ಅರ್ಜುನ್ ಸರ್ಜಾ- ರಾಧಿಕಾ 'ಒಪ್ಪಂದ': ಹೊಸ ಸಿನಿಮಾ ಹೆಸರು ಬದಲಾವಣೆ

ಈ ಸಿನಿಮಾ ಮೂಲಕ ಬಾಲಿವುಡ್ ನಟ ಫೈಸಲ್ ಖಾನ್ ದಕ್ಷಿಣ ಭಾರತ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಮೀರ್ ಲಾಲ್ ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದಾರೆ. 
ರಾಧಿಕಾ ಕುಮಾರಸ್ವಾಮಿ ಮತ್ತು ಅರ್ಜುನ್ ಸರ್ಜಾ
ರಾಧಿಕಾ ಕುಮಾರಸ್ವಾಮಿ ಮತ್ತು ಅರ್ಜುನ್ ಸರ್ಜಾ

ಬೆಂಗಳೂರು: ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಮತ್ತು ಜೆ.ಡಿ ಚಕ್ರವರ್ತಿ ನಟನೆಯ ಚಿತ್ರಕ್ಕೆ ಈ ಹಿಂದೆ ಕಾಂಟ್ರಾಕ್ಟ್ (Kontract) ಎಂದು ಹೆಸರಿಡಲಾಗಿತ್ತು. ಅದನ್ನೀಗ ಬದಲಾಯಿಸಲಾಗಿದ್ದು, ಅದೇ ಸಿನಿಮಾಗೆ ಇಟ್ಟಿರುವ ಹೊಸ ಹೆಸರು ಒಪ್ಪಂದ.

ಈ ವಿಷಯವನ್ನು ನಿರ್ಮಾಪಕರು ಬಹಿರಂಗಪಡಿಸಿ, ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಸಿನಿಮಾವನ್ನು ಸಮೀರ್ ನಿರ್ದೇಶಿಸುತ್ತಿದ್ದಾರೆ. ಒಪ್ಪಂದ ಸಿನಿಮಾ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದೆ. 

ಸೋನಿ ಚರಿಷ್ತಾ, ವಿಶ್ವನಾಥ್ ಅವರು ತಾರಗಣದಲ್ಲಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್ ನಟ ಫೈಸಲ್ ಖಾನ್ ದಕ್ಷಿಣ ಭಾರತ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಮೀರ್ ಲಾಲ್ ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com