ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣಿಗೂ ಸಾಂಗ್: ಎಲ್ಲೆಲ್ಲೂ ಹಾಡಿನ ಗುನುಗುನು!
ರಾಬರ್ಟ್ ಸಿನಿಮಾದ ಕಣ್ಣು ಹೊಡಿಯೋಕೆ ಹಾಡನ್ನು ತೆಲುಗಿನಲ್ಲಿ ಹಾಡಿ ಮ್ಯಾಜಿಕ್ ಮಾಡಿದ್ದ ಗಾಯಕಿ ಮಂಗ್ಲಿ ಮತ್ತೊಂದು ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ.
Published: 16th November 2021 11:50 AM | Last Updated: 16th November 2021 01:27 PM | A+A A-

ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣೆಗೂ ಸಾಂಗ್
ರಾಬರ್ಟ್ ಸಿನಿಮಾದ ಕಣ್ಣು ಹೊಡಿಯೋಕೆ ಹಾಡನ್ನು ತೆಲುಗಿನಲ್ಲಿ ಹಾಡಿ ಮ್ಯಾಜಿಕ್ ಮಾಡಿದ್ದ ಗಾಯಕಿ ಮಂಗ್ಲಿ ಮತ್ತೊಂದು ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ.
ಏಕ್ ಲವ್ ಯಾ ಸಿನಿಮಾದ ಬ್ರೇಕ್ ಅಪ್ ಸಾಂಗ್ ನಲ್ಲಿ ಕೈಲಾಶ್ ಖೇರ್ ಜೊತೆ ದನಿಗೂಡಿಸಿದ್ದಾರೆ. ಎಣ್ಣೆಗೂ -ಹೆಣ್ಣಿಗೂ ಹಾಡಿನಲ್ಲಿ ರಚಿತಾ ರಾಮ್, ರಾಣಾ, ಹೆಜ್ಜೆ ಹಾಕಿದ್ದು, ಶುಕ್ರವಾರ ರಿಲೀಸ್ ಆಗಿದೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ, ಅದರಲ್ಲೂ ಮಹಿಳೆಯರಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಈ ಹಾಡು ರೀಲ್ ಗಳಲ್ಲೂ ತಕ್ಷಣ ಹಿಟ್ ಆಗಿದ ಎನ್ನುತ್ತಾರೆ ಸಾಹಿತ್ಯ ಬರೆದಿರುವ ನಿರ್ದೇಶಕ ಪ್ರೇಮ್.
ಇದನ್ನೂ ಓದಿ: 'ಏಕ್ ಲವ್ ಯಾ'ಚಿತ್ರತಂಡದಿಂದ ಅಪ್ಪು ಭಾವಚಿತ್ರ ಮುಂದೆ ಶಾಂಪೇನ್ ಸಂಭ್ರಮ: ಅಭಿಮಾನಿಗಳ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ
ರೇಷ್ಮಾ ನಾಣಯ್ಯ ಮತ್ತು ರಾಣಾ ನಟಿಸಿರುವ ಈ ಸಿನಿಮಾ 2022 ಜನವರಿ 21 ರಂದು ರಿಲೀಸ್ ಆಗಲಿದೆ. ಚಿತ್ರಕ್ಕೆ ಎ/ಯೂ ಪ್ರಮಾಣ ಪತ್ರ ನೀಡಲಾಗಿದೆ. ಸೆನ್ಸಾರ್ ಬೋರ್ಡ್ 3 ಪದಗಳನ್ನು ಕಟ್ ಮಾಡಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.