ಬಾಲಿವುಡ್

Ramayana: ಆಸ್ಕರ್ ರೇಸ್‌ಗೆ ‘ರಾಮಾಯಣ’ ಎಂಟ್ರಿ; VFX ಟಾಪ್ 20ಯಲ್ಲಿ ಸ್ಥಾನ ಪಡೆದ ಯಶ್ ಸಿನಿಮಾ!

Ramayana: ಆಸ್ಕರ್ ರೇಸ್‌ಗೆ ‘ರಾಮಾಯಣ’ ಎಂಟ್ರಿ; VFX ಟಾಪ್ 20ಯಲ್ಲಿ ಸ್ಥಾನ ಪಡೆದ ಯಶ್ ಸಿನಿಮಾ!
ರಾಮಾಯಣ ಚಿತ್ರದ ಪೋಸ್ಟರ್
Published On :

ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ 1: ರೈಸ್ ಆಫ್ ಎ ಲೆಜೆಂಡ್' ಇದೀಗ ಆಸ್ಕರ್​ 2027 ಅಂಗಳಕ್ಕೆ ಪ್ರವೇಶ ಪಡೆದಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ 99ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಯ 'ವಿಷುವಲ್ ಎಫೆಕ್ಟ್ಸ್' (VFX) ವಿಭಾಗದಲ್ಲಿ ಅಗ್ರ 20 ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಪಟ್ಟಿಯಲ್ಲಿ 'ಡ್ಯೂನ್: 3', 'ದಿ ಒಡಿಸ್ಸಿ' ಮತ್ತು 'ಅವೆಂಜರ್ಸ್: ಡೂಮ್ಸ್‌ಡೇ'ಯಂತಹ ಜಾಗತಿಕ ಮಟ್ಟದ ಚಿತ್ರಗಳೂ ಸ್ಥಾನ ಪಡೆದಿವೆ.

ಇಷ್ಟೇ ಅಲ್ಲದೆ, 2025ರಲ್ಲಿ ಆಸ್ಕರ್ ಗೆದ್ದಿದ್ದ ಗಾಡ್ಜಿಲ್ಲಾ ಮೈನಸ್ ಒನ್ ಸಿನಿಮಾದ ಮುಂದುವರಿದ ಭಾಗವಾದ ಜಪಾನ್‌ನ ಬ್ಲಾಕ್‌ಬಸ್ಟರ್ ಚಿತ್ರ ಗಾಡ್ಜಿಲ್ಲಾ: ಮೈನಸ್ ಝೀರೋ ಹಾಗೂ ವೇಲ್‌ಫಾಲ್, ದಿ ಶೀಪ್ ಡಿಟೆಕ್ಟಿವ್ಸ್ ಚಿತ್ರಗಳೂ ಈ ಟಾಪ್ 20 ಪಟ್ಟಿಯಲ್ಲಿವೆ. ಇಂತಹ ಘಟಾನುಘಟಿ ಸಿನಿಮಾಗಳ ನಡುವೆ ಭಾರತದ ಸಿನಿಮಾವೊಂದು ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.

'ವರೈಟಿ'(Variety) ಮ್ಯಾಗಜೀನ್ ವರದಿಯ ಪ್ರಕಾರ, ಈ 20 ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಯ ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ. 'ವರೈಟಿ'ಯು ವಿವಿಧ ಮೂಲಗಳ ಮೂಲಕ ಈ ಪಟ್ಟಿಯನ್ನು ಖಚಿತಪಡಿಸಿಕೊಂಡಿದೆ.

'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' ಸಂಸ್ಥೆಯು ಅಗ್ರ 20 ಚಲನಚಿತ್ರಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.