ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್
ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದಾರೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.
Published: 11th November 2021 12:35 PM | Last Updated: 11th November 2021 12:36 PM | A+A A-

ರಮೇಶ್ ಜೊತೆ ಪೂರ್ಣ
ಬೆಂಗಳೂರು: ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದಾರೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.
ಇದನ್ನೂ ಓದಿ: ಮದುವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತೀರಾ? ಅದನ್ನೇ ಈ ಹಾಡಿನಲ್ಲೂ ಮಾಡಿದ್ದೇವೆ: ನಟಿ ರಚಿತಾ ರಾಮ್
ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅವರು ನೀಡಿದ ಸಹಕಾರವನ್ನು ಕೇರಳ ಮೂಲದ ನಟಿ ಪೂರ್ಣ ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ಒಪ್ಪಿಸುವ ಸಮಯದಲ್ಲಿ ರಮೇಶ್ ಅವರು ಟಿಪ್ಸ್ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರವರು.
ಇದನ್ನೂ ಓದಿ: ಇಸ್ಪೀಟ್ ಅಡ್ಡ ನಡೆಸುತ್ತಿದ್ದ ಖ್ಯಾತ ನಟನ ತಂದೆಯ ಬಂಧನ!
ಅವರು ಕನ್ನಡದಲ್ಲಿ ಈ ಹಿಂದೆ ಜೋಶ್ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ೧೧ನೇ ತರಗತಿ ವಿದ್ಯಾರ್ಥಿನಿ ಎನ್ನುವುದು ವಿಶೇಷ. ಅವರು 100 ಸಿನಿಮಾದ ಸಂಭಾಷಣೆಗಳನ್ನು ಮೊದಲು ತಮ್ಮ ಭಾಷೆಯಲ್ಲಿ ಬರೆದುಕೊಂಡು ಅಭ್ಯಾಸ ಮಾಡಿದ್ದಾಗಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ ಪೂರ್ಣ.
ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸಂಗೀತ ನೀಡುವುದು ಸವಾಲಾಗಿತ್ತು: ಮಿದುನ್ ಮುಕುಂದನ್
ರಮೇಶ್ ಅರವಿಂದ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿರುವ ಪೂರ್ಣ ರಮೇಶ್ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ ಎಂದು ಕಾಂಪ್ಲಿಮೆಂಟ್ ನೀಡುತ್ತಾರೆ. ಈ ಸಿನಿಮಾ ಮೊಬೈಲ್ ನಿಂದ ಉಂಟಾಗುವ ತೊಂದರೆಗಳನ್ನು, ಅದರ ಬಳಕೆ ಕುರಿತು ಸಂದೇಶವನ್ನು ಹೊಂದಿದೆ.
ಇದನ್ನೂ ಓದಿ: ಬಿಸಿ ಪಾಟೀಲ್ ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ಯಶಸ್ ಸೂರ್ಯ ನಾಯಕ!