
ಸುಧಾಮೂರ್ತಿ
ಇತ್ತೀಚೆಗೆ ಬಿಡುಗಡೆಯಾಗಿರುವ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ ಬಗ್ಗೆ ಉದ್ಯಮಿ ಹಾಗೂ ಲೇಖಕಿ ಸುಧಾಮೂರ್ತಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಸಂಬಂಧ ವಿಡಿಯೋ ಸಂದೇಶ ನೀಡಿರುವ ಸುಧಾಮೂರ್ತಿ, ನಾನು ಇವತ್ತು ‘100’ ಚಲನಚಿತ್ರ ನೋಡಿದೆ. ರಮೇಶ್ ಅರವಿಂದ್ ಇದರಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾ ಬಹಳ ಚೆನ್ನಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನರು ಫೋನ್ ಮತ್ತು ಕಂಪ್ಯೂಟರ್‌ಗೆ ತುಂಬಾ ಅಡಿಕ್ಟ್ ಆಗಿದ್ದಾರೆ. ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್ ಮಾಡಿಕೊಳ್ಳುತ್ತಾರೆ.
ಗೆಳೆತನ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ, ಅಪರಿಚಿತ ವ್ಯಕ್ತಿಯ ಬಳಿ ತಮ್ಮ ಅಂತರಂಗವನ್ನು ಹೇಳುವುದು, ಇದರಿಂದ ಪರಿವಾರಕ್ಕೆ ಏನು ತೊಂದರೆಯಾಗಬಹುದು ಎಂಬುದರ ಬಗ್ಗೆ ಸಿನಿಮಾ ಮಾಡಿದ್ದಾರೆ. ಇದು ನಿಜಕ್ಕೂ ಅತ್ಯುತ್ತಮ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಿನಿಮಾಗಳು ಬಂದಿರುವುದು ಬಹಳ ಕಡಿಮೆ.
ನಾನು ಈ ಚಿತ್ರವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಕುಟುಂಬ ಕೂತು ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು. ಜೊತೆಗೆ ಈ ಚಿತ್ರದಿಂದ ಕಲಿಯುವುದು ತುಂಬಾ ಇದೆ. ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’’ ಎಂದು ಸುಧಾ ಮೂರ್ತಿ ಹೇಳಿರುವ ವಿಡಿಯೋವನ್ನು ನಿರ್ಮಾಪಕ ರಮೇಶ್ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್ ಓರ್ವ ಪರ್ಫೆಕ್ಷನಿಸ್ಟ್ ಮತ್ತು ಪಾಸಿಟಿವ್ ವ್ಯಕ್ತಿ: '100' ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ
ನವೆಂಬರ್ 19 ರಂದು ಕನ್ನಡದಲ್ಲಿ 100 ಸಿನಿಮಾ ರಿಲೀಸ್ ಆಗಿದೆ. ಡಿಸೆಂಬರ್ ನಲ್ಲಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತೆಲುಗಿನ ಇಬ್ಬರು ವಿತರಕರ ಜೊತೆ ಚರ್ಚಿಸಿದ್ದು ಹಲವು ಥಿಯೇಟರ್ ಗಳಲ್ಲಿ ರಿಲೀಸ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.