಹಿಡಿದ ಹಳೆಯ ಸೈಕಲ್ ಓಡಿಸಿದ್ದಾರೆ, ಟ್ರ್ಯಾಕ್ಟರ್ ಓಡಿಸುವುದನ್ನೂ ಕಲಿತಿದ್ದಾರೆ. ಕೊಡಲಿ ಹಿಡಿಯಲು ಕಲಿತಿದ್ದಾರೆ, ಕೆಸರು ಮಣ್ಣಿನೊಳಗೆ ಕೆಲಸ ಮಾಡುವುದನ್ನು ಕಲಿತಿದ್ದಾರೆ, ಬೀಜ ಬಿತ್ತನೆ ಮಾಡುವುದು ಸೇರಿದಂತೆ ಗದ್ದೆ ಉಳುವುದನ್ನೂ ಕಲಿತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com