ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಅತಂತ್ರ: ಸದಸ್ಯರ ಆತಂಕ

ಭಾರತದ ಫಿಲ್ಮ್ ಸೊಸೈಟಿಗಳಲ್ಲಿಯೇ ಪ್ರತಿಷ್ಠಿತವಾದ, ಇದೇವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಡೋಲಾಯಮಾನವಾಗಿದೆ ಎಂದು ಸೊಸೈಟಿಯ ಕಾರ್ಯಕಾರಿ ಸಮಿತಿ...
ಸುಚಿತ್ರ ಫಿಲ್ಮ್ ಸೊಸೈಟಿ
ಸುಚಿತ್ರ ಫಿಲ್ಮ್ ಸೊಸೈಟಿ

ಬೆಂಗಳೂರು: ಭಾರತದ ಫಿಲ್ಮ್ ಸೊಸೈಟಿಗಳಲ್ಲಿಯೇ ಪ್ರತಿಷ್ಠಿತವಾದ, ಇದೇವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಡೋಲಾಯಮಾನವಾಗಿದೆ ಎಂದು ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರುಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸುಚಿತ್ರಾ ಅಕಾಡೆಮಿಯು 2015ರಲ್ಲಿ ಪುರುವಂಕರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಸಿ.ಎಸ್.ಆರ್ ನಿಧಿಯಿಂದ ದೇಣೀಗೆ ಪಡೆದು ಕಟ್ಟಡವನ್ನು ನವೀಕರಣ ಮಾಡಿತು. ಆಗ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ ಎಂದು ಇದ್ದ ಹೆಸರನ್ನು ಪುರವಂಕರ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ ಎಂದು ಬದಲಾಯಿಸಲಾಯಿತು. ಈ ನಂತರ ಸೊಸೈಟಿ ಸ್ವತಂತ್ರ ಅಸ್ತಿತ್ವಕ್ಕೆ ತೊಂದರೆಗಳು ಆರಂಭವಾಗಿವೆ ಎಂದು ಕಾರ್ಯಕಾರಿ ಸಮಿತಿ ಸದಸ್ಯರುಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ತನಕ ಟ್ರಸ್ಟ್ ಖಾಯಂ ಸದಸ್ಯತ್ವ ಇದ್ದ ಫಿಲ್ಮ್ ಸೊಸೈಟಿ ಅಧ್ಯಕ್ಷರನ್ನು ಆಹ್ವಾನಿತರು ಎಂದು ಬದಲಾಯಿಸಲಾಯಿತು. ಇದು ಕಾರ್ಯಕಾರಿ ಸಮಿತಿ ಸದ್ಯರಿಗೆ 2016ರ ಸೆಪ್ಟೆಂಬರ್ ತಿಂಗಳೀನಲ್ಲಿ ನಡೆದ ಸುಚಿತ್ರ ಅಪ್ರಿಸಿಯೇಷನ್ ಮೂಲಕ ತಿಳಿಯಿತು. ನೇರವಾಗಿ ಸದಸ್ಯರಿಗೆ ತಿಳಿಸದೇ ಈ ಬದಲಾವಣೆ ಮಾಡಲಾಗಿದೆ ಎಂದು ದೂರಿದ್ದಾರೆ.

ಈ ಬೆಳವಣಿಗೆಗಳನ್ನು ಸುಚಿತ್ರ ಫಿಲ್ಮ್ ಸೊಸೈಟಿಯೂ ವಿರೋಧಿಸುತ್ತಾ ಬಂದಿದೆ. ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಸದಸ್ಯರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಡೀಡ್ ನಲ್ಲಿನ ಮಾರ್ಪಾಡುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಹಾಗೂ ಸುಚಿತ್ರ ಫಿಲ್ಮ್ ಸೊಸೈಟಿಯ ಎಲ್ಲ ಹಕ್ಕುಗಳು ಸೊಸೈಟಿಯಲ್ಲಿಯೇ ಉಳಿಯಬೇಕೆಂದು ನಡವಳಿಗಳನ್ನು ಅನುಮೋದಿಲಾಗಿದೆ ಎಂದು ವಿವರಿಸಿದ್ದಾರೆ.

