ಸಿನಿಮಾ ಸುದ್ದಿ

'ಜೀವಮಾನದ ಮರೆಯಲಾಗದ ಅನುಭವ': ರೇಸಿಂಗ್ ಟ್ರ್ಯಾಕ್‌ ಅನುಭವ ಬಿಚ್ಚಿಟ್ಟ ನಟ ಕಿಚ್ಚ ಸುದೀಪ್-Video

'ಜೀವಮಾನದ ಮರೆಯಲಾಗದ ಅನುಭವ': ರೇಸಿಂಗ್ ಟ್ರ್ಯಾಕ್‌ ಅನುಭವ ಬಿಚ್ಚಿಟ್ಟ ನಟ ಕಿಚ್ಚ ಸುದೀಪ್-Video
ರೇಸಿಂಗ್ ಟ್ರ್ಯಾಕ್ ನಲ್ಲಿ ನಟ ಕಿಚ್ಚಾ ಸುದೀಪ್
Published On :

ನವದೆಹಲಿ: ಖ್ಯಾತ ನಟ ಕಿಚ್ಚ ಸುದೀಪ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ನಟನೆಯಲ್ಲಿ ಅಭಿಮಾನಿಗಳ ಮನಗೆದ್ದಿರುವ ಅವರು ಇದೀಗ ರೇಸಿಂಗ್ ಟ್ರಾಕ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರೇಸಿಂಗ್ ಟ್ರ್ಯಾಕ್‌ನಲ್ಲಿ(Racing Track) ಕಾರು ಚಲಾಯಿಸುವ ಮೂಲಕ ಜೀವನದಲ್ಲೇ ಮರೆಯಲಾಗದ ರೋಮಾಂಚಕಾರಿ ಅನುಭವ ಪಡೆದಿದ್ದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಮಾತ್ರವಲ್ಲದೇ ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಟ ಸುದೀಪ್, “ಇದೊಂದು ಪದಗಳಲ್ಲಿ ವಿವರಿಸಲು ಸಾಧ್ಯವಾಗದಂತಹ ಅದ್ಭುತ ಚಾಲನಾ ಅನುಭವ” ಎಂದು ಬಣ್ಣಿಸಿದ್ದಾರೆ.

ರೇಸಿಂಗ್ ಟ್ರ್ಯಾಕ್‌ಗೆ ಇಳಿಯುವ ಮುನ್ನ ಸುದೀಪ್ ಅವರಿಗೆ ರೇಸಿಂಗ್ ಕಾರಿನ ಕಾರ್ಯವೈಖರಿ, ತಾಂತ್ರಿಕ ಅಂಶಗಳು ಹಾಗೂ ಚಾಲನೆಯ ವೇಳೆ ಪಾಲಿಸಬೇಕಾದ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ತಜ್ಞರಿಂದ ಸಂಪೂರ್ಣ ವಿವರಣೆ ನೀಡಲಾಗಿತ್ತು.

ಬಳಿಕ ಟ್ರ್ಯಾಕ್‌ಗೆ ಪ್ರವೇಶಿಸಿದ ಕಿಚ್ಚ, ಅಲ್ಲಿನ ವಿಶ್ವದರ್ಜೆಯ ಮೂಲಸೌಕರ್ಯ, ವಿಶಾಲತೆ ಮತ್ತು ಅದ್ಭುತ ವಾತಾವರಣವನ್ನು ಕಂಡು ಫಿದಾ ಆಗಿದ್ದಾರೆ. ಈ ಅವಿಸ್ಮರಣೀಯ ಅನುಭವವನ್ನು ನೀಡಿದ ಇಂಡಿಯನ್ ರೇಸಿಂಗ್ ಲೀಗ್ (IRL) ತಂಡಕ್ಕೆ ಸುದೀಪ್ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮುಂದಿನ ಹಾದಿ!

ಅಂದಹಾಗೆ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಸುದೀಪ್ ಮಾಲೀಕತ್ವದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichcha’s Kings Bengaluru) ತಂಡವು ಮುಂಬರುವ ರೇಸ್‌ಗಳಿಗೆ ಭರ್ಜರಿ ಸಿದ್ಧತೆ ನಡೆಸಿದೆ.

2026ರ ನವೆಂಬರ್ 28 ಮತ್ತು 29ರಂದು ಗ್ರೇಟರ್ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ (Buddh International Circuit) ನಡೆಯಲಿರುವ ರೇಸ್‌ನಲ್ಲಿ ತಂಡವು ಕಣಕ್ಕಿಳಿಯಲಿದೆ.

ಇದಾದ ಬಳಿಕ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿಯೂ ರೋಚಕ ರೇಸ್ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.