ಟಾಕ್ಸಿಕ್ ವಿಷಯದಲ್ಲಿ ಪೇಯ್ಡ್ ಪ್ರಮೋಷನ್! ಯಶ್ ಸಿನಿಮಾ ವಿತರಣೆಯಿಂದ ನಷ್ಟವಲ್ಲ, ಲಾಭವಾಗಿದೆ ಎಂದ ವಿತರಕ ದಿಲ್ ರಾಜು

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ವಿತರಣೆಯಿಂದ ತಮಗೆ ಭಾರಿ ನಷ್ಟವಾಗಿದೆ ಎಂಬ ಸುದ್ದಿಗಳು ಕೇವಲ ಸುಳ್ಳು ಪ್ರಚಾರವಾಗಿದ್ದು, ವಿತರಣೆಯಿಂದ ತಮಗೆ ಲಾಭವೇ ಆಗಿದೆ ಎಂದು ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Dil Raju Clarifies Toxic Movie Distribution Profits Amid Heavy Loss Rumors
ವಿತರಕ ದಿಲ್ ರಾಜು ಹಾಗೂ ನಟ ಯಶ್Online Desk
Updated on: 

ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಿಲ್ಲ ಎಂಬ ಚರ್ಚೆಗಳು ಜೋರಾಗಿದ್ದವು. ಇದರ ಬೆನ್ನಲ್ಲೇ, ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಿತರಕ ದಿಲ್ ರಾಜು ಅವರಿಗೆ ಈ ಚಿತ್ರದಿಂದ ಭಾರೀ ಆರ್ಥಿಕ ನಷ್ಟವಾಗಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ಸ್ವತಃ ದಿಲ್ ರಾಜು ಅವರೇ ತೆರೆ ಎಳೆದಿದ್ದು, ತಮಗೆ ನಷ್ಟವಾಗುವ ಬದಲು ಲಾಭವೇ ಆಗಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಾಗಾದರೆ ದಿಲ್ ರಾಜು ಕೊಟ್ಟ ಆ ಸ್ಪಷ್ಟನೆ ಏನು? ಆ ಕುರಿತ ವರದಿ ಇಲ್ಲಿದೆ:

ಟಾಕ್ಸಿಕ್ ವಿತರಣೆಯಿಂದ ನಷ್ಟವಲ್ಲ, ಲಾಭವಾಗಿದೆ

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡಿರುವ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಎಂಬ ಮಾತು ನಿಜ. ಆದರೆ ಈ ಕಾರಣಕ್ಕೆ ತೆಲುಗು ರಾಜ್ಯಗಳ (ಆಂಧ್ರಪ್ರದೇಶ ಮತ್ತು ತೆಲಂಗಾಣ) ವಿತರಣೆ ಹಕ್ಕುಗಳನ್ನು ₹120 ಕೋಟಿಗೆ ಖರೀದಿಸಿ ದಿಲ್ ರಾಜು ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆ ಎದುರಾದಾಗ ದಿಲ್ ರಾಜು ತಮ್ಮದೇ ಶೈಲಿಯಲ್ಲಿ ಉತ್ತರಿಸಿ, "ಟಾಕ್ಸಿಕ್ ಸಿನಿಮಾದಿಂದ ತಮಗೆ ಯಾವುದೇ ನಷ್ಟವಾಗಿಲ್ಲ, ಬದಲಾಗಿ ವಿತರಣೆಯ ಕಮಿಷನ್ ರೂಪದಲ್ಲಿ ಉತ್ತಮ ಲಾಭ ದೊರೆತಿದೆ" ಎಂದು ಹೇಳಿದ್ದಾರೆ.

Dil Raju Clarifies Toxic Movie Distribution Profits Amid Heavy Loss Rumors
'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!

ಟಾಕ್ಸಿಕ್ ವಿಷಯದಲ್ಲಿ ಪೇಯ್ಡ್ ಪ್ರಮೋಷನ್!

ಮುಂದುವರೆದು, ತಾವು ಟಾಕ್ಸಿಕ್ ಚಿತ್ರವನ್ನು ವಿತರಿಸಿದ ರೀತಿಯಲ್ಲಿಯೇ ರಾಮಾಯಣ ಸಿನಿಮಾವನ್ನೂ ವಿತರಣೆ ಮಾಡಿದ್ದೇನೆ ಎಂದು ದಿಲ್ ರಾಜು ಉದಾಹರಣೆ ನೀಡಿದ್ದಾರೆ. ಎರಡೂ ಸಿನಿಮಾಗಳ ವಿತರಣೆಯಲ್ಲಿ ತಮ್ಮ ಪಾತ್ರ ಕಮಿಷನ್ ಆಧಾರಿತವಾಗಿತ್ತು. ಹೀಗಾಗಿ ಸಿನಿಮಾ ನಿರೀಕ್ಷಿತ ಫಲಿತಾಂಶ ನೀಡದಿದ್ದರೂ ತಮಗೆ ನಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಿತ್ರ ಗೆದ್ದರೂ ಸೋತರೂ ವಿತರಕರಿಗೆ ಕಮಿಷನ್ ಸಿಗುವ ವ್ಯವಸ್ಥೆ ಇರುವುದರಿಂದ ನಷ್ಟದ ಪ್ರಶ್ನೆಯೇ ಇಲ್ಲ ಎಂದರು.

ಇದರೊಂದಿಗೆ, ಟಾಕ್ಸಿಕ್ ಚಿತ್ರದ ವಿತರಣೆಯಿಂದ ತಾವು ನಷ್ಟ ಅನುಭವಿಸಿದ್ದೇನೆ ಎಂಬ ರೀತಿಯಲ್ಲಿ ಹಣ ನೀಡಿ ನಕಾರಾತ್ಮಕ ಪ್ರಚಾರ ಮಾಡಿಸಲಾಗಿತ್ತು ಎಂದು ಆರೋಪಿಸಿದ ಅವರು, ಚಿತ್ರರಂಗದಲ್ಲಿ ಇಂತಹ ಸುಳ್ಳು ಸುದ್ದಿಗಳು ಹೊಸದಲ್ಲ, ಆದರೆ ತಮ್ಮ ವಿಚಾರದಲ್ಲಿ ಸತ್ಯವನ್ನು ಜನರ ಮುಂದೆ ಇಡಲು ಮುಂದಾಗಿದ್ದೇನೆ ಎಂದರು.

ಇದೆ ವೇಳೆ, ತಮ್ಮ ವೃತ್ತಿಜೀವನದ ಬಗ್ಗೆಯೂ ಮಾತನಾಡಿದ ದಿಲ್ ರಾಜು, ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಈ ಅವಧಿಯಲ್ಲಿ ಸಾಕಷ್ಟು ಯಶಸ್ಸು ಮತ್ತು ಸೋಲುಗಳನ್ನು ಕಂಡಿದ್ದೇನೆ. ಸೋಲು ಎದುರಾದಾಗ ನಿರಾಶರಾಗುವುದಿಲ್ಲ, ಯಶಸ್ಸು ಸಿಕ್ಕಾಗ ಅತಿಯಾಗಿ ಸಂಭ್ರಮಿಸುವುದೂ ಇಲ್ಲ ಎಂದ ಅವರು, ಚಿತ್ರರಂಗದಲ್ಲಿ ಇರುವವರೆಗೂ ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X