ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ
ಪ್ರಿಯಾಂಕಾ ಉಪೇಂದ್ರ ಅಭಿನಯದ ತೀವ್ರ ನಿರೀಕ್ಷೆ ಮೂಡಿಸಿರುವ ಉಗ್ರಾವತಾರ ಟೀಸರ್ ಬಿಡುಗಡೆಯಾಗಿದೆ. ಪ್ರಿಯಾಂಕಾ 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನದಂದೇ ಟೀಸರ್ ಲಾಂಚ್ ಆಗಿದ್ದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.
Published: 12th November 2021 04:22 PM | Last Updated: 12th November 2021 05:23 PM | A+A A-

ಉಗ್ರಾವತಾರದಲ್ಲಿ ಪ್ರಿಯಾಂಕಾ ಉಪೇಂದ್ರ
ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಅಭಿನಯದ ತೀವ್ರ ನಿರೀಕ್ಷೆ ಮೂಡಿಸಿರುವ ಉಗ್ರಾವತಾರ ಟೀಸರ್ ಬಿಡುಗಡೆಯಾಗಿದೆ. ಪ್ರಿಯಾಂಕಾ 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನದಂದೇ ಟೀಸರ್ ಲಾಂಚ್ ಆಗಿದ್ದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.
ಟೀಸರ್ ಬಿಡುಗಡೆಗೂ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜನ್ಮದಿನದಂದು ಟೀಸರ್ ಲಾಂಚ್ ಆಗುತ್ತಿರುವುದು ಸಂತೋಷ. ಆ್ಯಕ್ಷನ್ ಚಿತ್ರವಾದ್ದರಿಂದ ಸಾಕಷ್ಟು ತಯಾರಿ ನಡೆಸಿದ್ದೆ. ಭಯವೂ ಇತ್ತು. ಜೊತೆಗೆ ಸಹಜವಾಗಿ ಮೂಡಿಬರಬೇಕೆಂಬ ಆಸೆಯೂ ಇತ್ತು. ಒಟ್ಟಾರೆ ಚಿತ್ರ ಚೆನ್ನಾಗಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆ ಕಾಣಲಿದೆ ಎಂದು ಪ್ರಿಯಾಂಕಾ ತಿಳಿಸಿದರು.
ಹೆಣ್ಣಿನ ಮೇಲಿನ ಶೋಷಣೆ, ಪರಿಹಾರ ಕುರಿತಾದ ಸಂದೇಶವೂ ಚಿತ್ರದಲ್ಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಉಗ್ರಾವತಾರ ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಲೋಕೇಶ್, ಶೋಭಾ, ನಟರಾಜ್ ಜಿರಳೆ ಸುಧೀರ್ ಮತ್ತಿತರರು ತಾರಾಗಣದಲ್ಲಿದ್ದಾರೆ.