ದೇಶ

'ತಪ್ಪಾಯ್ತು ಪ್ಲೀಸ್ ಬಿಟ್ ಬಿಡಿ': ಹಿಂದೂ ಯುವತಿಯ ಹೊಟೆಲ್`ಗೆ ಎಳೆದೊಯ್ದ ಸಲ್ಮಾನ್, ಪೊಲೀಸ್ ಎನ್ಕೌಂಟರ್, ಬಂಧನ! Video

'ತಪ್ಪಾಯ್ತು ಪ್ಲೀಸ್ ಬಿಟ್ ಬಿಡಿ': ಹಿಂದೂ ಯುವತಿಯ ಹೊಟೆಲ್`ಗೆ ಎಳೆದೊಯ್ದ ಸಲ್ಮಾನ್, ಪೊಲೀಸ್ ಎನ್ಕೌಂಟರ್, ಬಂಧನ! Video
ಮೀರತ್ ಅತ್ಯಾಚಾರ-ಅಪಹರಣ ಪ್ರಕರಣ
Published On :

ಮೀರತ್: ಕಾಪಾಡಿ.. ಕಾಪಾಡಿ ಎಂದು ಕೂಗುತ್ತಾ ಹೋಟೆಲ್‌ನಿಂದ ಹೊರಗೆ ಓಡಿಬಂದ ಯುವತಿಯನ್ನು ವ್ಯಕ್ತಿಯೊಬ್ಬ ಬೆನ್ನಟ್ಟಿ ಹಿಡಿದು ಮತ್ತೆ ಒಳಗೆ ಎಳೆದೊಯ್ಯಲು ಯತ್ನಿಸಿದ ಆರೋಪಿಯನ್ನು ಉತ್ತರ ಪ್ರದೇಶದ ಮೀರತ್‌ ಪೊಲೀಸರು ಎನ್ಕೌಂಟರ್ ನಲ್ಲಿ ಬಂಧಿಸಿದ್ದಾರೆ.

ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಹೋಟೆಲ್‌ನಲ್ಲಿ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮೊಹಮ್ಮದ್ ಸಲ್ಮಾನ್‌ನನ್ನು ಬುಧವಾರ ಪೊಲೀಸರು ಎನ್‌ಕೌಂಟರ್ ಬಳಿಕ ಬಂಧಿಸಿದ್ದಾರೆ.

ಮೀರತ್‌ನ ಅಬು ಲೇನ್‌ ಪ್ರದೇಶದ ಹೋಟೆಲ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಗಾಜಿಯಾಬಾದ್‌ನ 24 ವರ್ಷದ ಯುವತಿ ಹೋಟೆಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ರಸ್ತೆಗೆ ಓಡಿಬಂದಾಗ, ಆರೋಪಿ ಸಲ್ಮಾನ್ ಆಕೆಯನ್ನು ಬೆನ್ನಟ್ಟಿ ಹಿಡಿದು ಮತ್ತೆ ಹೋಟೆಲ್ ಒಳಗೆ ಎಳೆದೊಯ್ಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

ಮಹಿಳೆಯ ಕೂಗಾಟ ಕೇಳಿ ಸ್ಥಳೀಯ ಅಂಗಡಿ ಮಾಲೀಕರು ಹಾಗೂ ದಾರಿಹೋಕರು ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವರು ಹೋಟೆಲ್ ಒಳಗೆ ಹೋಗಿ ಮಹಿಳೆಯನ್ನು ರಕ್ಷಿಸಲು ಯತ್ನಿಸಿದರೂ, ಹೋಟೆಲ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ ಎನ್ನಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆ ಆರೋಪಿ ಹೋಟೆಲ್‌ನ ಮೇಲ್ಛಾವಣಿಗೆ ತೆರಳಿ ಅಲ್ಲಿಂದ ಜಿಗಿದು ಪರಾರಿಯಾಗಿದ್ದ ಎನ್ನಲಾಗಿದೆ.

