ಯೋಗರಾಜ್ ಭಟ್ ನಿರ್ದೇಶಿಸಿ ಸಚಿವ ಬಿ.ಸಿ ಪಾಟೀಲ್ ನಿರ್ಮಿಸುತ್ತಿರುವ ಸಿನಿಮಾಗೆ ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವ ಸಿನಿಮಾಗೆ ಗರಡಿ ಎಂದು ಟೈಟ್ ಫಿಕ್ಸ್ ಮಾಡಲಾಗಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗರಡಿ ಸಿನಿಮಾ ಟೈಟಲ್ ಬಿಡುಗಡೆ ಮಾಡಲಾಯಿತು. ಬಿಸಿ ಪಾಟೀಲ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರೇಕೆರೂರಿನಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ನಟ ದರ್ಶನ್ ಶೀರ್ಷಿಕೆ ರಿಲೀಸ್ ಮಾಡಿದರು.
ಸ್ಯಾಂಡಲ್ ವುಡ್ ನಲ್ಲಿ ಕೌರ ವ ಎಂದೇ ಹೆಸರಾಗಿರುವ ಬಿಸಿ ಪಾಟೀಲ್, 2016 ರಲ್ಲಿ ಹ್ಯಾಪಿ ನ್ಯೂ ಇಯರ್ ಎಂಬ ಸಿನಿಮಾ ನಿರ್ಮಾಣಮಾಡಿದ್ದರು. ಹ್ಯಾಪಿ ನ್ಯೂ ಇಯರ್ ನಂತರ ನಾನು ನಿರ್ಮಾಪಕನಾಗಿ ಮುಂದುವರಿಯಲು ಬಯಸಿದ್ದರೂ, ನನಗೆ ಸರಿಯಾದ ನಿರ್ದೇಶಕ ಮತ್ತು ಸ್ಕ್ರಿಪ್ಟ್ ಸಿಗಲಿಲ್ಲ.
ಕೋವಿಡ್ ನಿಂದಾಗಿ 2 ವರ್ಷ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ. ಗರಡಿ ಸಿನಿಮಾದಲ್ಲಿ ನಟ ದರ್ಶನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ, ಅವರನ್ನು ಈ ಸಿನಿಮಾದಲ್ಲಿ ನೋಡಲು ನಾನು ಕಾತುರನಾಗಿದ್ದೇನೆ ಎಂದು ಪಾಟೀಲ್ ತಿಳಿಸಿದ್ದಾರೆ,
ಗರಡಿ ಸಿನಿಮಾ ಮೂಲಕ ನಾವೆಲ್ಲರೂ ಒಂದಾಗುತ್ತಿರುವುದು ಖುಷಿಯ ವಿಚಾರ, ದರ್ಶನ್ ಗಾಗಿ ಭಟ್ಟರು ಒಳ್ಳೆಯ ಪಾತ್ರ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಗರಡಿಯಲ್ಲಿ ಸಾಂಪ್ರದಾಯಿಕ ವ್ಯಾಯಾಮಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್ ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.
Advertisement