ಪುರುವಂಕರ ಸಂಸ್ಥೆಯಿಂದ ದೇಣಿಗೆ ಪಡೆದು ಕಟ್ಟಡ ನವೀಕರಣ ಮಾಡಿದ ನಂತರ ಸಭಾಂಗಣದ ಬಾಡಿಗೆಗಳು ಹೆಚ್ಚಾಗಿವೆ. ಫಿಲ್ಮ್ ಸೊಸೈಟಿ ಸಹ ಹೆಚ್ಚುವರಿ ಬಾಡಿಗೆ ಕಟ್ಟಬೇಕಾದ ದುಸ್ಥಿತಿ ಬಂದಿದೆ. ರಿಯಾಯತಿಗಳನ್ನು ಹಿಂತೆಗೆದುಕೊಂಡಿರುವುದರಿಂದ ಮೂರುಪಟ್ಟು ಹೆಚ್ಚು ಬಾಡಿಗೆ ಕಟ್ಟಬೇಕಾದ ದುಸ್ಥಿತಿ ಎದುರಾಗಿದೆ.ಎಂದು ಹೇಳಿದ್ದಾರೆ.

2021ರ ಜನವರಿಯಿಂದ ಸುಚಿತ್ರಾ ಫಿಲ್ಮ್ ಸೊಸೂಟಿಯ ಕಚೇರಿ ಬಾಡಿಗೆಯನ್ನು ಪರಿಷ್ಕರಿಸಿ 50 ಸಾವಿರ ಕೊಡಬೇಕೆಂದು ಈ ಹಿಂದೆ ಕಟ್ಟಿದ ಬಾಡಿಗೆ ಹಣದೊಂದಿಗೆ ಪರಿಷ್ಕೃತ ಬಾಡಿಗೆ ಮೊತ್ತದ ಬಾಕಿ ಹಣ ಏಳು ಲಕ್ಷ ಕೊಡಬೇಕೆಂದು ಪತ್ರಮುಖೇನ ಒತ್ತಾಯಿಸಲಾಗುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ನೀಡಿದ್ದ ಎರಡು ಲಕ್ಷ ಮುಂಗಡ ಹಣವನ್ನೂ ಮುರಿದುಕೊಳ್ಳಲಾಗಿದೆ. ಜೊತೆಗೆ ಸೊಸೈಟಿಗೆ ವಕೀಲರ ಮೂಲಕ ನೋಟೀಸ್ ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಈ ಎಲ್ಲ ಕಾರಣದಿಂದಾಗಿಯೇ 2021ರ ಏಪ್ರಿಲ್ ನಲ್ಲಿ ವಿಶೇಷ ಸರ್ವ ಸದಸ್ಯರ ಸಭೆ, 2021ರ ನವೆಂಬರ್ ನಲ್ಲಿ ಸಾಮಾನ್ಯ ಸರ್ವ ಸದಸ್ಯರ ಸಭೆಯನ್ನು ಸುಚಿತ್ರಾ ಪ್ರಾಂಗಣದಿಂದ ಹೊರಗೆ ಮಾಡಬೇಕಾದ ದುಸ್ಥಿತಿ ಎದುರಾಯಿತು. ಇಂಥ ನಕಾರಾಥ್ಮಕ ಬೆಳವಣಿಗೆಗಳನ್ನು ತಪ್ಪಿಸಲು ಸುಚಿತ್ರ ಫಿಲ್ಮ್ ಸೊಸೈಟಿ ಅಧ್ಯಕ್ಷರು ಟ್ರಸ್ಟ್ ನ ಶಾಶ್ವತ ಸದಸ್ಯರಾಗಿ ಮುಂದುವರಿಯಬೇಕು, ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಬಾಡಿಗೆದರ ವಿಧಿಸುವುದರ ಬಗ್ಗೆ ಚರ್ಚಿಸಬೇಕು, ಸುಚಿತ್ರ ಟ್ರಸ್ಟ್ ರಚನೆಗೆ ಕಾರಣವಾದ ಸೊಸೈಟಿಯ ಎಲ್ಲ ಚಟುವಟಿಕೆಗಳು ಅಡೆತಡೆ ಇಲ್ಲದೇ ಸುಚಿತ್ರ ಪ್ರಾಂಗಣದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇವುಗಳು ಈಡೇರಿದರೆ ಮಾತ್ರ ಫಿಲ್ಮ್ ಸೊಸೈಟಿಯು ತನ್ನ ಸುವರ್ಣ ಮಹೋತ್ಸವವನ್ನು ಘನತೆಯಿಂದ ಆಚರಿಸಿಕೊಳ್ಳಬಹುದು ಎಂದು ವಿವರಿಸಿದ್ದಾರೆ.

ಇವುಗಳು ಈಡೇರಿಕೆಗಾಗಿ ಒತ್ತಾಯಿಸಿ 2021ರ ನವೆಂಬರ್ 21ರಂದು ಸುಚಿತ್ರಾ ಫಿಲ್ಮ್ ಸೊಸೈಟಿ ಎದುರು ಪ್ರತಿಭಟನೆ ಹಮ್ಮಿಕೊಳ್ಲಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com