The New Indian Express
ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಸೈಬರ್ ಕ್ರೈಮ್ ಥ್ರಿಲ್ಲರ್ 100 ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. ಇದೇ ಸಿನಿಮಾದ ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ ಈ ಹಿಂದೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಯು ಟರ್ನ್ ಗೂ ಕೆಲಸ ಮಾಡಿದ್ದರು.
ಇದನ್ನೂ ಓದಿ: ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ರಮೇಶ್ ಅರವಿಂದ್ ಜೊತೆ ಸತ್ಯ ಹೆಗ್ಡೆ ಕಾರ್ಯ ನಿರ್ವಹಿಸಿರುವ ಎರಡು ಕನ್ನಡ ಸಿನಿಮಾ ಬಟರ್ ಫ್ಲೈ ಮತ್ತು ಪ್ಯಾರಿಸ್ ಪ್ಯಾರಿಸ್ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಯೋಗರಾಜ್ ಭಟ್ ನಿರ್ದೇಶನ ಸಿನಿಮಾಗೆ ಟೈಟಲ್ ಫಿಕ್ಸ್: ಪ್ರಮುಖ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್!
ರಮೇಶ್ ಅರವಿಂದ್ ಓರ್ವ ನಟ ಮತ್ತು ನಿರ್ದೇಶಕ ಅವರ ಜೊತೆ ಕೆಲಸ ಮಾಡುವುದು ಒಳ್ಳೆ ಅನುಭವ ನೀಡುತ್ತದೆ. ಇಷ್ಟು ಸಮಯದ ಬಾಂಧವ್ಯದಿಂದ ಪ್ರತಿ ಸೀನ್ ಶೂಟಿಂಗ್ ವೇಳೆ ಅವರಿಗೆ ಏನು ಬೇಕು ಎನ್ನುವುದನ್ನು ತಿಳಿದುಕೊಳ್ಳುವಷ್ಟು ನೈಪುಣ್ಯ ತಮಗೀಗ ಬಂದಿದೆ ಎನ್ನುತ್ತಾರೆ ಸತ್ಯ ಹೆಗ್ಡೆ.
ಇದನ್ನೂ ಓದಿ: ಮಕ್ಕಳ ದಿನಾಚರಣೆ: ಅಪ್ಪು ಬಾಲ್ಯ ಸ್ಮರಿಸಿದ ನಟ ರಾಘವೇಂದ್ರ ರಾಜ್ಕುಮಾರ್
ರಮೇಶ್, ಪ್ರಕಾಶ್ ಬೆಳವಾಡಿ, ರಚಿತಾ ರಾಮ್, ಪೂರ್ಣ ಅವರಂಥ ಕಲಾವಿದರು ಕ್ಯಾಮೆರಾ ಮುಂದಿದ್ದಾಗ ಸಿನಿಮೆಟೊಗ್ರಾಫರ್ ಗೆ ಅವರ ಅಭಿನಯವನ್ನು ಸೆರೆಹಿಡಿಯುವುದು ದೊಡ್ಡ ಸವಾಲು.
ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ
ಯಾವುದಕ್ಕೆ ಫೋಕಸ್ ನೀಡಬೇಕು ಎನ್ನುವ ಸಂದಿಗ್ಧತೆ ಎದುರಾಗುತ್ತದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎನ್ನುವ ವಿಶ್ವಾಸವನ್ನು ಅವರು ತೋರ್ಪಡಿಸಿದ್ದಾರೆ. ರಮೇಶ್ ಅರವಿಂದ್ ಅವರು ಓರ್ವ ಪರ್ಫೆಕ್ಷನಿಸ್ಟ್, ಸಿನಿಮಾ ಸೆಟ್ ಗೆ ಪಾಸಿಟಿವ್ ಕಳೆ ತಂದುಕೊಡುತ್ತಾರೆ ಎಂದು ಅವರು ರಮೇಶ್ ರನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್