ಹೋಟೆಲ್‌ನಲ್ಲಿ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಆರೋಪ

ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ಆಕೆ ಗಾಜಿಯಾಬಾದ್‌ನ ನಿವಾಸಿಯಾಗಿದ್ದು, ಸಲ್ಮಾನ್‌ನನ್ನು ಸುಮಾರು ಎರಡರಿಂದ ಎರಡೂವರೆ ವರ್ಷಗಳಿಂದ ಪರಿಚಯ ಹೊಂದಿದ್ದರು. ಈ ಹಿಂದೆ ಇಬ್ಬರೂ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಇತ್ತೀಚೆಗೆ ಮಹಿಳೆಯ ಕುಟುಂಬ ಆಕೆಯ ಮದುವೆಯನ್ನು ಬೇರೆ ವ್ಯಕ್ತಿಯೊಂದಿಗೆ ನಿಶ್ಚಯಿಸಿತ್ತು.

ಸೋಮವಾರ ಸ್ನೇಹಿತೆಯನ್ನು ಭೇಟಿಯಾಗಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಸಲ್ಮಾನ್ ತನ್ನನ್ನು ಹೋಟೆಲ್‌ಗೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಬಳಿಕ ಕೊಠಡಿಯಲ್ಲಿ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮೊಬೈಲ್ ಫೋನ್‌ ಕಸಿದುಕೊಂಡಿದ್ದ ಆತ, ನಂತರ ವಾಪಸ್ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ನನಗೆ ಸಿಗದೇ ಇರುವುದು ಯಾರಿಗೂ ಸಿಗಬಾರದು

ಯುವತಿಯನ್ನು ಹೊಟೆಲ್ ನಲ್ಲಿ ಕೂಡಿ ಹಾಕಿದ್ದ ಆರೋಪಿ ಸಲ್ಮಾನ್, ತನಗೆ ಸಿಗದ ಯುವತಿ ಬೇರಾರಿಗೂ ಸಿಗಬಾರದು ಎಂದು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಸಂತ್ರಸ್ತ ಯುವತಿ ಹೋಟೆಲ್‌ನಿಂದ ತಪ್ಪಿಸಿಕೊಂಡು ಹೊರಬಂದಾಗ ಸಲ್ಮಾನ್ ಮತ್ತೆ ತನ್ನನ್ನು ಹಿಡಿದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ತಿಳಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ, ಅಕ್ರಮ ಬಂಧನ, ಹಲ್ಲೆ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಲ್ಮಾನ್‌ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ಬುಧವಾರ ನರಹೇಡಾ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್‌ ಬಳಿ ಆರೋಪಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಲೋಹಿಯಾ ನಗರ ಮತ್ತು ಸದರ್ ಬಜಾರ್ ಠಾಣೆಗಳ ಪೊಲೀಸರು ಸ್ಥಳಕ್ಕೆ ತೆರಳಿ ಸುತ್ತುವರಿದಾಗ, ಆರೋಪಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಬಿಬಿಜಿಟಿಎಸ್ ಮೂರ್ತಿ ತಿಳಿಸಿದ್ದಾರೆ.

ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಮೀಪದ ಸೇತುವೆ ಏರಿದ್ದಾನೆ. ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಪ್ಪಾಯ್ತು ಬಿಟ್ ಬಿಡಿ ಪ್ಲೀಸ್

ಇನ್ನು ಪೊಲೀಸ್ ಬಂಧನ ವೇಳೆ ಗುಂಡೇಟು ತಿಂದು ಗಾಯಗೊಂಡ ಆರೋಪಿ ಸಲ್ಮಾನ್, ತಪ್ಪಾಯ್ತು ಸಾರ್ ಬಿಟ್ ಬಿಡಿ.. ಇನ್ಯಾವತ್ತೂ ಇಂತಹ ತಪ್ಪು ಮಾಡಲ್ಲ. ದಯವಿಟ್ಟು ಬಿಟ್ಟು ಬಿಡಿ ಎಂದು ಗೋಗರೆಯುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಹೊಟೆಲ್ ಸೀಜ್, ಮ್ಯಾನೇಜರ್, ಮಾಲೀಕರ ಬಂಧನ

ಘಟನೆ ನಡೆದ ಹೋಟೆಲ್‌ ಅನ್ನು ಪೊಲೀಸರು ಸೀಲ್ ಮಾಡಿದ್ದು, ಹೋಟೆಲ್ ಮ್ಯಾನೇಜರ್ ಹಾಗೂ ಆರೋಪಿಯ ಕೆಲವು ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಹೋಟೆಲ್‌ನಲ್ಲಿ ಮಹಿಳೆಯ ವಾಸ್ತವ್ಯದ ದಾಖಲೆಗಳಲ್ಲಿ ಲೋಪಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.